August 2023

ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ

ಸಮಗ್ರ ನ್ಯೂಸ್: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಮತ್ತು 2020 ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತುಗಳಲ್ಲಿ ಶುಕ್ರವಾರ (ಆಗಸ್ಟ್ 25) ತಮ್ಮ ಮೊದಲ ಪ್ರಯತ್ನದಲ್ಲಿ 88.77 ಮೀಟರ್ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. ನೀರಜ್ ಚೋಪ್ರಾ ಸೇರಿದಂತೆ ವಿಶ್ವದಾದ್ಯಂತದ 37 ಜಾವೆಲಿನ್ ಎಸೆತಗಾರರು ಈ […]

ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ Read More »

ಲವ್ ಮೈನಸ್ 18 ಟೆಲಿಫಿಲಂ ಆ. 26ಕ್ಕೆ ನಿಮ್ಮ ಮುಂದೆ

ಸಮಗ್ರ ನ್ಯೂಸ್: ಸುಳ್ಯದ ಶ್ರೀ ಟೆಕ್ನಾಲಜಿ ನಿರ್ಮಾಣದಲ್ಲಿ ಮೂಡಿಬಂದಿರುವ ಲವ್ ಮೈನಸ್ 18 ಟೆಲಿಫಿಲಂ ಪ್ರೀಮಿಯರ್ ಶೋ ಆ. 26ರಂದು ಏಪಿಎಂಸಿ ಸಭಾ ಭವನದಲ್ಲಿ ನಡೆಯಲಿದೆ. ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣದ ಚಿದಾನಂದ್ ಪರಪ್ಪರವರ ಕಥೆ ನಿರ್ದೇಶನದ ಯಶ್ ಫೋಟೋಗ್ರಫಿ ಅವರ ಸಿನಿಮಾಟೋಗ್ರಫಿಯಲ್ಲಿ ಜೀವನ್ ಕೆರೆಮೂಲೆ, ಪ್ರಸಾದ್ ಕಾಟೂರು, ಭವ್ಯ ಬೆಳ್ಳಾರೆ, ಸುಶ್ಮಿತಾ ಮೋಹನ್, ಪುಷ್ಪರಾಜ್ ಏನೆಕಲ್ ಮತ್ತು ಡಿಂಪಲ್ ಡಿಸೋಜ ಇವರ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ಟೆಲಿಫಿಲಂ ಲವ್ ಮೈನಸ್ 18, ಪ್ರೀಮಿಯರ್ ಶೋ ಮತ್ತು

ಲವ್ ಮೈನಸ್ 18 ಟೆಲಿಫಿಲಂ ಆ. 26ಕ್ಕೆ ನಿಮ್ಮ ಮುಂದೆ Read More »

ಕಾಸರಗೋಡು: ಕುತ್ತಿಕೋಲು ಪ್ರಸಿದ್ಧ ಜ್ಯೋತಿಷ್ಯರ ಬೆತ್ತಲೆ ವೀಡಿಯೋ ವೈರಲ್| ಹಣಕ್ಕಾಗಿ ಬೇಡಿಕೆ ಇಟ್ಟ ಇಬ್ಬರ ವಿರುದ್ದ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕಾಸರಗೋಡು ಜಿಲ್ಲೆಯ ಕುತ್ತಿಕೋಲಿನ ಪ್ರಸಿದ್ಧ ಜ್ಯೋತಿಷ್ಯರ ವೀಡಿಯೋ ವೈರಲಾಗಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಕುತ್ತಿಕೋಲು ನಿವಾಸಿಯಾದ 47 ವರ್ಷ ವ್ಯಕ್ತಿಯಾಗಿದ್ದು ಇವರು ಮಹಿಳೆಯೊಬ್ಬಳ ಜೊತೆ ವೀಡಿಯೋ ಕಾಲ್ ನಲ್ಲಿ ಬೆತ್ತಲೆಯಾಗಿ ಮಾತನಾಡುತ್ತಿರುವುದು ಮತ್ತು ಮಹಿಳೆ ಕೂಡ ಬೆತ್ತಲೆಯಾಗಿ ಕಂಡುಬಂದಿದ್ದು ವೈರಲಾದ ವೀಡಿಯೋ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದೀಗ ಇದರ ಬಗ್ಗೆ ಕೇರಳ ರಾಜ್ಯದ ಬೇಡಕಂ ಪೊಲೀಸ್ ಠಾಣೆಯಲ್ಲಿ ಕುತ್ತಿಕೋಲು ಜ್ಯೋತಿಷ್ಯರಿಗೆ ಅಪರಿಚಿತ ಮಹಿಳೆಯೊಬ್ಬರು ವೀಡಿಯೋ ಕಾಲ್ ಮಾಡಿ, ರೆಕಾರ್ಡ್‌ ಮಾಡಿ ಅವರನ್ನು

ಕಾಸರಗೋಡು: ಕುತ್ತಿಕೋಲು ಪ್ರಸಿದ್ಧ ಜ್ಯೋತಿಷ್ಯರ ಬೆತ್ತಲೆ ವೀಡಿಯೋ ವೈರಲ್| ಹಣಕ್ಕಾಗಿ ಬೇಡಿಕೆ ಇಟ್ಟ ಇಬ್ಬರ ವಿರುದ್ದ ಪ್ರಕರಣ ದಾಖಲು Read More »

ಈ ಬ್ರಿಟನ್ ನ್ಯೂಸ್ ಆ್ಯಂಕರ್ ಗೆ ಬರ್ನಾಲ್ ಕೊಡ್ಬೇಕಿತ್ತು| ಚಂದ್ರಯಾನ ಕುರಿತು ಆತ ಹೇಳಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಚಂದ್ರಯಾನದ ಕುರಿತು ಬ್ರಿಟನ್‌ನ ನ್ಯೂಸ್‌ ಆಂಕರ್‌ ಒಬ್ರು ನೀಡಿರೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಾಹ್ಯಾಕಾಶದಲ್ಲಿ ಸಾಧನೆ ಮಾಡ್ತಿರುವ, ಚಂದ್ರನಲ್ಲಿಗೆ ತಲುಪುವ ಸಾಮರ್ಥ್ಯ ಇರೋ ದೇಶಕ್ಕೆ ವಿದೇಶಿ ನೆರವಿನ ಅಗತ್ಯ ಇರೋದಿಲ್ಲ. ಹೀಗಾಗಿ 2016 ರಿಂದ 2021ರವರೆಗೆ ಬ್ರಿಟನ್‌ ಭಾರತಕ್ಕೆ ನೀಡಿರುವ ಸುಮಾರು 2,388 ಕೋಟಿ ರೂಪಾಯಿ ನೆರವನ್ನ ಭಾರತ ವಾಪಸ್‌ ಕೊಡ್ಬೇಕು ಅಂತ ಜಿಬಿ ನ್ಯೂಸ್‌ ಅನ್ನೋ ನ್ಯೂಸ್ ಚಾನೆಲ್‌ನ ಆಂಕರ್ ಪ್ಯಾಟ್ರಿಕ್‌ ಕ್ರಿಸ್ಟ್ಸ್‌ ಹೇಳಿದಾರೆ. ಈ ಹೇಳಿಕೆಗೆ ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಬ್ರಿಟನ್ ನ್ಯೂಸ್ ಆ್ಯಂಕರ್ ಗೆ ಬರ್ನಾಲ್ ಕೊಡ್ಬೇಕಿತ್ತು| ಚಂದ್ರಯಾನ ಕುರಿತು ಆತ ಹೇಳಿದ್ದೇನು ಗೊತ್ತಾ? Read More »

ನಟ ದರ್ಶನ್ ರಿಂದ ಕ್ಷಮಾಪಣೆ| ದೃಶ್ಯ ಮಾಧ್ಯಮಗಳಿಂದ ಬಹಿಷ್ಕಾರ ತೆರವು

ಸಮಗ್ರ ನ್ಯೂಸ್: ಸ್ಯಾಂಡಲ್​ವುಡ್ ಸ್ಟಾರ್ ಡಿ ಬಾಸ್ ದರ್ಶನ್ ಹಾಗೂ ಮೀಡಿಯಾ ಮಧ್ಯೆ ಇರುವ ಮುನಿಸು ಸ್ವಲ್ಪ ದೀರ್ಘವೇ ಆಗಿತ್ತು. ಮೀಡಿಯಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಇದ್ದಂತಹ ಕಹಿ ಮುನಿಸು ಕೊನೆಗೂ ಎಂಡ್ ಆಗಿದೆ. ಅಂತೂ ಚಾಲೆಂಜಿಂಗ್ ಸ್ಟಾರ್ ಈ ಬಗ್ಗೆ ಕ್ಷಮೆ ಕೇಳಿದ್ದು ಮಾಧ್ಯಮ ಮಂದಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ದರ್ಶನ್ ಇನ್​ಸ್ಟಾಗ್ರಾಮ್​ನಲ್ಲಿ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದು ಅದಕ್ಕೆ ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ,

ನಟ ದರ್ಶನ್ ರಿಂದ ಕ್ಷಮಾಪಣೆ| ದೃಶ್ಯ ಮಾಧ್ಯಮಗಳಿಂದ ಬಹಿಷ್ಕಾರ ತೆರವು Read More »

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ| ರೋಡ್ ಶೋ ಕ್ಯಾನ್ಸಲ್, ಬಿಜೆಪಿ ಬಾವುಟಕ್ಕೂ ಇಲ್ಲ ಅವಕಾಶ

ಸಮಗ್ರ ನ್ಯೂಸ್: ಚಂದ್ರಯಾನ -3 ಸಕ್ಸಸ್ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಬಿಜೆಪಿ ಪ್ರಧಾನಿ ಮೋದಿ ರೋಡ್ ಶೋ ನಡೆಸಲು ನಿರ್ಧರಿಸಿತ್ತು, ಆದರೆ ಕೊನೇ ಕ್ಷಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ ರದ್ದಾಗಿದೆ. ಅದೇ ರೀತಿ ಎಲ್ಲಿಯೂ ಕೂಡ ಬಿಜೆಪಿ ಬಾವುಟ ಕಟ್ಟುವ ಹಾಗಿಲ್ಲ. ಬರೀ ತ್ರಿವಣ ಧ್ವಜ ಮಾತ್ರ ಹಾರಾಡಬೇಕು ಎಂದು ಖಡಕ್ ಆದೇಶ ಹೊರಡಿಸಲಾಗಿದೆ. ಮೋದಿ ಈಗ ಹೇಳಲಾದ ಮಾರ್ಗದ ಮೂಲಕವೇ ಬರಲಿದ್ದು,

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ| ರೋಡ್ ಶೋ ಕ್ಯಾನ್ಸಲ್, ಬಿಜೆಪಿ ಬಾವುಟಕ್ಕೂ ಇಲ್ಲ ಅವಕಾಶ Read More »

ಸುಳ್ಯ: ವೆಂಕಟರಮಣ ಕ್ರೆ.ಕೋ.ಆಪರೇಟಿವ್ ಸೊಸೈಟಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದ ಸದಸ್ಯ ಗ್ರಾಹಕರ ಮಕ್ಕಳಿಗೆ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ವಿದ್ಯಾರ್ಥಿ ವೇತನ ನೀಡಲಿದ್ದು ಈ ವಿದ್ಯಾರ್ಥಿಗಳು ದಿನಾಂಕ ಸೆ.09ರ ಮೊದಲು ಸಂಘಕ್ಕೆ ಅರ್ಜಿ ಸಲ್ಲಿಸತಕ್ಕದ್ದು, ಹೆಚ್ಚಿನ ವಿವರಗಳಿಗೆ ಹತ್ತಿರದ ಶಾಖೆಯನ್ನು ಸಂಪರ್ಕಿಸಬೇಕಾಗಿ ಸಂಘದ

ಸುಳ್ಯ: ವೆಂಕಟರಮಣ ಕ್ರೆ.ಕೋ.ಆಪರೇಟಿವ್ ಸೊಸೈಟಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Read More »

ಚುನಾವಣಾ ವಂಚನೆ; ಡೊನಾಲ್ಡ್ ಟ್ರಂಪ್ ಅರೆಸ್ಟ್

ಸಮಗ್ರ ನ್ಯೂಸ್: ಚುನಾವಣಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಬಂಧಿಸಿದ್ದಾರೆ. 2020ರ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ, ಅಕ್ರಮ ಆರೋಪ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಗಳ ಮೇರೆಗೆ ಜಾರ್ಜಿಯಾ ಪೊಲೀಸರು, ಔಪಚಾರಿಕವಾಗಿ ಟ್ರಂಪ್​ರನ್ನು​​​​​​ ಬಂಧಿಸಿದ್ದು, ಸದ್ಯ ಅಟ್ಲಾಂಟಾದ ಫುಲ್ಟನ್ ಕೌಂಟಿ

ಚುನಾವಣಾ ವಂಚನೆ; ಡೊನಾಲ್ಡ್ ಟ್ರಂಪ್ ಅರೆಸ್ಟ್ Read More »

ಹವಾಮಾನ ವರದಿ| ದುರ್ಬಲಗೊಂಡ ಮುಂಗಾರು; ಕರಾವಳಿಯಲ್ಲಿ ಚದುರಿದಂತೆ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಬಿಸಿಲ ಝಳ ಹೆಚ್ಚಾಗಿದೆ, ಆದರೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ,ಮಂಡ್ಯ, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ನೈಋತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು. ಬೆಂಗಳೂರಿನಲ್ಲಿ ಬೆಳಗ್ಗೆ ಸೂರ್ಯ ಕಾಣಿಸಿಕೊಳ್ಳಲಿದ್ದು,

ಹವಾಮಾನ ವರದಿ| ದುರ್ಬಲಗೊಂಡ ಮುಂಗಾರು; ಕರಾವಳಿಯಲ್ಲಿ ಚದುರಿದಂತೆ ಮಳೆ ಸಾಧ್ಯತೆ Read More »

ವರವ ಕೊಡೇ ತಾಯಿ ಮಹಾಲಕ್ಷ್ಮಿ| ನಿತ್ಯಚಂಚಲೆಯ ಒಲಿಸಿಕೊಳ್ಳೋದು ಹೇಗೆ? ಹಬ್ಬದ ಮಹತ್ವ ತಿಳಿಯೋಣ ಬನ್ನಿ…

ಸಮಗ್ರ ವಿಶೇಷ: ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ವರಮಹಾಲಕ್ಷ್ಮೀ ಹಬ್ಬವನ್ನು ಇಂದು (ಶುಕ್ರವಾರ) ಎಲ್ಲೆಡೆ ಆಚರಿಸಲಾಗುತ್ತಿದೆ. ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ,

ವರವ ಕೊಡೇ ತಾಯಿ ಮಹಾಲಕ್ಷ್ಮಿ| ನಿತ್ಯಚಂಚಲೆಯ ಒಲಿಸಿಕೊಳ್ಳೋದು ಹೇಗೆ? ಹಬ್ಬದ ಮಹತ್ವ ತಿಳಿಯೋಣ ಬನ್ನಿ… Read More »