Ad Widget .

ದೆಹಲಿ ವಾಯುಮಾಲಿನ್ಯ/ ವಾಹನಗಳಿಗೆ ಬೆಸ-ಸಮ ನಿಯಮ, ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಇದೀಗ ದೆಹಲಿ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನವೆಂಬರ್ 13ರಿಂದ 20ರವರೆಗೆ ವಾಹನಗಳಿಗೆ ಬೆಸ-ಸಮ ನಿಯಮ ಜಾರಿಗೆ ಬರಲಿದ್ದು, 10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

Ad Widget . Ad Widget .

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಪಟಾಕಿಗಳನ್ನು ನಿಷೇಧ ಮಾಡುವುದು ಮತ್ತು ಸ್ಮಗ್ ಗನ್‍ಗಳನ್ನು ಅಳವಡಿಸುವುದು ಸೇರಿದಂತೆ ಹಲವು ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಡೀಸೆಲ್ ಟ್ರಕ್‍ಗಳ ಪ್ರವೇಶಕ್ಕೆ ಮತ್ತು ನಗರದಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದು, ಇದೀಗ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.

Ad Widget . Ad Widget .

ಸಮ-ಬೆಸ ನಿಯಮದ ಅಡಿಯಲ್ಲಿ ಸಮ ಸಂಖ್ಯೆಯಲ್ಲಿ ಕೊನೆಗೊಳ್ಳುವ ವಾಹನಗಳಿಗೆ ಒಂದು ದಿನ ಅನುಮತಿ ನೀಡಿದರೆ, ಬೆಸ ಸಂಖ್ಯೆಯ ವಾಹನಗಳಿಗೆ ಇನ್ನೊಂದು ಅನುಮತಿ ನೀಡಲಾಗುತ್ತದೆ. ನವೆಂಬರ್ 20ರ ನಂತರ ಈ ನಿಯಮದ ಅಗತ್ಯತೆಯನ್ನು ನೋಡಿಕೊಂಡು ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.

Leave a Comment

Your email address will not be published. Required fields are marked *