September 2023

ತಲಕಾವೇರಿಯಲ್ಲಿ ತಾಯಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ| ಯಾವಾಗ ಗೊತ್ತಾ ಮಾತೆ ದರ್ಶನ ಭಾಗ್ಯ?

ಸಮಗ್ರ ನ್ಯೂಸ್: ಕೊಡಗಿನ ಪ್ರಸಿದ್ಧ ಸ್ಥಳಗಳಲ್ಲಿ ತಲಕಾವೇರಿಯೂ ಒಂದಾಗಿದೆ. ಇಂತಹ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್.17ರಂದು ಮಧ್ಯರಾತ್ರಿ 1.27ಕ್ಕೆ ತಿರ್ಥೋದ್ಭವ ಆಗಲಿದೆ. ಈ ಬಗ್ಗೆ ಭಾಗಮಂಡಲದ ತಲಕಾವೇರಿ ದೇವಾಲಯ ಸಮಿತಿಯಿಂದ ಮಾಹಿತಿ ನೀಡಲಾಗಿದ್ದು, ತಲಕಾವೇರಿಯ ಕಾವೇರಿ ಉಗಮ ಸ್ಥಾನದಲ್ಲಿ ಅಕ್ಟೋಬರ್ 17ರಂದು ಮಧ್ಯರಾತ್ರಿ 1.27ಕ್ಕೆ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಉಂಟಾಗಲಿದೆ ಎಂದು ಹೇಳಿದೆ. ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು ಇಲ್ಲಿ ನೀರು ಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ‘ತೀರ್ಥೋದ್ಭವ’ ಎನ್ನುವರು.

ತಲಕಾವೇರಿಯಲ್ಲಿ ತಾಯಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ| ಯಾವಾಗ ಗೊತ್ತಾ ಮಾತೆ ದರ್ಶನ ಭಾಗ್ಯ? Read More »

ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು| ರಾಜ್ಯಸಭೆಯಲ್ಲಿ ಗುಡುಗಿದ ಹೆಚ್.ಡಿ ದೇವೇಗೌಡ| ಮೌನಕ್ಕೆ ಶರಣಾದ ಕರ್ನಾಟಕದ ಎಂ.ಪಿ ಗಳು!!

ಸಮಗ್ರ ನ್ಯೂಸ್: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಪೆಟ್ಟು ನೀಡಿದೆ. ಬೆಂಗಳೂರಿಗೆ ಕುಡಿಯುವ ನೀರು ಬೇಕಿದೆ, ಮುಂದೇನಾಗುತ್ತೋ ಗೊತ್ತಿಲ್ಲ. ಕಾವೇರಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ದುರಂತ. ಸರ್ಕಾರ ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ ಅನ್ನಿಸುತ್ತೆ. ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಖಂಡಿಸಿದ್ದೆ. ಧರಣಿ ನಡೆಸಿ

ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು| ರಾಜ್ಯಸಭೆಯಲ್ಲಿ ಗುಡುಗಿದ ಹೆಚ್.ಡಿ ದೇವೇಗೌಡ| ಮೌನಕ್ಕೆ ಶರಣಾದ ಕರ್ನಾಟಕದ ಎಂ.ಪಿ ಗಳು!! Read More »

ಮಹತ್ವದ ಮಹಿಳಾ ಮೀಸಲಾತಿ ಬಿಲ್‌ ಮಂಡನೆ| ನಾರಿ ಶಕ್ತಿ ವಂದನಾ ಎಂದು ನಾಮಕರಣ

ಸಮಗ್ರ ನ್ಯೂಸ್: ಮೋದಿ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಈ ಬೆನ್ನಲ್ಲೇ ಇಂದು ಈ ಮಹತ್ವದ ಬಿಲ್‌ ಮಂಡನೆ ಮಾಡಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಲೋಕಸಭೆಯಲ್ಲಿ ಹೊಸ ಸಂಸತ್ ಭವನದಲ್ಲಿ ಮಂಡಿಸಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಈ ನಡುವೆ, ಈ ಮಹಿಳಾ ಮೀಸಲಾತಿ ಬಿಲ್‌ ನಮ್ಮದು

ಮಹತ್ವದ ಮಹಿಳಾ ಮೀಸಲಾತಿ ಬಿಲ್‌ ಮಂಡನೆ| ನಾರಿ ಶಕ್ತಿ ವಂದನಾ ಎಂದು ನಾಮಕರಣ Read More »

ನಟ, ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ ಪುತ್ರಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್‌ ಆಯಂಟೊನಿ ಅವರ 16ರ ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿರ್ಮಾಪಕರಾಗಿ ಹೆಸರು ಮಾಡಿರುವ ವಿಜಯ್‌ ಅವರ ಮಗಳು ಮೀರಾ ಚೆನ್ನೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಮಂಗಳವಾರ ಮುಂಜಾನೆ ಎದ್ದು ನೋಡುವಾಗ ಚೆನ್ನೈಯ ನಿವಾಸದಲ್ಲಿ ಆಕೆ ನೇಣು ಬಿಗಿದುಕೊಂಡಿದ್ದು ಕಂಡುಬಂತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು ಎನ್ನಲಾಗಿದೆ. ಮೀರಾ ಒತ್ತಡ ಮತ್ತು

ನಟ, ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ ಪುತ್ರಿ ನೇಣು ಬಿಗಿದು ಆತ್ಮಹತ್ಯೆ Read More »

ಸುಳ್ಯ: ಬಾಡಿಗೆ ಆಟೋ ಸೋಗಿನಲ್ಲಿ ಪ್ರಯಾಣಿಕನ ದರೋಡೆ| 3.5 ಲಕ್ಷ ನಗದು, ಮೊಬೈಲ್ ಕಳವು

ಸಮಗ್ರ ನ್ಯೂಸ್: ಬಾಡಿಗೆ ಆಟೋದ ಸೋಗಿನಲ್ಲಿ ದರೋಡೆಕೋರರು ಪ್ರಯಾಣಿಕನನ್ನು ದರೋಡೆಗೈದ ಘಟನೆ ಸುಳ್ಯದ ಹಳೆಗೇಟು ಬಳಿ‌ ಸೆ. 18ರ ತಡರಾತ್ರಿ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ ದರ್ಶನ್‌ ‌(27ವ)ವಂಚನೆಗೆ ಒಳಗಾದವರು. ಇವರು ವೈಯಕ್ತಿಕ ಕೆಲಸದ ನಿಮಿತ್ತ ಸೆ 18 ರಂದು ಸುಳ್ಯಕ್ಕೆ ಬಂದಿದ್ದರು. ಅದೇ ದಿನ ರಾತ್ರಿ 11.15ರ ಸುಮಾರಿಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳುವ ಉದ್ದೇಶದಿಂದ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ರಸ್ತೆ ಬದಿ ಬಾಡಿಗೆ ವಾಹನಕ್ಕೆ ಕಾಯುತ್ತಿದ್ದರು.

ಸುಳ್ಯ: ಬಾಡಿಗೆ ಆಟೋ ಸೋಗಿನಲ್ಲಿ ಪ್ರಯಾಣಿಕನ ದರೋಡೆ| 3.5 ಲಕ್ಷ ನಗದು, ಮೊಬೈಲ್ ಕಳವು Read More »

ಹುಕ್ಕಾ ಬಾರ್ ನಿಷೇಧಕ್ಕೆ ಕೋಟ್ಪಾ ಕಾಯ್ದೆ ಗೆ ಮಹತ್ವದ ತಿದ್ದುಪಡಿ

ಸಮಗ್ರ ನ್ಯೂಸ್: ಹುಕ್ಕಾ ಬಾರ್ ಸೇರಿದಂತೆ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನ ನಿಷೇಧಿಸಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಸೆ.19ರಂದು ಕ್ರೀಡಾ ಸಚಿವ ನಾಗೇಂದ್ರ ಅವರ ಜೊತೆಗೂಡಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್, ಸಾರ್ವಜನಿಕ ಸ್ಥಳಗಳಲ್ಲಿ ಇತರ ತಂಬಾಕು ಉತ್ಪನ್ನಗಳ ನಿಷೇಧಿಸುವ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ತಂಬಾಕು

ಹುಕ್ಕಾ ಬಾರ್ ನಿಷೇಧಕ್ಕೆ ಕೋಟ್ಪಾ ಕಾಯ್ದೆ ಗೆ ಮಹತ್ವದ ತಿದ್ದುಪಡಿ Read More »

ಗೃಹಲಕ್ಷ್ಮಿ ಹಣ ಜಮೆಯಾಗಿಲ್ವೇ? ಹಾಗಾದ್ರೆ ಈ ಕೆಲ್ಸ ಮೊದಲು ಮಾಡಿ…

ಸಮಗ್ರ ನ್ಯೂಸ್: ಮಹಿಳೆಯರಿಗೆ 2000 ರೂ ನೀಡುವ ‘ಗೃಹಲಕ್ಷ್ಮಿ’ ಯೋಜನೆ ಆರಂಭವಾಗಿದ್ದು, ಸರ್ಕಾರ ಯಜಮಾನಿಯರ ಖಾತೆಗೆ ಹಣ ಜಮಾ ಮಾಡುತ್ತಿದೆ. ಕೆಲವರ ಖಾತೆಗೆ ಹಣ ಜಮಾ ಪ್ರಕ್ರಿಯೆ ನಡೆಯುತ್ತಿದೆ.ಆದರೆ ಕೆಲವು ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಕೆಲವರು ನಮಗೆ SMS ಬಂದಿಲ್ಲ ಹೀಗಾಗಿ ನಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೋ ಅಥವಾ ತಡೆಹಿಡಿಯಲಾಗಿದೆಯೋ ಅಥವಾ ರದ್ದಾಗಿದೆಯೋ ಎನ್ನುವ ಗೊಂದಲದಲ್ಲಿ ಇದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ಬರದೇ ಇರಬಹುದು. ಹಾಗಾಗಿ ಕೆಳಗೆ ಸೂಚಿಸಲಾದ ಕೆಲಸಗಳನ್ನು

ಗೃಹಲಕ್ಷ್ಮಿ ಹಣ ಜಮೆಯಾಗಿಲ್ವೇ? ಹಾಗಾದ್ರೆ ಈ ಕೆಲ್ಸ ಮೊದಲು ಮಾಡಿ… Read More »

ಚೈತ್ರಾ ಕುಂದಾಪುರ ಗ್ಯಾಂಗ್ ನ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಬಂಧನ

ಸಮಗ್ರ ನ್ಯೂಸ್: ಚೈತ್ರಾ ಕುಂದಾಪುರ ಗ್ಯಾಂಗ್‌ ನಡೆಸಿದ ಐದು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ದಾಖಲಾದ ದಿನದಿಂದಲೇ ನಾಪತ್ತೆಯಾಗಿದ್ದ ಸ್ವಾಮೀಜಿ ಈಗ ಸೆರೆಸಿಕ್ಕಿದ್ದು ಒಡಿಶಾ ರಾಜ್ಯದ ಕಟಕ್‌ನಲ್ಲಿ! ಅಂದರೆ ಊರು ಬಿಟ್ಟು ಎಲ್ಲಾದರೂ ಹೋಗಿ ತಪ್ಪಿಸಿಕೊಳ್ಳುತ್ತೇನೆ ಎಂದು ಹೊರಟಿದ್ದ ಅವರು ಈಗ ಸಿಸಿಬಿಯ ಕೈಗೆ ಸಿಕ್ಕಿಬಿದ್ದಿದ್ದಾರೆ. ಉದ್ಯಮಿ ಗೋವಿಂದ

ಚೈತ್ರಾ ಕುಂದಾಪುರ ಗ್ಯಾಂಗ್ ನ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಬಂಧನ Read More »

ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ|ನಿರ್ವಿಘ್ನಂ ಕುರುಮೇದೇವ ಸರ್ವಕಾಯೇಶು ಸರ್ವದ|| ಡೊಳ್ಳು ಹೊಟ್ಟೆ, ಸಣ್ಣ ಬಾಯಿ,ಆನೆ ಮುಖ, ಸಣ್ಣಕಣ್ಣು, ಮೊರದಗಲ ಕಿವಿ, ಹೀಗೆ ಗಣೇಶನ ಪ್ರತಿಯೊಂದು ರೂಪವು ಮತ್ತು ಪ್ರತಿಯೊಂದು ಅಂಗವು ಜನಮಾನಸಕ್ಕೆ ಒಂದು ಸಂದೇಶವನ್ನು ಸಾರುತ್ತವೆ. ಸ್ವಾತಂತ್ರ ಪೂರ್ವದಲ್ಲಿ ಜನರನ್ನು ಒಟ್ಟುಗೂಡಿಸಿ, ಭಾರತೀಯ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಸಾರಲು ಬಾಲಗಂಗಾಧರ ತಿಲಕರಿಂದ ಆರಂಭಗೊಂಡ ಗಣೇಶೋತ್ಸವ, ಈಗ ಪ್ರತೀ ವರ್ಷ ಒಂದು ಹಬ್ಬದಂತೆ ಮತ್ತು ಸಾರ್ವಜನಿಕ ಉತ್ಸವದಂತೆ ಮಾರ್ಪಾಡಾಗಿರುವುದು ಸಂತಸದ ವಿಚಾರ. ಜಾತಿ, ಮತ, ಧರ್ಮ, ಪಂಥ, ಪ್ರಾಂತ,

ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ Read More »

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ

ಸಮಗ್ರ ನ್ಯೂಸ್: ಸೆಪ್ಟೆಂಬರ್ 22ರಿಂದ 27ರವರೆಗೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮೊದಲೆರಡು ಪಂದ್ಯಗಳಿಗೆ ಕರ್ನಾಟಕದ ಆಟಗಾರ ಕೆ ಎಲ್ ರಾಹುಲ್ ನಾಯಕತ್ವ ವಹಿಸಲಿದ್ದು, ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯಾ ಕಪ್ ಗೆಲುವಿನ ಹುಮ್ಮಸ್ಸಿನಲ್ಲಿ ಇರುವ ಭಾರತ ತಂಡ, ಸೆಪ್ಟೆಂಬರ್ 22, 24 ಮತ್ತು 27 ರಂದು ಏಕದಿನ ಪಂದ್ಯಗಳಲ್ಲಿ ಆಡಲಿದೆ. ಈ ಸರಣಿಯ ಮೂಲಕ ಭಾರತ ತಂಡಕ್ಕೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಾಪಾಸಾಗಲಿದ್ದು, ಮೊದಲೆರಡು ಪಂದ್ಯಗಳಲ್ಲಿ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ Read More »