Ad Widget .

ಪ್ರವಾಸಿಗರಿಗೆ ಸಿಹಿ ಸುದ್ದಿ/ ಮುರ್ಡೇಶ್ವರದಲ್ಲಿ ಸೀ ವಾಕ್

ಸಮಗ್ರ ನ್ಯೂಸ್: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ಕಡಲತೀರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಸೀವಾಕ್ ಹಾಗೂ ಪ್ಯಾರಸೆಲಿಂಗ್ ಎಂಬ ಎರಡು ಹೊಸ ಜಲಕ್ರೀಡೆ ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೊದಲ ಬಾರಿಗೆ ಸೀವಾಕ್ ಅಳವಡಿಸಲಾಗಿದ್ದು, ಇದೀಗ ಮುರ್ಡೇಶ್ವರದಲ್ಲಿ ರಾಜ್ಯದ ಎರಡನೇ ಸೀವಾಕ್ ಅನುಭವ ಪಡೆಯಲು ಪ್ರವಾಸಿಗರಿಗೆ ಅವಕಾಶವಾಗುತ್ತಿದೆ.

Ad Widget . Ad Widget .

ದೇಶ ವಿದೇಶಗಳಿಂದ ಪ್ರವಾಸಿಗರು ಇಂದಿಗೂ ಇಲ್ಲಿಗೆ ಆಗಮಿಸಿ ನೇತ್ರಾಣಿ ಹವಳದ ದ್ವೀಪದ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಅನುಭವ ಪಡೆದು ಹೋಗುತ್ತಿದ್ದಾರೆ. ಜಿಲ್ಲೆಯ ಗೋಕರ್ಣ ಕಡಲತೀರದಲ್ಲಿ ಇರುವ ಪ್ಯಾರಾಸೆಲಿಂಗ್ ಕ್ರೀಡೆಯನ್ನು ಮುರ್ಡೇಶ್ವರದಲ್ಲಿ ಆರಂಭಿಸಿರುವ ಪ್ರವಾಸೋದ್ಯಮ ಇಲಾಖೆ, ಗಗನಕ್ಕೆ ಹಾರಿ ಮುರುಡೇಶ್ವರದ ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿ ಹೊಸ ರೋಮಾಂಚನ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

Ad Widget . Ad Widget .

ಈ ಕುರಿತು ಮಾಹಿತಿ ನೀಡಿರುವ ಓಶಿಯನ್ ಅಡ್ಡೆಂಚರ್ಸ್ ಕಂಪೆನಿಯ ಮಾಲೀಕ ವೆಂಕಟೇಶ್, “ಅಂದಾಜು 1 ಕೋಟಿ ಮೊತ್ತದಲ್ಲಿ 100 ಮೀಟರ್ ಉದ್ದವಿರುವ ಸೀವಾಕ್‍ನ್ನು ಅಳವಡಿಸಲಾಗಿದೆ. ಏಕಕಾಲಕ್ಕೆ ಸುಮಾರು 100 ಮಂದಿ ಪ್ರವಾಸಿಗರು, 10 ಜೀವರಕ್ಷಕ ಸಿಬ್ಬಂದಿ ಇದರ ಮೇಲೆ ನಡೆದು ಸಮುದ್ರ ವಿಹಂಗಮ ನೋಟವನ್ನು ವೀಕ್ಷಿಸಬಹುದಾಗಿದೆ” ಎಂದು ತಿಳಿಸಿದರು.

Leave a Comment

Your email address will not be published. Required fields are marked *