Ad Widget .

ಮಥುರಾ:ಟ್ರ್ಯಾಕ್ ಬಿಟ್ಟು ಪ್ಲಾಟ್ ಫಾರ್ಮ್ ನಲ್ಲಿ ಚಲಿಸಿದ ಉಗಿಬಂಡಿ

ಸಮಗ್ರ ನ್ಯೂಸ್: ರೈಲೊಂದು ತಡರಾತ್ರಿ ಟ್ರ್ಯಾಕ್ ಬಿಟ್ಟು ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಘಟನೆ ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲೊಂದು ಏಕಾಏಕಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಘಟನೆ ಮಥುರಾ ಜಂಕ್ಷನ್‌ನಲ್ಲಿ ತಡರಾತ್ರಿ ನಡೆದಿದೆ. ರೈಲು ಶಕುರ್ ಬಸ್ತಿಯಿಂದ ಸೆ.27ರಂದು ರಾತ್ರಿ 10:49ಕ್ಕೆ ಮಥುರಾ ನಿಲ್ದಾಣಕ್ಕೆ ಬಂದಿದ್ದು, ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಿದೆ. ಈ ವೇಳೆ ತಕ್ಷಣ ಪ್ರಯಾಣಿಕರು ರೈಲಿನಿಂದ ಇಳಿದಿದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Ad Widget . Ad Widget . Ad Widget .

ಇನ್ನು ಘಟನೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್.ಕೆ ಶ್ರೀವಾಸ್ತವ, “ಮಹಿಳೆಯೊಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಬಿಟ್ಟರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದೇವೆ. ಇತರೆ ರೈಲುಗಳ ಸಂಚಾರಕ್ಕೆ ಅಡಚಣೆ ಆಗಿದೆ” ಎಂದು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮತ್ತೊಂದೆಡೆ ರೈಲು ಅಪಘಾತದ ವಿಡಿಯೋ ಎನ್ಎನ್‌ಐ ಟ್ವಿಟ್‌ನಲ್ಲಿ ಹಂಚಿಕೆಯಾಗಿದೆ.

ಮಹಿಳೆಗೆ ಸಣ್ಣಪುಟ್ಟ ಗಾಯ: ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಸ್ಥಳೀಯ ರೈಲು ಪ್ಲಾಟ್‌ಫಾರ್ಮ್‌ಗೆ ಹತ್ತಿದ ಪರಿಣಾಮ ಝಾನ್ಸಿ ಮೂಲದ ಉಷಾದೇವಿ(39) ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಆಕೆಯನ್ನು ಝಾನ್ಸಿಗೆ ಕಳುಹಿಸಲಾಯಿತು ಎಂದು ಹೇಳಿದರು. ಅಲ್ಲದೆ, ಈ ಕುರಿತು ಉನ್ನತ ಮಟ್ಟದ ತನಿಖೆಗೆ ರೈಲ್ವೇ ಇಲಾಖೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆಗ್ರಾ ವಿಭಾಗದ ಅಧಿಕಾರಿ ಪ್ರಕಾರ, ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲು ಸೆ. 27ರಂದು ರಾತ್ರಿ 10.50ಕ್ಕೆ ಶಕುರ್ ಬಸ್ತಿಯಿಂದ ಪ್ಲಾಟ್‌ಫಾರ್ಮ್ 2ಎಗೆ ಆಗಮಿಸಿತ್ತು. ಸಿಬ್ಬಂದಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಡಿಬೋರ್ಡ್ ಮಾಡಿದ ನಂತರ, ರೈಲು ಹಳಿ ತಪ್ಪಿದೆ. ನಂತರ ನಿಲ್ದಾಣಕ್ಕೆ ಬರುವ ಮೊದಲು ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಿತು ಎನ್ನುವ ಮಾಹಿತಿಯನ್ನು ನೀಡಿದ್ದಾರೆ. 2ಎ ಹೊರತುಪಡಿಸಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲುಗಳ ಸಂಚಾರ ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *