ಗೂಗಲ್ ‘ಪಿಕ್ಸೆಲ್’ ಸರಣಿಯ ನೂತನ ಪಿಕ್ಸೆಲ್- 8 ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದೆ. ಇದರ ಉತ್ಪಾದನೆ ಭಾರತದಲ್ಲಿ ಆರಂಭವಾಗಲಿದ್ದು, 2024ರಲ್ಲಿ ಇದರ ಮೊದಲ ರೋಲ್ ಔಟ್ ಅನ್ನು ನಿರೀಕ್ಷಿಸಲಾಗಿದೆ. ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲಿದೆ ಎಂದು ಗುರುವಾರ ‘ಗೂಗಲ್ ಫಾರ್ ಇಂಡಿಯಾ’ದಲ್ಲಿ ಘೋಷಿಸಿದೆ. ಗೂಗಲ್ ಫಾರ್ ಇಂಡಿಯಾ ಇದು ಕಂಪನಿಯ ಭಾರತೀಯ ವಾರ್ಷಿಕ ಇವೆಂಟ್ ಆಗಿದ್ದು, ಈ ಸಲ ಇದರ ಒಂಬತ್ತನೇ ಆವೃತ್ತಿ ನಡೆಯುತ್ತಿದೆ.
ಭಾರತದಲ್ಲಿ ಹೆಚ್ಚಿನ ಜನರಿಗೆ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಲಭ್ಯವಾಗುವಂತೆ ಮಾಡಲು ನಾವು ಅವಕಾಶ ಸೃಷ್ಟಿಸುತ್ತಿದ್ದೇವೆ ಮತ್ತು ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ನಮ್ಮ ಯೋಜನೆಯನ್ನು ಘೋಷಿಸಲು ಉತ್ಸುಕರಾಗಿದ್ದೇವೆ” ಎಂದು ಗೂಗಲ್‌ನ ಸಾಧನಗಳು ಮತ್ತು ಸೇವೆಗಳ ವಿಭಾಗದ ಮುಖ್ಯಸ್ಥ ವಿಪಿ ರಿಕ್ ಓಸ್ಟರ್ಲೋಹ್ ತಿಳಿಸಿದ್ದಾರೆ.