ಸಮಗ್ರ ನ್ಯೂಸ್: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನೊಂದಿಗೆ ಸಂಪರ್ಕ ಬೆಳೆಸಲು ಮತ್ತು ಅವು ಎಚ್ಚರವಾಗಿವೆಯೇ ಎಂದು ನೋಡಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಇಸ್ರೋ ಹೊಸ ಅಪ್ಡೇಟ್ ಅನ್ನು ನೀಡಿದೆ. ಇಲ್ಲಿಯವರೆಗೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಇಸ್ರೋ ತಿಳಿಸಿದೆ.
ಆರಂಭದಲ್ಲಿ, ಇಸ್ರೋ ಲ್ಯಾಂಡರ್ ಮತ್ತು ರೋವರ್ ಅನ್ನು ಸೆಪ್ಟೆಂಬರ್ 22 ರಂದು ಎಚ್ಚರಗೊಳಿಸಲು ಯೋಜಿಸಿತ್ತು, ಆದರೆ ಇದನ್ನು ಒಂದು ದಿನ ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿದ್ದವು, ಆದರೆ ಈಗ ಬಂದ ಅಪ್ಡೇಟ್ ಪ್ರಕಾರ ಇಸ್ರೋ ತನ್ನ ಪ್ರಯತ್ನವನ್ನು ನಡೆಸುತ್ತಲೇ ಇದೆ ಎಂಬುದು ತಿಳಿದುಬಂದಿದೆ.
ಆ.23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಿತ್ತು. ಆ ಬಳಿಕ ಪ್ರಜ್ಞಾನ ರೋವರ್ (Pragyan Rover) ಹೊರಬಂದು 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿತ್ತು. ಇದೀಗ ಸುದೀರ್ಘ 14 ದಿನಗಳ ನಿದ್ರೆಯನ್ನು ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಮುಗಿಸಿ ಮತ್ತೆ ಮರು ಸಕ್ರಿಯಗೊಳಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ.
ಪ್ರಗ್ಯಾನ್ ರೋವರ್ ಚಂದ್ರನ ಮೇಲೆ 100 ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿತ್ತು. ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮಯಲ್ಲಿ ಸಲ್ಪರ್ (ಎಸ್) ಇರುವಿಕೆಯನ್ನು ದೃಢಪಡಿಸಿತು. ವಿಕ್ರಮ್ ಲ್ಯಾಂಡ ದಕ್ಷಿಣ ಧ್ರುವ ಪ್ರದೇಶದ ಮೇಲೆ ಚಂದ್ರನ ಪ್ಲಾಸ್ಮಾ ಪರಿಸರದ ಸಮೀಪ ಮೇಲ್ಮೀಯ ಮಾಪನಗಳನ್ನು ನಡೆಸಿದೆ.