ಮಂಗಳೂರು: ಬೋಟ್ ಕಾರ್ಮಿಕರ ನಡುವೆ ಜಗಳ| ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್: ಕೇರಳ ಮೂಲದ ಬೋಟ್ ಕಾರ್ಮಿಕ ಮತ್ತೊಬ್ಬ ಕಾರ್ಮಿಕನಿಗೆ ಇರಿದು ಹತ್ಯೆ ಮಾಡಿದ ಘಟನೆ ಪಣಂಬೂರು ಠಾಣೆ ವ್ಯಾಪ್ತಿಯ ತಣ್ಣೀರುಬಾವಿಯಲ್ಲಿ ನಡೆದಿದೆ.

Ad Widget ... ..

ಕೊಲ್ಲಂ ಮೂಲದ ಬಿನು (41) ಕೊಲೆಯಾದ ದುರ್ದೈವಿ, ಮತ್ತು ತಳಿಪರಂಬ ನಿವಾಸಿ ಜಾನ್ಸನ್ ಬಿನೋಯ್ (52) ತಣ್ಣೀರುಬಾವಿಯಲ್ಲಿ ಬೋಟ್ ರಿಪೇರಿ ಕೆಲಸದಲ್ಲಿ ತೊಡಗಿದ್ದರು. ಇಬ್ಬರು ಸ್ಥಳೀಯವಾಗಿ ಪ್ರತ್ಯೇಕವಾಗಿ ವಾಸವಿದ್ದರು. ಡಿ. 9ರಂದು ಸಂಜೆ ಕುಡಿದ ಮತ್ತಿನಲ್ಲಿ ಇಬ್ಬರು ಕೂಡ ಜಗಳಾಡಿಕೊಂಡಿದ್ದರು.

Ad Widget

ಆದರೆ ಆ ಬಳಿಕ, ರಾತ್ರಿ ವೇಳೆಗೆ ಬಿನೋಯ್ ತನ್ನ ರೂಮಿನಲ್ಲಿ ಮಲಗಿದ್ದಾಗ ಜಾನ್ಸನ್ ಕುಡಿದ ಮತ್ತಿನಲ್ಲಿ ಅಲ್ಲಿಗೆ ಹೋಗಿ ಬಿನೋಯ್ ಮೇಲೆ ಇರಿದ ಪರಿಣಾಮ ಬಿನೋಯ್ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಿನೋಯ್ ಸಾವನ್ನಪ್ಪಿದ್ದನ್ನು ತಿಳಿದು ಜಾನ್ಸನ್ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *