Ad Widget .

ವಾಟ್ಸ್ಯಾಪ್ ನಿಂದ ಮತ್ತೊಂದು ಹೊಸ ಪೀಚರ್| ನಿಮ್ಮ ಸ್ಟೇಟಸ್ ನಿಮ್ಗೆ 24 ಗಂಟೆಗೂ ಮೀರಿ ಇಟ್ಕೋಬಹುದು

ಸಮಗ್ರ ನ್ಯೂಸ್: 2 ಬಿಲಿಯನ್ ಜಾಗತಿಕ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ ಆ್ಯಪ್ ದಿನಕ್ಕೊಂದು ನೂತನ ಫೀಚರ್​ಗಳನ್ನು ಘೋಷಿಸುತ್ತಿದೆ. ನೂತನ ಅಪ್ಡೇಟ್​ಗಳನ್ನು ನೀಡಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಾಟ್ಸ್​ಆಯಪ್ ಇದೀಗ ಬೆರಗುಗೊಳಿಸುವ ಅಪ್ಡೇಟ್ ನೀಡಲು ಮುಂದಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಾಟ್ಸ್​ಆಯಪ್​ನಲ್ಲಿ ಪ್ರಸ್ತುತ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು 24 ಗಂಟೆಗಳವರೆಗೆ ಇರುವ ರೀತಿಯಲ್ಲಿ ಪೋಸ್ಟ್ ಮಾಡಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ ಈ 24 ಗಂಟೆಗಳ ಅವಧಿಯನ್ನು ವಾಟ್ಸ್​ಆಯಪ್​ ವಿಸ್ತರಿಸಲಿದೆಯಂತೆ.

Ad Widget . Ad Widget . Ad Widget .

ವಾಟ್ಸ್​ಆಯಪ್ ಅಪ್‌ಡೇಟ್‌ಗಳ ಬಗ್ಗೆ ಸದಾ ಮಾಹಿತಿಯನ್ನು ತಿಳಿಸುವ WABetaInfo ನ ವರದಿಯ ಪ್ರಕಾರ, ಕಂಪನಿಯು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎರಡು ವಾರಗಳವರೆಗೆ ಲೈವ್ ಆಗಿ ಇರಿಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬಳಕೆದಾರರು ತಮ್ಮ ಸ್ಟೇಟಸ್ ಗೋಚರಿಸುವ ಅವಧಿಯನ್ನು ನಿಗದಿ ಪಡಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ ಎನ್ನಲಾಗಿದೆ.

ಮುಂಬರುವ ಅಪ್‌ಡೇಟ್‌ನಲ್ಲಿ, ವಾಟ್ಸ್​ಆಯಪ್​ ಬಳಕೆದಾರರಿಗೆ ಸ್ಟೇಟಸ್ ವಿಭಾಗದಲ್ಲಿ ನಾಲ್ಕು ಅವಧಿಯ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ: 24 ಗಂಟೆಗಳು, 3 ದಿನಗಳು, 1 ವಾರ ಮತ್ತು 2 ವಾರಗಳು. ಇದು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎಷ್ಟು ಸಮಯದವರೆಗೆ ವೀಕ್ಷಿಸಲು ಲಭ್ಯವಾಗಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಆಗಿದೆ.

ಸದ್ಯದಲ್ಲೇ ವಾಟ್ಸ್​ಆಯಪ್​ನಲ್ಲಿ ಫಿಲ್ಟರ್ ಆಯ್ಕೆ ಬರಲಿದ್ದು, ಇದು ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ ತರಲಿದೆ. ವಾಟ್ಸ್​ಆಯಪ್ ಬೀಟಾ 2.23.14.17 ಅಪ್ಡೇಟ್​ನಲ್ಲಿ ಇದು ಕಂಡುಬಂದಿದೆ. ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್​ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಫಿಲ್ಟರ್​ನಲ್ಲಿ ಮೂರು ಆಯ್ಕೆಗಳು ಇರಲಿದೆ. ಅನ್​ರೀಡ್ ಮೆಸೇಜೆಸ್, ವೈಯಕ್ತಿಕ ಸಂಭಾಷಣೆಗಳು ಮತ್ತು ವ್ಯವಹಾರ ಸಂಭಾಷಣೆಗಳು ಹೀಗೆ ಮೂರು ಆಯ್ಕೆಗಳು ಇರಲಿದೆ. ವಾಟ್ಸ್​ಆಯಪ್​ ಮೇಲ್ಬಾಗದ ಬಲ ಮೂಲೆಯಲ್ಲಿ ಈ ಫಿಲ್ಟನ್ ಬಟನ್ ಇರಲಿದೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *