Ad Widget .

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ITEL ಕಂಪೆನಿಯ 10 ಸಾವಿರದ 5G ಸ್ಮಾರ್ಟ್ ಫೋನ್

ಸಮಗ್ರ ನ್ಯೂಸ್: ಭಾರತದಲ್ಲಿ ಸಹ 5ಜಿ ನೆಟ್​ವರ್ಕ್​ ವಿಸ್ತರಿಸುತ್ತಿದ್ದಂತೆ ಮೊಬೈಲ್​ ತಯಾರಿಕಾ ಕಂಪನಿಗಳು ಕಡಿಮೆ ಬಜೆಟ್​ ಗೆ 5ಜಿ ಫೋನ್​ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

Ad Widget . Ad Widget .

5G ಸ್ಮಾರ್ಟ್‌ಫೋನ್ ಖರೀದಿಸಬೇಕೆಂದರೆ 20 ಸಾವಿರ ಬೇಕಿತ್ತು. ಆದರೆ, ನಂತರದಲ್ಲಿ ರೂ.15 ಸಾವಿರದಿಂದ ರೂ.20 ಸಾವಿರದ ಬಜೆಟ್ ನಲ್ಲಿ 5ಜಿ ಮೊಬೈಲ್ ಗಳನ್ನು ಬಿಡುಗಡೆ ಮಾಡಲಾಯಿತು. ಈಗ, ರೂ.15 ಸಾವಿರದೊಳಗೆ 5ಜಿ ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ಈಗ ಬ್ಯಾಂಕ್ ಆಫರ್ ಗಳೊಂದಿಗೆ 12 ಸಾವಿರ ರೂ.ಗೆ 5ಜಿ ಮೊಬೈಲ್ ಖರೀದಿ ಮಾಡಬಹುದಾಗಿದೆ.

Ad Widget . Ad Widget .

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​ ಬಿಡುಗಡೆಯಾದಂತೆ ದೇಶದಲ್ಲಿರುವ ಪ್ರತಿಯೊಬ್ಬರು 5ಜಿ ನೆಟ್​ವರ್ಕ್​​ ಅನ್ನು ಪಡೆಯಬಹುದು. ರೂ.10 ಸಾವಿರದ ಒಳಗಿನ 5G ಫೋನ್ ಅತಿ ಶೀಘ್ರದಲ್ಲೇ ದೇಶದಲ್ಲಿ ಬಿಡುಗಡೆಯಾಗಬಹುದು ಎಂಬ ವರದಿಗಳಿವೆ. ಕಡಿಮೆ ಬಜೆಟ್ ನಲ್ಲಿ 5ಜಿ ನೆಟ್ ವರ್ಕ್ ಬಳಸಲು ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, 4G ವೇಗಕ್ಕಿಂತ 5G ವೇಗವಾಗಿರುತ್ತದೆ.

Itel ಬ್ರ್ಯಾಂಡ್ ಈ ತಿಂಗಳ ಅಂತ್ಯದ ವೇಳೆಗೆ ಈ ಬಜೆಟ್ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ದಸರಾ ಮತ್ತು ದೀಪಾವಳಿ ಮಾರಾಟದಲ್ಲಿ ಈ ಮೊಬೈಲ್ ಸ್ಮಾರ್ಟ್ ಫೋನ್ ಬಳಕೆದಾರರನ್ನು ಆಕರ್ಷಿಸುವ ಸಾಧ್ಯತೆಯಿದೆ. ಐಟೆಲ್ ಈಗಾಗಲೇ ಬಜೆಟ್ ಫೋನ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೀಗ 5ಜಿ ಫೋನನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದ್ರೆ ಬ್ರಾಂಡ್​ನ ಬೇಡಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಐಟೆಲ್​(ITEL) ಕಂಪನಿ ಬಜೆಟ್​ ಬೆಲೆಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಈಗಾಗಲೇ ಭಾರೀ ಜನಪ್ರಿಯತೆಯಲ್ಲಿತ್ತು. ಇದೀಗ ಭಾರತದ ಮೊದಲ ಬಜೆಟ್ 5G ಫೋನ್‌ನೊಂದಿಗೆ ITEL, ಗ್ರಾಹಕರನ್ನು ತಲುಪಲಿದೆ. ಈ ಬ್ರ್ಯಾಂಡ್ ಉತ್ತಮ ಹಾರ್ಡ್‌ವೇರ್‌ನೊಂದಿಗೆ ಕಡಿಮೆ ಬೆಲೆಯಲ್ಲಿ 5G ಮೊಬೈಲ್ ಅನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನು ಈ ಬಜೆಟ್ 5G ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾ, ಸಾಕಷ್ಟು ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಬಜೆಟ್ 10 ಸಾವಿರಕ್ಕಿಂತ ಕಡಿಮೆ ಇರುವ ಕಾರಣ, ಇದು 4GB RAM ಅನ್ನು ಹೊಂದಿರಲಿದೆ. 5G ಡೇಟಾ ವೇಗಕ್ಕಾಗಿ, ಎಲ್ಲಾ ಅಪ್ಲಿಕೇಶನ್‌ಗಳನ್ನು ಬಳಸಲು 4GB ಅಥವಾ 6GB RAM ಅಗತ್ಯವಿದೆ.

Leave a Comment

Your email address will not be published. Required fields are marked *