October 2023

13 ಮಂದಿ ನ್ಯಾಯಾಧೀಶರ ನೇಮಕಾತಿ/ ಕೊಲಿಜಿಯಂ ಶಿಫಾರಸು

ಸಮಗ್ರ ನ್ಯೂಸ್: ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲು 13 ಮಂದಿ ವಕೀಲರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಅವರೂ ಸದಸ್ಯರಾಗಿರುವ ಕೊಲಿಜಿಯಂ ಸಮಿತಿಯು,ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ವಕೀಲರಾದ ಎನ್. ಉನ್ನೀಕೃಷ್ಣನ್ ಹಾಗೂ ಕೌಶಿಕ್ ಗೋಸ್ವಾಮಿ ಅವರನ್ನು ನೇಮಿಸಿ ಎಂದು ಶಿಫಾರಸು ಮಾಡಿದೆ. ಉತ್ತರಾಖಂಡ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ವಕೀಲರಾದ ಸಿದ್ದಾರ್ಥ್ ಶಾ ಹಾಗೂ ಅಲೋಕ್ ಮಹ್ರಾ […]

13 ಮಂದಿ ನ್ಯಾಯಾಧೀಶರ ನೇಮಕಾತಿ/ ಕೊಲಿಜಿಯಂ ಶಿಫಾರಸು Read More »

ಸುಳ್ಯ: ಕೆ.ವಿಜಿ. ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಯನ್ನು ಬೆದರಿಸಿದ ಆರೋಪ|ಕೆ.ವಿ.ಚಿದಾನಂದ ಸಹಿತ 5 ಮಂದಿಗೆ ಜಾಮೀನು

ಸಮಗ್ರ ನ್ಯೂಸ್:‌ ಸುಳ್ಯದ ಕೆ.ವಿಜಿ ಪಾಲಿಟೆಕ್ನಿಕ್‌ ಕಾಲೇಜಿಗೆ ಅಕ್ಟೋಬರ್ 5ರಂದು ಅಕ್ರಮ ಪ್ರವೇಶ ಮಾಡಿ ಅಲ್ಲಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ಬೆದರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಕೆ.ವಿ.ಚಿದಾನಂದ ಸಹಿತ 5 ಮಂದಿ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದು ಅವರೆಲ್ಲರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡುವುದಾಗಿ ತಿಳಿದುಬಂದಿದೆ. ಆಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಡಾ. ಜ್ಯೋತಿ ರೇಣುಕಾ ಪ್ರಸಾದ್ ರವರು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅ.5 ರಂದು ದೂರು ನೀಡಿ, ಬಾವ ಕೆ.ವಿ ಚಿದಾನಂದ, ಅದರ ಪತ್ನಿ, ಶೋಭಾ ಚಿದಾನಂದ,

ಸುಳ್ಯ: ಕೆ.ವಿಜಿ. ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಯನ್ನು ಬೆದರಿಸಿದ ಆರೋಪ|ಕೆ.ವಿ.ಚಿದಾನಂದ ಸಹಿತ 5 ಮಂದಿಗೆ ಜಾಮೀನು Read More »

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ| ಯುವಕ ಬಂಧನ

ಸಮಗ್ರ ನ್ಯೂಸ್: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪದಡಿ ಯುವಕನನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ ಘಟನೆ ವರದಿಯಾಗಿದೆ. ಕಡಬ ಪಿಜಕ್ಕಳ ನಿವಾಸಿ ಯಜ್ಞೇಶ್‌ ಪೋಕ್ಸೊ ಕಾಯ್ದೆಯಡಿ ಬಂಧನವಾದ ಆರೋಪಿ. ಕೆಲ ತಿಂಗಳುಗಳ ಹಿಂದೆ ಆರೋಪಿಯು ಬಾಲಕಿಯನ್ನು ಮಡಿಕೇರಿಯ ಲಾಡ್ಜ್‌ ವೊಂದಕ್ಕೆ ಕರೆದುಕೊಂಡು ಹೊಗಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿದ ಹಿನ್ನಲೆಯಲ್ಲಿ ಆಕೆ ಕಲಿಯುತ್ತಿದ್ದ ಶಾಲೆಯ ಶಿಕ್ಷಕಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಪೊಲೀಸ್‌

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ| ಯುವಕ ಬಂಧನ Read More »

ಡಿಗ್ರಿ ಪಾಸ್​ ಆದವರಿಗೆ ಗುಡ್​ ನ್ಯೂಸ್​! ನಿಮಗಾಗಿ ಇಲ್ಲಿದೆ ಸರ್ಕಾರಿ ಉದ್ಯೋಗ

ಸಮಗ್ರ ಉದ್ಯೋಗ: National Housing Bank ಖಾಲಿ ಇರೋ ಹುದ್ದೆಗೆ ಆಹ್ವಾನಿಸುತ್ತಿದೆ. ಒಟ್ಟು 43 Project Finance Officer, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಅಕ್ಟೋಬರ್ 18, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ. Job Details:ಹುದ್ದೆಯ ಮಾಹಿತಿ:ಜನರಲ್ ಮ್ಯಾನೇಜರ್- 1ಡೆಪ್ಯುಟಿ ಜನರಲ್ ಮ್ಯಾನೇಜರ್- 1ಅಸಿಸ್ಟೆಂಟ್

ಡಿಗ್ರಿ ಪಾಸ್​ ಆದವರಿಗೆ ಗುಡ್​ ನ್ಯೂಸ್​! ನಿಮಗಾಗಿ ಇಲ್ಲಿದೆ ಸರ್ಕಾರಿ ಉದ್ಯೋಗ Read More »

ಮೆಟ್ರೋದಲ್ಲಿ ಸರ್ಕಸ್/ ನಾಲ್ವರಿಗೆ ದಂಡ

ಸಮಗ್ರ ನ್ಯೂಸ್: ಹಸಿರು ಲೈನ್ ಮೆಟ್ರೋದಲ್ಲಿ ಯಲಚೇನಹಳ್ಳಿಗೆ ಹೋಗುತ್ತಿದ್ದಾಗ ಕೆಲವು ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದು. ಅವರಿಗೆ ಮೆಟ್ರೋ ಸಿಬ್ಬಂದಿ ದಂಡ ಹಾಕಿದ ಘಟನೆ ನಡೆದಿದೆ. ರಾತ್ರಿ ಸುಮಾರು 11 ಗಂಟೆಗೆ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ, ನಿಲ್ಲುವಾಗ ಹಿಡಿಯುವ ಹ್ಯಾಂಡಲ್‌ಗಳನ್ನು ಬಳಸಿ ಅದರಲ್ಲಿ ಸರ್ಕಸ್ ಮಾಡಿದ್ದರು. ರೋಲಿಂಗ್ ವ್ಯಾಯಾಮ ಮಾಡಿದ ನಾಲ್ವರು ವಿದ್ಯಾರ್ಥಿಗಳ ವರ್ತನೆಗೆ ಸಹಪ್ರಯಾಣಿಕರು ಆಗಲೇ ಕಿಡಿ ಕಾರಿದ್ದರು. ಆದರೆ, ವಿದ್ಯಾರ್ಥಿಗಳು ತಮ್ಮ ಉದ್ಧಟತನ ಮುಂದುವರಿಸಿದ್ದರು. ಈ ನಡುವೆ, ಪ್ರಯಾಣಿಕರು ಈ ಸರ್ಕಸ್‌ನ ವಿಡಿಯೊ ಮಾಡಿ ಯಲಚೇನಹಳ್ಳಿಯ

ಮೆಟ್ರೋದಲ್ಲಿ ಸರ್ಕಸ್/ ನಾಲ್ವರಿಗೆ ದಂಡ Read More »

ಗಾಜಾದಲ್ಲಿ ಇಸ್ರೇಲ್ ನಿಂದ ಭೀಕರ ಹತ್ಯಾಕಾಂಡ| ಆಸ್ಪತ್ರೆ ಮೇಲೆ ದಾಳಿ; 500ಕ್ಕೂ ಹೆಚ್ಚು ಸಾವು

ಸಮಗ್ರ ನ್ಯೂಸ್: ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ಗಾಜಾ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್ ಭೀಕರ ಹತ್ಯಾಕಾಂಡ ನಡೆಸಿ 500ಕ್ಕೂ ಹೆಚ್ಚು ಅಮಾಯಕರನ್ನು ಕೊಂದಿದೆ. ಗಾಯಾಳುಗಳು ಮತ್ತು ಇತರ ಪ್ಯಾಲೆಸ್ಟೀನಿಯಾದವರಿಂದ ತುಂಬಿದ ಗಾಜಾ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ಭಾರಿ ಸ್ಫೋಟ ಸಂಭವಿಸಿದ್ದು, 500ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಹಮಾಸ್ ಇಸ್ರೇಲಿ ವೈಮಾನಿಕ ದಾಳಿಯನ್ನು ದೂಷಿಸಿದೆ. ಆದರೆ ಇಸ್ರೇಲಿ ಮಿಲಿಟರಿ ಇದು ಪ್ಯಾಲೆಸ್ಟೀನಿಯನ್ ಉಗ್ರಗಾಮಿಗಳು ತಪ್ಪಾಗಿ ಹಾರಿಸಿದ ರಾಕೆಟ್ ದಾಳಿ ಎಂದು

ಗಾಜಾದಲ್ಲಿ ಇಸ್ರೇಲ್ ನಿಂದ ಭೀಕರ ಹತ್ಯಾಕಾಂಡ| ಆಸ್ಪತ್ರೆ ಮೇಲೆ ದಾಳಿ; 500ಕ್ಕೂ ಹೆಚ್ಚು ಸಾವು Read More »

ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ ಮಾತೆ| ಜೀವನದಿ ಉಗಮ ಸ್ಥಾನದಲ್ಲಿ ಜನಜಾತ್ರೆ

ಸಮಗ್ರ ನ್ಯೂಸ್: ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಮಧ್ಯರಾತ್ರಿ 1.27ರ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ನಡೆದಿದೆ. ಕಾವೇರಿ ತೀರ್ಥೋದ್ಭವದ ವೇಳೆ ಹಬ್ಬದ ವಾತಾವರಣ ಮನೆಮಾಡಿತ್ತು. ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯ ಭಕ್ತರ ದಂಡು ನೆರೆದಿತ್ತು. ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಈ ಪವಿತ್ರ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದು, ಅರ್ಚಕರು ಭಕ್ತರ

ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ ಮಾತೆ| ಜೀವನದಿ ಉಗಮ ಸ್ಥಾನದಲ್ಲಿ ಜನಜಾತ್ರೆ Read More »

ಕರಾವಳಿಯ ಹಲವೆಡೆ ಸಿಡಿಲಾಘಾತ| ವ್ಯಾಪಕ ಹಾನಿ, ಅಪಾರ ನಷ್ಟ

ಸಮಗ್ರ ನ್ಯೂಸ್: ಮಿಂಚು, ಗುಡುಗಿನಿಂದ ಸುರಿದ ಭಾರೀ ಮಳೆಯಿಂದ ಕರಾವಳಿಯ ಹಲವೆಡೆ ಸಿಡಿಲಾಘಾತ ಉಂಟಾಗಿ ವ್ಯಾಪಕ ಹಾನಿ ಸಂಘವಿಸಿದೆ. ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ಹಿತ್ತಲಗದ್ದೆ ನಿವಾಸಿ ರಂಜಿತಾ ಜಗದೀಶ ಗೌಡ ಇವರೇ ಸಿಡಿಲಿನ ಆಘಾತಕ್ಕೆ ಒಳಗಾದ ಮಹಿಳೆಯಾಗಿದ್ದು ಇವರನ್ನು ಕೂಡಲೇ ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು ಹೊರವಲಯದ ವಾಮಂಜೂರು ಅಮೃತ ನಗರದ ಗೋಪಾಲ ಪೂಜಾರಿ ಎಂಬುವವರ ಮನೆಯಲ್ಲಿ ಸಿಡಿಲಿನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಸಿಡಿಲಿನ ಸದ್ದಿಗೆ ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ

ಕರಾವಳಿಯ ಹಲವೆಡೆ ಸಿಡಿಲಾಘಾತ| ವ್ಯಾಪಕ ಹಾನಿ, ಅಪಾರ ನಷ್ಟ Read More »

ಅರಣ್ಯಾಧಿಕಾರಿಗೆ ಅವಾಚ್ಯ ಪದಗಳಿಂದ ನಿಂದನೆ| ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಜಾಮೀನು ರಹಿತ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕರ್ತವ್ಯ ನಿರತ , ಯುನಿಫಾರ್ಮ್ ನಲ್ಲಿದ್ದ ವಲಯ ಅರಣ್ಯಾಧಿಕಾರಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದ್ದು, ಧರ್ಮಸ್ಥಳ ಪೊಲೀಸರು ಸೆಕ್ಷನ್ 353 ರಂತೆ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜಾರ ವಿರುದ್ದ ಪುತ್ತೂರು ಸಹಾಯಕ ಆಯುಕ್ತರಿಗೂ ದೂರು ನೀಡಲಾಗಿದೆ. ಪ್ರಕರಣದ ವಿವರ: ಬೆಳ್ತಂಗಡಿ

ಅರಣ್ಯಾಧಿಕಾರಿಗೆ ಅವಾಚ್ಯ ಪದಗಳಿಂದ ನಿಂದನೆ| ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಜಾಮೀನು ರಹಿತ ಪ್ರಕರಣ ದಾಖಲು Read More »

ನವರಾತ್ರಿ ನವದುರ್ಗೆ| ಯಾರೀವಳು ತಾಯಿ ಕೂಷ್ಮಾಂಡಿನಿ ದೇವಿ? ನಾಲ್ಕನೇ ದಿನದ ಪೂಜಾ ವಿಶೇಷತೆಗಳೇನು?

ಸಮಗ್ರ ವಿಶೇಷ: ನವರಾತ್ರಿಯ ಪ್ರತಿ ದಿನವೂ ವಿಭಿನ್ನವಾಗಿದೆ ಮತ್ತು ಈ ದಿನಗಳಲ್ಲಿ ತಾಯಿಯ ವಿವಿಧ ರೂಪಗಳನ್ನು ಗೌರವದಿಂದ ಪೂಜಿಸಲಾಗುತ್ತದೆ. ಮಾತೆ ದುರ್ಗೆಯ ವಿವಿಧ ರೂಪಗಳಿಗೆ ವಿಭಿನ್ನ ಹಿನ್ನೆಲೆಯಿದೆ. ಈ ಕಾರಣಕ್ಕಾಗಿಯೇ ಪೂಜೆಯ ಸಮಯದಲ್ಲಿ ಕೆಲವು ವಿಶೇಷ ನಿಯಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ. ನಾಲ್ಕನೇ ದಿನ ದುರ್ಗಾ ದೇವಿಯ 4ನೇ ರೂಪವಾದ ಕೂಷ್ಮಾಂಡಳನ್ನು ವಿಧಿ – ವಿಧಾನಗಳಂತೆ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತಾಯಿ ಕೂಷ್ಮಾಂಡಾ ವಿಶ್ವವನ್ನು ಸೃಷ್ಟಿಸಿದಳು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಅವರ ಪೂಜೆ ವಿಶೇಷವಾಗಿ

ನವರಾತ್ರಿ ನವದುರ್ಗೆ| ಯಾರೀವಳು ತಾಯಿ ಕೂಷ್ಮಾಂಡಿನಿ ದೇವಿ? ನಾಲ್ಕನೇ ದಿನದ ಪೂಜಾ ವಿಶೇಷತೆಗಳೇನು? Read More »