Ad Widget .

ಪುತ್ತೂರು: ಕಾಸು ಪಡೆದು ಫ್ರೀ ಟಿಕೆಟ್ ಕೊಟ್ಟ ಕೆಎಸ್ಆರ್ ಟಿಸಿ ನಿರ್ವಾಹಕ!!

ಸಮಗ್ರ ನ್ಯೂಸ್: ಸರ್ಕಾರ ಮಹಿಳೆಯರಿಗೆ ಹೊರಡಿಸಿದ ಫ್ರೀ ಬಸ್ ವ್ಯವಸ್ಥೆಯನ್ನು ಕೆಲವು ಕಂಡಕ್ಟರ್ ಗಳು ಹಣ ಕೊಟ್ಟು ಪ್ರಯಾಣಿಸುವ ಮಹಿಳೆಯರಿಗೆ ಸರ್ಕಾರ ನೀಡಿದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರ ಉಚಿತ ಚೀಟಿ ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಮತ್ತೆ ಹೊರೆ ಹೊರಿಸುತ್ತಿರುವ ಘಟನೆ ನಡೆದಿದೆ.

Ad Widget . Ad Widget .

ಮಂಗಳೂರಿನಿಂದ ಪುತ್ತೂರಿಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನೆಹರೂ ನಗರದಿಂದ ಪುತ್ತೂರಿಗೆ ಆಧಾರ್‌ ತೋರಿಸದೇ ಹಣ ಕೊಟ್ಟು ಟಿಕೆಟ್ ಪಡೆದಿದ್ದಳು. ಆದರೆ ಆಕೆಗೆ ಫ್ರೀ ಟಿಕೆಟ್ ನೀಡಿದ ಕಂಡಕ್ಟರ್ ಹಣವನ್ನು ಕಿಸೆಗೆ ಇಳಿಸಿಕೊಂಡಿದ್ದಾನೆ.

Ad Widget . Ad Widget .

ಈ ಬಗ್ಗೆ ವಿದ್ಯಾರ್ಥಿನಿ ‘ಸಮಗ್ರ ಸಮಾಚಾರ’ ಕ್ಕೆ ಮಾಹಿತಿ ನೀಡಿದ್ದು, ಕೆಎಸ್ಆರ್ ಟಿ ಸಿ ಅಧಿಕಾರಿಗಳು‌ ಗಮನ ಹರಿಸುವಂತೆ ಮನವಿ ಮಾಡಿದ್ದಾಳೆ.

ಕಂಡಕ್ಟರ್ ಗಳ ಕಿತಾಪತಿಯಿಂದಾಗಿ ನಿಗಮಕ್ಕೆ ಮತ್ತು ಸರ್ಕಾರಕ್ಕೆ ಹೊರೆಯಾಗುತ್ತಿದ್ದು, ಈ ಕುರಿತು ಸಾರಿಗೆ ಅಧಿಕಾರಿಗಳು ಗಮನ ಹರಿಸಬೇಕಿದೆ.

Leave a Comment

Your email address will not be published. Required fields are marked *