Ad Widget .

ಕಾರ್ ಡ್ರೈವ್ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಟಿಪ್ಸ್ ಫಾಲೋ ಮಾಡಿ

ಸಮಗ್ರ ನ್ಯೂಸ್:ಕಾರಿನಲ್ಲಿ ದೂರ ಪ್ರಯಾಣಿಸುವಾಗ ಆ ಪ್ರಯಾಣ ನಮಗೆ ಆರಾಮದಾಯಕವಾಗಿರಬೇಕೆಂದು ಬಯಸುತ್ತೇವೆ. ಈ ಆರಾಮದಾಯಕ ಪ್ರಯಾಣಕ್ಕಾಗಿ ಕಾರಿನ ಇಡೀ ಅವಸ್ಥೆಯ ಬಗ್ಗೆ ಒಮ್ಮೆ ಯೋಚಿಸುತ್ತೇವೆ ಮತ್ತು ಅದರಲ್ಲಿ ಏನಾದರೂ ಕೊರತೆ ಇದ್ದರೆ, ಮೊದಲು ಮೆಕ್ಯಾನಿಕ್ ಬಳಿ ಅದನ್ನು ಒಯ್ದು ಸರಿಪಡಿಸಿಕೊಂಡು ಬರುತ್ತೇವೆ. ಹೀಗೆ ಸರಿಪಡಿಸಿಕೊಳ್ಳುವ ಅನೇಕ ವಿಷಯಗಳಲ್ಲಿ ಕಾರಿನ ಸ್ಟೇರಿಂಗ್, ಚಕ್ರಗಳು(Wheels) ಮತ್ತು ಕುಳಿತುಕೊಳ್ಳುವ ಆಸನಗಳು ಸರಿಯಾಗಿರುವುದು ಸಹ ತುಂಬಾನೇ ಮುಖ್ಯವಾಗುತ್ತದೆ.

Ad Widget . Ad Widget .

ಹೌದು, ನಿಮ್ಮ ಕಾರಿನ ಸ್ಟೇರಿಂಗ್ ವೀಲ್ ಮತ್ತು ಸೀಟಿನ ಸರಿಯಾದ ಹೊಂದಾಣಿಕೆಯು ನಿಮ್ಮ ಡ್ರೈವಿಂಗ್ ಸಮಯದಲ್ಲಿ ಆರಾಮಕ್ಕಾಗಿ ಮಾತ್ರವಲ್ಲದೆ ನಿಮ್ಮ ವಾಹನದ ಸುರಕ್ಷತೆ ಮತ್ತು ಅತ್ಯುತ್ತಮ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳವುದು ಉತ್ತಮ. ಈ ಸಂಪೂರ್ಣವಾದ ಸೆಟಪ್ ಅನ್ನು ಸರಿಹೊಂದಿಸುವ ಮೂಲಕ ಸರಿಯಾದ ಡ್ರೈವಿಂಗ್ ಸ್ಥಾನವನ್ನು ಖಾತ್ರಿ ಪಡಿಸಿಕೊಳ್ಳುವ ಮೂಲಕ, ಸುರಕ್ಷಿತ ಡ್ರೈವಿಂಗ್ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

Ad Widget . Ad Widget .

ಕಾರಿನ ಸ್ಟೇರಿಂಗ್ ವೀಲ್ ಮತ್ತು ಸೀಟ್ ಅನ್ನು ಹೇಗೆ ಹೊಂದಿಸುವುದು ಎಂಬುದರ ಕುರಿತು ಇಲ್ಲಿದೆ ಫುಲ್ ಡಿಟೈಲ್ಸ್:

  1. ಒಬ್ಬ ಚಾಲಕ ಕಾರಿನಲ್ಲಿ ಕುಳಿತುಕೊಂಡಾಗ ಆರಾಮದಾಯಕವಾದ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಬೇಕು. ಡ್ರೈವರ್ ಸೀಟ್‌ನಲ್ಲಿ ನಿಮ್ಮ ಬೆನ್ನನ್ನು ಸೀಟ್‌ಬ್ಯಾಕ್‌ಗೆ ವಿರುದ್ಧವಾಗಿ ಮತ್ತು ನಿಮ್ಮ ಪಾದಗಳನ್ನು ಪೆಡಲ್‌ಗಳ ಮೇಲೆ ಇರಿಸಿ.
  2. ಸ್ಟೀರಿಂಗ್ ಕಾಲಮ್ ಅಡಿಯಲ್ಲಿ ಇರುವ ಲಿವರ್ ಅನ್ನು ಎಳೆಯುವ ಮೂಲಕ ಸ್ಟೀರಿಂಗ್ ಚಕ್ರವನ್ನು ಸಡಿಲಗೊಳಿಸಿ. ಎತ್ತರವನ್ನು ಹೊಂದಿಸಿಕೊಳ್ಳಿ ಮತ್ತು ನಿಮ್ಮ ಕೈಗಳು ನಿಮ್ಮ ಮೊಣಕೈಗಳಲ್ಲಿ ಸ್ವಲ್ಪ ಬೆಂಡ್ ಮಾಡುವುದರೊಂದಿಗೆ ಸ್ಟೇರಿಂಗ್ ಅನ್ನು ಆರಾಮವಾಗಿ ಹಿಡಿಯಬೇಕು.
  3. ಮುಂದಿನ ರಸ್ತೆಯನ್ನು ನೋಡುವುದಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಕಾರಿನ ಚಾಲಕರು ತಮ್ಮ ಸೀಟನ್ನು ಮತ್ತು ಸ್ಟೇರಿಂಗ್ ಅನ್ನು ಹೊಂದಿಸಿಕೊಳ್ಳಬೇಕು.
  4. ರಸ್ತೆ ಮತ್ತು ರಸ್ತೆ ಫಲಕಗಳ ನಿಮ್ಮ ನೋಟವನ್ನು ತಡೆಯುವುದನ್ನು ತಪ್ಪಿಸಲು ಸ್ಟೇರಿಂಗ್ ಚಕ್ರದ ಮೇಲ್ಭಾಗವು ನಿಮ್ಮ ಭುಜಗಳಿಗಿಂತ ಎತ್ತರವಾಗಿರಬಾರದು.
  5. ಮೊದಲಿಗೆ ಕಾರಿನ ಆಸನವನ್ನು ಸರಿಯಾಗಿ ಹೊಂದಿಸಿಕೊಳ್ಳಿ
  6. ಈಗ, ಕಾರಿನಲ್ಲಿರುವ ಆಸನದ ಹೊಂದಾಣಿಕೆಗೆ ಬರುವುದಾದರೆ, ನಿಮ್ಮ ಕಾಲುಗಳನ್ನು ಹೆಚ್ಚು ಚಾಚದೆ ಅಥವಾ ಇಕ್ಕಟ್ಟಾದ ಭಾವನೆಯಿಲ್ಲದೆ ನೀವು ಪೆಡಲ್‌ಗಳನ್ನು ಸಂಪೂರ್ಣವಾಗಿ ಒತ್ತುವಂತಿರಬೇಕು.
  7. ತುಂಬಾ ಹೊತ್ತಿನವರೆಗೂ ಡ್ರೈವ್ ಮಾಡಿದರೆ ನಿಮ್ಮ ಕಾಲುಗಳು ನೋವಾಗಬಾರದು ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಳ್ಳಲು ಕಾರಿನಲ್ಲಿರುವ ಸೀಟ್ ವ್ಯವಸ್ಥೆಯನ್ನು ಹೊಂದಿಸಿಕೊಳ್ಳಿ.
  8. ಪೆಡಲ್‌ಗಳನ್ನು ಸಂಪೂರ್ಣವಾಗಿ ಒತ್ತಿದಾಗ ನಿಮ್ಮ ಮೊಣಕಾಲುಗಳು ಸ್ವಲ್ಪ ಬೆಂಡ್ ಆಗಿರುವಂತೆ ನೋಡಿಕೊಳ್ಳಿ.
  9. ಎತ್ತರ ಹೊಂದಾಣಿಕೆಗಾಗಿ ನೀವು ರಸ್ತೆ ಮತ್ತು ಸುತ್ತಮುತ್ತಲಿನ ಸ್ಪಷ್ಟ ನೋಟವನ್ನು ಹೊಂದುವವರೆಗೆ ಆಸನವನ್ನು ಮೇಲಕ್ಕೆತ್ತಿ ಅಥವಾ ಅಂತರವನ್ನು ಕಡಿಮೆ ಮಾಡಿ.
  10. ನಿಮ್ಮ ತಲೆಯನ್ನು ಹೆಡ್‌ರೆಸ್ಟ್ ಮತ್ತು ಸೀಲಿಂಗ್ ನಡುವೆ ಆರಾಮವಾಗಿ ಇರಿಸಬೇಕು. ಅದಕ್ಕೆ ಸೂಕ್ತವಾದ ಬೆಂಬಲವನ್ನು ಒದಗಿಸಲು ಮತ್ತು ಅಪಘಾತದ ಸಂದರ್ಭದಲ್ಲಿ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ತಲೆಯ ಹಿಂಭಾಗದಲ್ಲಿ ಹೆಡ್‌ರೆಸ್ಟ್ ಅನ್ನು ಇರಿಸಿಕೊಳ್ಳಿ.

ಲಾಂಗ್ ಡ್ರೈವ್‌ಗಿಂತಲೂ ಮುಂಚೆ ಚಿಕ್ಕ ಡ್ರೈವ್ ಹೋಗಿ ಈ ಹೊಂದಾಣಿಕೆಯನ್ನು ಪರೀಕ್ಷಿಸಿ. ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಲು ಸೀಟ್‌ಬ್ಯಾಕ್‌ಗೆ ವಿರುದ್ಧವಾಗಿ ನೀವು ಬೆನ್ನನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಿ. ಇದು ಲಾಂಗ್ ಡ್ರೈವ್‌ ಸಮಯದಲ್ಲಿ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Leave a Comment

Your email address will not be published. Required fields are marked *