Ad Widget .

ಹೆಚ್ಚುತ್ತಿರುವ ವಾಯುಮಾಲಿನ್ಯ/ ಸಿಲಿಕಾನ್ ಸಿಟಿಯಲ್ಲಿ ಆರಂಭಗೊಂಡ ಊಬರ್ ಗ್ರೀನ್

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರಿನಲ್ಲಿ ಎಲೆಕ್ಟಿಕ್ ವಾಹನ ‘ಊಬರ್ ಗ್ರೀನ್’ ಸೇವೆಯನ್ನು ಪ್ರಾರಂಭಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಉಬರ್ ಗ್ರೀನ್‍ಗೆ ಚಾಲನೆ ನೀಡಲಾಗಿದೆ. ನ.30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್ 2023ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಉಬರ್ ಗ್ರೀನ್‍ಗೆ ಚಾಲನೆ ನೀಡಿದ್ದಾರೆ.

Ad Widget . Ad Widget .

ಈ ಸೇವೆಯಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಊಬರ್ ಗ್ರೀನ್ ವಾಹನದಲ್ಲಿ ಪ್ರಯಾಣ ಮಾಡಲಿದ್ದಾರೆ. ಇಂದಿನಿಂದಲೇ ಮಧ್ಯ ಬೆಂಗಳೂರು ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಊಬರ್ ಗ್ರೀನ್ ಸೇವೆ ಲಭ್ಯವಿದ್ದು, ಶೀಘ್ರದಲ್ಲೇ ಇದನ್ನು ನಗರದ ಹೆಚ್ಚಿನ ಭಾಗಗಳಿಗೆ ವಿಸ್ತರಿಸಲಾಗುವುದು. ಎಂದು ಊಬರ್ ಕಂಪನಿ ತಿಳಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *