Ad Widget .

ಶಬರಿಮಲೆ ಯಾತ್ರೆ ತೆರಳಿದ್ದ ಸುಳ್ಯದ ವಕೀಲರಿಂದ ಪಂಪಾ ನದಿಯಲ್ಲಿ ಸ್ವಚ್ಛತಾ ಸೇವಾ ಕಾರ್ಯ

ಸಮಗ್ರ ನ್ಯೂಸ್: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ದರ್ಶನಾರ್ಥಿ ಸುಳ್ಯದ ವಕೀಲರ ತಂಡದಿಂದ ಶಬರಿಮಲೆ ಯಾತ್ರೆಯ ಭಾಗವಾದ ಪವಿತ್ರ ಪಂಪಾ ನದಿಯಲ್ಲಿ ಭಕ್ತಾದಿಗಳು ಬಿಸಾಡಿದ ಪ್ಲಾಸ್ಟಿಕ್ ಚೀಲ, ಬಾಟಲಿಗಳು, ಬಟ್ಟೆಗಳು ಮುಂತಾದವುಗಳನ್ನು ಸ್ವಚ್ಛಗೊಳಿಸುವ ಸೇವಾ ಕಾರ್ಯ ನಡೆಸಿದರು.

Ad Widget . Ad Widget .

ಗುರುಸ್ವಾಮಿಯಾಗಿ ಸುಳ್ಯದ ಹಿರಿಯ ನ್ಯಾಯವಾದಿ ರಾಮಕೃಷ್ಣ ಅಮೈ ಅವರು ಈ ಕುರಿತು ಮಾತನಾಡಿ ನಾನು ಸುಮಾರು 30 ವರ್ಷಗಳಿಂದ ಶಬರಿ ಮಲೆ ಯಾತ್ರೆ ಮಾಡುತ್ತಾ ಬರುತ್ತಿದ್ದೇನೆ. ಹಿಂದಿನ ಕಾಲದಿಂದಲೂ ಪಂಪಾ ನದಿಯ ತೀರ ಮಲಿನಗೊಳಿಸುವ ಕಾರ್ಯ ಭಕ್ತಾದಿಗಳು ಮಾಡುತ್ತಿದ್ದಾರೆ ನಮ್ಮ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಮಲಿನಗೊಳಿಸಬಾರದು. ಇಂತಹ ಕ್ಷೇತ್ರಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಕರ್ತವ್ಯ ನಮ್ಮ ಮೇಲಿದೆ ಎಂದರು.

Ad Widget . Ad Widget .

ಹಾಗೆಯೇ ವಿದ್ಯಾವಂತ ಸಮಾಜ ಕಸ ಬಿಸಾಡುವ ಮುನ್ನ ಯೋಚಿಸಬೇಕು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಸ್ವಚ್ಛ ಭಾರತ ಕನಸ್ಸನ್ನು ಸಾಕಾರಗೊಳಿಸೋಣ ಮತ್ತು ನಮ್ಮ ಈ ಸ್ವಚ್ಛತಾ ಕಾರ್ಯ ಪ್ರಚಾರಕ್ಕೋಸ್ಕರ ಅಲ್ಲ ಸಮಾಜದಲ್ಲಿ ಜಾಗೃತಿಗಾಗಿ ಎಂದು ತಿಳಿಸಿದರು.

Leave a Comment

Your email address will not be published. Required fields are marked *