September 2023

‘ಇಂಡಿಯಾ’ ಹೆಸರು ‘ಭಾರತ’ ಆದರೆ ವಿಶ್ವಸಂಸ್ಥೆ ಅಂಗೀಕರಿಸುತ್ತಾ? ವಕ್ತಾರರು ನೀಡಿದ ಪ್ರಮುಖ ಹೇಳಿಕೆ ಏನು?

ಸಮಗ್ರ ನ್ಯೂಸ್: ‘ಇಂಡಿಯಾ’ದ ಹೆಸರನ್ನು ಔಪಚಾರಿಕವಾಗಿ ‘ಭಾರತ್’ ಎಂದು ಬದಲಾಯಿಸಲು ವಿನಂತಿಸಿದರೆ, ವಿಶ್ವಸಂಸ್ಥೆಯು ಅದನ್ನು ಪರಿಗಣಿಸುತ್ತದೆ ಎಂದು ವಿಶ್ವಸಂಸ್ಥೆಯ ವಕ್ತಾರರು ಬುಧವಾರ ಹೇಳಿದ್ದಾರೆ. ಭಾರತ ಹೆಸರು ಬದಲಾವಣೆ ಬಗ್ಗೆ ನಿಮ್ಮ ಪ್ರಕ್ರಿಯೆ ಏನು ಎಂದು ಚೀನಾದ ಮಾಧ್ಯಮ ವರದಿಗಾರರ ಪ್ರಶ್ನೆಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್, ಟರ್ಕಿಯೇ, ಸರ್ಕಾರವು ನಮಗೆ ನೀಡಿದ ಔಪಚಾರಿಕ ಮನವಿಗೆ ನಾವು ಪ್ರತಿಕ್ರಿಯಿಸಿದ್ದೇವೆ. ನಿಸ್ಸಂಶಯವಾಗಿ, ನಾವು ಅಂತಹ ವಿನಂತಿಗಳನ್ನು ಭಾರತದಿಂದ ಅದರ ಹೆಸರನ್ನು ಬದಲಾಯಿಸಲು […]

‘ಇಂಡಿಯಾ’ ಹೆಸರು ‘ಭಾರತ’ ಆದರೆ ವಿಶ್ವಸಂಸ್ಥೆ ಅಂಗೀಕರಿಸುತ್ತಾ? ವಕ್ತಾರರು ನೀಡಿದ ಪ್ರಮುಖ ಹೇಳಿಕೆ ಏನು? Read More »

ಜನ್ಮಾಷ್ಟಮಿಗೆ ಬರೋಬ್ಬರಿ 88 ಖಾದ್ಯ ತಯಾರಿಸಿ ದಾಖಲೆ ಬರೆದ ಮಂಗಳೂರು ಮಹಿಳೆ

ಸಮಗ್ರ ನ್ಯೂಸ್: ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಪಿ ಕಾಮತ್​​ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ರೋಗಿಯು ಮಾಡಿದ ಸಾಧನೆಯ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಜನ್ಮಾಷ್ಟಮಿಯ ದಿನದಂದು ಡಾ. ಕಾಮತ್​​ರ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯು ಬರೋಬ್ಬರಿ 88 ಖಾದ್ಯಗಳನ್ನು ತಯಾರಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಇವರು ಮತ್ತು ಶ್ರೀಕೃಷ್ಣನ ಮೇಲೆ ಇವರಿಗಿರುವ ಭಕ್ತಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಇವರು ನನ್ನ ಪೇಷೆಂಟ್​. ತಮ್ಮ ಹಿಂದಿನ ದಾಖಲೆಯನ್ನು ಈ ಮಹಿಳೆ ಇಂದು ಮುರಿದಿದ್ದಾರೆ. ಗೋಕುಲಾಷ್ಟಮಿ

ಜನ್ಮಾಷ್ಟಮಿಗೆ ಬರೋಬ್ಬರಿ 88 ಖಾದ್ಯ ತಯಾರಿಸಿ ದಾಖಲೆ ಬರೆದ ಮಂಗಳೂರು ಮಹಿಳೆ Read More »

ಇನ್ಮುಂದೆ RTO ನಿಯಮಗಳನ್ನು ಪಾಲಿಸದೆ ವಾಹನ ಚಲಾಯಿಸಿದರೆ DL ಕ್ಯಾನ್ಸಲ್

ಸಮಗ್ರ ನ್ಯೂಸ್: ದಿನಗಳೆದಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲರೂ ತಮ್ಮ ಸ್ವಂತ ವಾಹನಗಳಲ್ಲೇ ಓಡಾಡಬೇಕು ಎಂದು ಬಯಸುವ ಈ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ ಒಂದು ವಾಹನವಾದರು ಇದ್ದೇ ಇರುತ್ತದೆ. ಈ ವಾಹನ ದಟ್ಟಣೆಯಿಂದಾಗಿ ಟ್ರಾಫಿಕ್ (Traffic) ಕೂಡ ಹೆಚ್ಚಾಗುತ್ತಿದ್ದು, ವಾಹನ ಸಂಖ್ಯೆಗಳ ಏರಿಕೆಯು ನಗರಗಳಲ್ಲಿ ಪ್ರಯಾಣ ದಟ್ಟಣೆಯಿಂದ ಹೆಚ್ಚಾಗುತ್ತಿದೆ. ವೇಗವಾಗಿ ಚಾಲನೆ ಮಾಡುವುದರಿಂದ ಆಕ್ಸಿಡೆಂಟ್ ಗಳು ಕೂಡ ಹೆಚ್ಚುತ್ತಿದೆ. ಈ ಕಾರಣಕ್ಕೆ ಈಗ ವಾಹನಗಳ ವಿಚಾರಕ್ಕೆ ಸರ್ಕಾರ ಈಗ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಇನ್ನುಮುಂದೆ

ಇನ್ಮುಂದೆ RTO ನಿಯಮಗಳನ್ನು ಪಾಲಿಸದೆ ವಾಹನ ಚಲಾಯಿಸಿದರೆ DL ಕ್ಯಾನ್ಸಲ್ Read More »

ಮಡಿಕೇರಿ:ಕಾರು-ಬೈಕ್ ಮುಖಾಮುಖಿ ಡಿಕ್ಕಿ| ಮೂವರು ಗಂಭೀರ ಗಾಯ

ಸಮಗ್ರ ನ್ಯೂಸ್: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ಹೊದ್ದೂರು ಬಳಿಯ ಬೊಳಿಬಾಣೆ ಎಂಬಲ್ಲಿ ನಡೆದಿದೆ. ಮಗು ಸೇರಿದಂತೆ ಮೂವರು ಬೈಕ್ ನಲ್ಲಿ ಸಂಚರಿಸುತ್ತಿದ್ದರು. ಅಪಘಾತದಲ್ಲಿ ಮೂವರ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತು ಮಗುವಿಗೆ ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಡಿಕೇರಿ:ಕಾರು-ಬೈಕ್ ಮುಖಾಮುಖಿ ಡಿಕ್ಕಿ| ಮೂವರು ಗಂಭೀರ ಗಾಯ Read More »

ಸುಳ್ಯ: ಮಸೂದ್ ಕೊಲೆ ಪ್ರಕರಣ; ಮತ್ತೆ ಮೂವರಿಗೆ ಜಾಮೀನು

ಸಮಗ್ರ ನ್ಯೂಸ್: ಕಳೆದ ವರ್ಷ ಸುಳ್ಯದ ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ನಡೆದಿದ್ದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ರಂಜಿತ್, ಸದಾಶಿವ, ಸುಧೀರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಅರ್ಜಿಯನ್ನು ಪರಿಗಣಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ ಜಾಮೀನು ಮಂಜೂರು ಮಾಡಿದರು‌. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅರುಣ್ ಶಾಮ್ ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್

ಸುಳ್ಯ: ಮಸೂದ್ ಕೊಲೆ ಪ್ರಕರಣ; ಮತ್ತೆ ಮೂವರಿಗೆ ಜಾಮೀನು Read More »

ಸುಳ್ಯ: ಮಸೂದ್ ಕೊಲೆ ಪ್ರಕರಣ; ಮತ್ತೆ ಮೂವರಿಗೆ ಜಾಮೀನು

ಸಮಗ್ರ ನ್ಯೂಸ್: ಕಳೆದ ವರ್ಷ ಸುಳ್ಯದ ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ನಡೆದಿದ್ದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ರಂಜಿತ್, ಸದಾಶಿವ, ಸುಧೀರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಅರ್ಜಿಯನ್ನು ಪರಿಗಣಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ ಜಾಮೀನು ಮಂಜೂರು ಮಾಡಿದರು‌. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅರುಣ್ ಶಾಮ್ ವಾದ ಮಂಡಿಸಿದ್ದರು. ವಕೀಲರಾದ ಸುಯೋಗ್

ಸುಳ್ಯ: ಮಸೂದ್ ಕೊಲೆ ಪ್ರಕರಣ; ಮತ್ತೆ ಮೂವರಿಗೆ ಜಾಮೀನು Read More »

ಪುತ್ತೂರು:ಗ್ರಾ.ಪಂನ ಮಾಜಿ ಸದಸ್ಯನ ಮನೆಗೆ ನುಗ್ಗಿದ ದರೋಡೆಕೋರರ ಗುಂಪು

ಸಮಗ್ರ ನ್ಯೂಸ್:‌ ದರೋಡೆಕೋರರ ಗುಂಪು ಬಡಗನ್ನೂರು ಗ್ರಾ.ಪಂ ನ ಮಾಜಿ ಸದಸ್ಯ ಗುರುಪ್ರಸಾದ್‌ ರೈ ಕುಡ್ಕಾಡಿ ಅವರ ಮನೆಗೆ ನುಗ್ಗಿ ಚಿನ್ನ ಮತ್ತು ನಗದು ಹಣ ದೋಚಿ ಪರಾರಿಯಾದ ಘಟನೆ ಸೆ.5ರ ತಡರಾತ್ರಿ ನಡೆದಿದೆ. ತೋಟದ ನಡುವೆ ಒಂಟಿಯಾಗಿರುವ ಮನೆಯಲ್ಲಿ ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈ ಮಾತ್ರವಿದ್ದು 7 ರಿಂದ 8 ಜನರಿದ್ದ ದರೋಡೆಕೋರರ ಗುಂಪು ಕೈಯಲ್ಲಿ ತಲವಾರು ಮತ್ತು ರಾಡ್ ನಂತಹ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ, ಜೀವಬೆದರಿಕೆಯೊಡ್ಡಿ ತಾಯಿ ಮಗನನ್ನು

ಪುತ್ತೂರು:ಗ್ರಾ.ಪಂನ ಮಾಜಿ ಸದಸ್ಯನ ಮನೆಗೆ ನುಗ್ಗಿದ ದರೋಡೆಕೋರರ ಗುಂಪು Read More »

ಶಾಲಾ ಮಕ್ಕಳ ಮೇಲೆ ಹರಿದ ಯಮಸ್ವರೂಪಿ ಬಸ್| ಇಬ್ಬರು ಮಕ್ಕಳು ಗಂಭೀರ; ಐವರು ಕೂದಲೆಳೆಯಲ್ಲಿ ಪಾರು

ಸಮಗ್ರ ನ್ಯೂಸ್: ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ಸೊಂದು ಹರಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಆತಂಕಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ನಲ್ಲಿ ನಡೆದಿದೆ. ತುಳಸಿ (15) ನಿವೇದಿತ (14) ಎಂಬ ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ. ಇವರನ್ನು ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರವಾನಿಸಲಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಐವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಓವರ್ ಸ್ಪೀಡ್ ನಿಂದ

ಶಾಲಾ ಮಕ್ಕಳ ಮೇಲೆ ಹರಿದ ಯಮಸ್ವರೂಪಿ ಬಸ್| ಇಬ್ಬರು ಮಕ್ಕಳು ಗಂಭೀರ; ಐವರು ಕೂದಲೆಳೆಯಲ್ಲಿ ಪಾರು Read More »

ದೇವರಮನೆಯಲ್ಲಿ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

ಸಮಗ್ರ ನ್ಯೂಸ್: ಕೊಟ್ಟಿಗೆಹಾರದ‌ ಬಣಕಲ್ ಸಮೀಪದ ದೇವರಮನೆ ಸಾಗುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಬಿದ್ದ ಘಟನೆ ನಡೆದಿದೆ. ದೇವರಮನೆ ದೇವಸ್ಥಾನ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಕಾರು ದೇವರಮನೆಯ ಗುಡ್ಡೆತೋಟ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಫಿ ತೋಟದ ಕಂದಕಕ್ಕೆ ಬಿದ್ದಿದೆ.ಕಾರಿನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವರಮನೆಯಲ್ಲಿ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು Read More »

ಕೊಟ್ಟಿಗೆಹಾರದಲ್ಲಿ ಭರ್ಜರಿ ಮಳೆ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ಬುಧವಾರ ಸಂಜೆ 7 ಗಂಟೆಗೆ ಆರಂಭವಾಗಿ ಅರ್ಧ ಗಂಟೆಗೂ ಅಧಿಕ ಕಾಲ ಸುರಿಯಿತು. ಕೊಟ್ಟಿಗೆಹಾರದ ಮುಖ್ಯ ರಸ್ತೆಯಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು. ಮಳೆ ಅನೇಕ ದಿನಗಳಿಂದ ಇಲ್ಲದೆ ಜನರು ಕಂಗಾಲಾಗಿದ್ದರು. ಈ ಬಾರಿ ಮಳೆ ಇಲ್ಲದೇ ಬರಗಾಲದ ಛಾಯೆ ಮೂಡಿತ್ತು.ಮಳೆಗಾಲದಲ್ಲಿ ಅತಿಯಾಗಿ ಸುರಿಯುವ ಎಲ್ಲಾ ಮಳೆಗಳು ಈ ಬಾರಿ ಕೈಕೊಟ್ಟಿದ್ದು ಬುಧವಾರದ ಮಳೆಯಿಂದ ರೈತರು ತುಸು ನಿಟ್ಟುಸಿರು ಬಿಟ್ಟರು.

ಕೊಟ್ಟಿಗೆಹಾರದಲ್ಲಿ ಭರ್ಜರಿ ಮಳೆ Read More »