ಮಹಿಳಾ ಮೀಸಲಾತಿ ಮಸೂದೆ/ ಇಂದು ರಾಜ್ಯಸಭೆಯಲ್ಲಿ ಮಂಡನೆ
ಸಮಗ್ರ ನ್ಯೂಸ್: ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ನೂತನ ಸಂಸತ್ ಭವನದ ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆ 454 ಮತಗಳೊಂದಿಗೆ ಅಂಗೀಕಾರಗೊಂಡಿತು. ಕೇವಲ ಎರಡು ಮತಗಳು ಮಸೂದೆಗೆ ವಿರುದ್ಧವಾಗಿತ್ತು. ಇಂದು ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಅಲ್ಲಿ ಅಂಗಿಕಾರಗೊಂಡಲ್ಲಿ ರಾಷ್ಟ್ರಪತಿಗಳ ಸಹಿಯೊಂದಿಗೆ ಜಾರಿಗೆ ಬರಲಿದೆ. ಈ ಮಸೂದೆಯು ಮಹಿಳೆಯರಿಗೆ ಲೋಕಸಭೆಯಲ್ಲಿ 181 ಸ್ಥಾನಗಳನ್ನು ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ 1370 ಸ್ಥಾನಗಳನ್ನು ಮೀಸಲಿಡುತ್ತದೆ.
ಮಹಿಳಾ ಮೀಸಲಾತಿ ಮಸೂದೆ/ ಇಂದು ರಾಜ್ಯಸಭೆಯಲ್ಲಿ ಮಂಡನೆ Read More »