Ad Widget .

ಹಾಸನಾಂಬೆ ದೇಗುಲದಲ್ಲಿ ಕರೆಂಟ್ ಅವಾಂತರ..!ಕರೆಂಟ್ ಶಾಕ್ ಗೆ ಕುಸಿದು ಬಿದ್ದ ಜನ

ಸಮಗ್ರ ಸಮಾಚಾರ: ಹಾಸನದ ಹಾಸನಾಂಬೆ ದೇವಾಲಯ ಬಳಿ ಕರೆಂಟ್ ಶಾಕ್ ವಿಚಾರವಾಗಿ ಅಲ್ಲೋಲ ಕಲ್ಲೋಲವಾಗಿದೆ. ದಿಢೀರ್ ನೂಕು ನುಗ್ಗಲು ಆರಂಭವಾಗಿದೆ. ಧರ್ಮ‌ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರು ನರಳಾಡುತ್ತಿದ್ದಾರೆ. ಹಾಸನಾಂಬೆ ದರ್ಶನಕ್ಕೆಂದು ತೆರಳಿದ್ದ ಭಕ್ತರಿಗೆ ಕರೆಂಟ್​ ಶಾಕ್​ ತಗುಲಿದೆ. ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಉಂಟಾಗಿದೆ.

Ad Widget . Ad Widget .

ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರಿಂದ ಕಾಲ್ತುಳಿತ ಕೂಡ ಉಂಟಾಗಿದೆ. ಇದರಿಂದಾಗಿ ಹಲವಾರು ಮಹಿಳೆಯರು ನರಳಾಡುವಂತಾಗಿದೆ. ಹಾಸನಾಂಬೆ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿದ್ದರಿಂದ ಈ ರೀತಿ ಆಗಿದೆ. ಕೆಲವರನ್ನು ಹೊರಗೆಳೆದು ಕರೆತಂದ ಸ್ಥಳೀಯರು ಅವರನ್ನು ಸೇವ್​ ಮಾಡಲು ನೋಡಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಬಂದು ಅವಾಂತರ ಆಗಿದೆ. ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನಕ್ಕಾಗಿ ಮಹಿಳೆಯರು ನೂಕು ನುಗ್ಗಲು ಮಾಡಿಕೊಂಡಿದ್ದಾರೆ. ಹಾಸನದ ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನ ಬಳಿ ಈ ಘಟನೆ ನಡೆದಿದೆ.

Ad Widget . Ad Widget .

ದೇವಸ್ಥಾನದಲ್ಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲ, ಏನು ಪ್ರಯೋಜನವಿಲ್ಲ, ಸ್ವಯಂಸೇವಕರು ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮಳೆಯಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.

Leave a Comment

Your email address will not be published. Required fields are marked *