Ad Widget .

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಯಾಪ್

ಸಮಗ್ರ ನ್ಯೂಸ್: ಜನಪ್ರಿಯ ಮೆಸೆಂಜರ್‌ ಆಯಪ್ ಆಗಿರುವ ವಾಟ್ಸ್ ಆಯಪ್ ಹೊಸ ‘ವಾಟ್ಸ್ ಆ್ಯಪ್ ಚಾನೆಲ್ಸ್‌’ ಎಂಬ ಫೀಚರ್‌ ಅನ್ನು ಬಿಡುಗಡೆಗೊಳಿಸುತ್ತಿದೆ. ಇದೊಂದು ಏಕಮುಖ ಪ್ರಸಾರ ಪರಿಕರವಾಗಿದ್ದು, ಅಪ್‌ಡೇಟ್ಸ್‌ ಎಂಬ ಹೊಸ ಟ್ಯಾಬ್‌ನಲ್ಲಿ ನಿಮ್ಮ ಆಸಕ್ತಿಯ ಜನರು ಮತ್ತು ಸಂಸ್ಥೆಗಳಿಂದ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ.

Ad Widget . Ad Widget .

ವಾಟ್ಸ್ ಆಯಪ್ ಚಾನಲ್ಸ್‌ ಎಂಬ ಈ ಹೊಸ ಫೀಚರ್‌ ಭಾರತ ಸಹಿತ 150ಕ್ಕೂ ಅಧಿಕ ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಲಭ್ಯವಾಗಲಿದೆ. ಬಳಕೆದಾರರ ದೇಶದ ಆಧಾರದ ಮೇಲೆ ಸ್ವಯಂಚಾಲಿತವಾಗಿ ಫಿಲ್ಟರ್‌ ಮಾಡಲಾದ ಚಾನೆಲ್‌ಗಳನ್ನು ಅವರು ನೋಡಬಹುದಾಗಿದೆ ಅಥವಾ ಬಳಕೆದಾರರು ಹೆಸರು ಅಥವಾ ವಿಭಾಗದ ಮೂಲಕ ಚಾನಲ್‌ಗಳನ್ನು ಹುಡುಕಬಹುದಾಗಿದೆ. ಹೊಸ, ಹೆಚ್ಚು ಸಕ್ರಿಯವಾಗಿರುವ ಹಾಗೂ ಹೆಚ್ಚು ಬಳಕೆದಾರರಿರುವ ಜನಪ್ರಿಯ ಚಾನಲ್‌ಗಳನ್ನೂ ಬಳಕೆದಾರರು ನೋಡಬಹುದಾಗಿದೆ.

Ad Widget . Ad Widget .

ಭಾರತದ ಮತ್ತು ಜಗತ್ತಿನ ಪ್ರಮುಖ ಸೆಲೆಬ್ರಿಟಿಗಳು, ಕಲಾವಿದರು, ಮುಖಂಡರು ಮತ್ತು ಸಂಸ್ಥೆಗಳು ಫಾಲೋ ಮಾಡಲು ಲಭ್ಯರಿರುತ್ತಾರೆ. ವಾಟ್ಸ್ಯಾಪ್‌ ಮಾತೃ ಸಂಸ್ಥೆ ಮೆಟಾ ಮುಖ್ಯಸ್ಥ ಮಾರ್ಕ್‌ ಝುಕೆರ್ಬರ್ಗ್‌ ಅವರನ್ನೂ ಫಾಲೋ ಮಾಡಬಹುದಾಗಿದೆ.

Leave a Comment

Your email address will not be published. Required fields are marked *