Ad Widget .

ಮಹತ್ವದ ಮಹಿಳಾ ಮೀಸಲಾತಿ ಬಿಲ್‌ ಮಂಡನೆ| ನಾರಿ ಶಕ್ತಿ ವಂದನಾ ಎಂದು ನಾಮಕರಣ

ಸಮಗ್ರ ನ್ಯೂಸ್: ಮೋದಿ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಈ ಬೆನ್ನಲ್ಲೇ ಇಂದು ಈ ಮಹತ್ವದ ಬಿಲ್‌ ಮಂಡನೆ ಮಾಡಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಲೋಕಸಭೆಯಲ್ಲಿ ಹೊಸ ಸಂಸತ್ ಭವನದಲ್ಲಿ ಮಂಡಿಸಿದರು.

Ad Widget . Ad Widget .

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

Ad Widget . Ad Widget .

ಈ ನಡುವೆ, ಈ ಮಹಿಳಾ ಮೀಸಲಾತಿ ಬಿಲ್‌ ನಮ್ಮದು ಎಂದು ವಿಪಕ್ಷಗಳು ಕ್ರೆಡಿಟ್‌ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದು, ಈ ಹಿನ್ನೆಲೆ ಗದ್ದಲ ಗಲಾಟೆಯ ನಡುವೆಯೇ ಬಿಲ್‌ ಮಂಡನೆಯಾಗಿದೆ. Nari Shakti Vandan Adhiniyam ಎಂದು ಈ ಬಿಲ್‌ ಅನ್ನು ಕರೆಯಲಾಗಿದೆ. ಆದರೆ, ಲೋಕಸಭೆಯ ಕಲಾಪ ನಾಳೆಗೆ ಮುಂದೂಡಿಕೆಯಾಗಿದ್ದು, ಈ ಹಿನ್ನೆಲೆ ಈ ಬಿಲ್‌ ಬಹುತೇಕ ನಾಳೆ ಲೋಕಸಭೆಯಲ್ಲಿ ಪಾಸಾಗಲಿದೆ ಎನ್ನಲಾಗುತ್ತಿದೆ.

ಇನ್ನು, ಈ ಬಿಲ್‌ ಮಂಡನೆಗೂ ಮುನ್ನ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ “ಹೊಸ ಸಂಸತ್ ಕಟ್ಟಡದಲ್ಲಿ ಈ ಐತಿಹಾಸಿಕ ಸಂದರ್ಭದಲ್ಲಿ, ಸದನದ ಮೊದಲ ಕಲಾಪವಾಗಿ, ಎಲ್ಲಾ ಸಂಸದರು ಮಹಿಳಾ ಶಕ್ತಿಗಾಗಿ ಹೆಬ್ಬಾಗಿಲುಗಳನ್ನು ತೆರೆಯುವ ಪ್ರಾರಂಭವನ್ನು ಈ ನಿರ್ಣಾಯಕ ನಿರ್ಧಾರದಿಂದ ಮಾಡಲಾಗುತ್ತಿದೆ. ಮಹಿಳೆಯರ ನೇತೃತ್ವದ ಅಭಿವೃದ್ಧಿಯ ನಮ್ಮ ಸಂಕಲ್ಪವನ್ನು ಮುಂದಕ್ಕೆ ತೆಗೆದುಕೊಂಡು, ನಮ್ಮ ಸರ್ಕಾರವು ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದರು.

Leave a Comment

Your email address will not be published. Required fields are marked *