August 2023

ಶೀಘ್ರದಲ್ಲೇ ಕರ್ನಾಟಕ ಬಿಜೆಪಿ ಮುಕ್ತವಾಗಲಿದೆ – ಎಂ‌.ಪಿ ರೇಣುಕಾಚಾರ್ಯ

ಸಮಗ್ರ ನ್ಯೂಸ್: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ಮುಂದುವರಿದಿದ್ದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ʼʼಶೀಘ್ರದಲ್ಲೇ ರಾಜ್ಯ ಬಿಜೆಪಿ ಮುಕ್ತವಾಗಲಿದೆʼʼ ಎಂದು ಭವಿಷ್ಯ ನುಡಿದಿದ್ದಾರೆ. ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ.ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆʼʼ ಎಂದು ಕಿಡಿಕಾರಿದರು. ʼʼಬಿಜೆಪಿ ನಾಯಕರು ಭ್ರಮೆಯಲ್ಲಿ ಬದುಕುತ್ತಿದ್ದು, ಇದರಿಂದ ಮೊದಲು ಹೊರಬರಬೇಕು. ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇನ್ನೂ ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲ. […]

ಶೀಘ್ರದಲ್ಲೇ ಕರ್ನಾಟಕ ಬಿಜೆಪಿ ಮುಕ್ತವಾಗಲಿದೆ – ಎಂ‌.ಪಿ ರೇಣುಕಾಚಾರ್ಯ Read More »

ರಕ್ಷಾ ಬಂಧನ ಬಾಂಧವ್ಯದ ಬೆಸುಗೆ..!

ಸಮಗ್ರ ನ್ಯೂಸ್: ರಕ್ಷೆ ಸ್ನೇಹದ ಸಂಕೇತ, ಸಹಕಾರದ ಸಂಕೇತ, ಸ್ವಾಭಿಮಾನದ ಸಂಕೇತ. ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಕೈಗೆ ರಕ್ಷೆಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ಸಂಕೇತವಾಗಿದೆ. ರಕ್ಷಾ ಬಂಧನ, ಅಥವಾ ರಾಖಿ, ಒಡಹುಟ್ಟಿದವರ ನಡುವಿನ ಮುರಿಯಲಾಗದ ಮತ್ತು ವಿಶೇಷ ಬಂಧಗಳನ್ನು ಆಚರಿಸುವ ಮಂಗಳಕರ ಹಿಂದೂ ಹಬ್ಬವಾಗಿದೆ. ಈ ಹಬ್ಬವನ್ನು

ರಕ್ಷಾ ಬಂಧನ ಬಾಂಧವ್ಯದ ಬೆಸುಗೆ..! Read More »

ಪ್ರೀತಿ, ಕಾಳಜಿಯ ಪ್ರತೀಕ ‘ರಕ್ಷಾ ಬಂಧನ’

ಸಮಗ್ರ ನ್ಯೂಸ್: ಪರಸ್ಪರ ನಿರಪೇಕ್ಷ ಪ್ರೀತಿ, ಕಾಳಜಿ, ಜವಾಬ್ದಾರಿ ಹಾಗೂ ಸಹೋದರ – ಸಹೋದರಿಯ ಉತ್ತಮ ಸಂಬಂಧವನ್ನು ನಿರ್ಮಾಣ ಮಾಡುವ ಹಬ್ಬ ರಕ್ಷಾ ಬಂಧನ. ಸನಾತನ ಧರ್ಮದಲ್ಲಿ ರಕ್ಷಾಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿ ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆ ಮಾಡಬೇಕು ಎನ್ನುವ ಉದ್ದೇಶವಿರುತ್ತದೆ.

ಪ್ರೀತಿ, ಕಾಳಜಿಯ ಪ್ರತೀಕ ‘ರಕ್ಷಾ ಬಂಧನ’ Read More »

ಪ್ರಗ್ಯಾನ್ ನಿಂದ ಚಂದ್ರನ ಹಲವು ರಹಸ್ಯ ಬಹಿರಂಗ| ಶಶಿಯ ಮೇಲಿದೆ ಹಲವು ಧಾತುವರ್ಗ

ಸಮಗ್ರ ನ್ಯೂಸ್: ಚಂದ್ರಯಾನ-3 ಪ್ರಗ್ಯಾನ್‌ ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣವು ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯ ಧಾತುರೂಪದ ಸಂಯೋಜನೆಯ ಮೇಲೆ ಮೊಟ್ಟಮೊದಲ ಇನ್-ಸಿಟು ಮಾಪನಗಳನ್ನು ಮಾಡಿದೆ. ಈ ಇನ್-ಸಿಟು ಮಾಪನಗಳು ಈ ಪ್ರದೇಶದಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ದೃಢೀಕರಿಸಿದೆ. ಇದು ಕಕ್ಷೆಯಲ್ಲಿನ ಉಪಕರಣಗಳಿಂದ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಲಿಬ್ಸ್‌ ಎನ್ನುವುದು ವೈಜ್ಞಾನಿಕ ತಂತ್ರವಾಗಿದ್ದು, ಇದು ತೀವ್ರವಾದ ಲೇಸರ್ ಪಲ್ಸ್‌ಗಳಿಗೆ ಒಡ್ಡಿಕೊಳ್ಳುವ ಮೂಲಕ ವಸ್ತುಗಳ ಸಂಯೋಜನೆಯನ್ನು ವಿಶ್ಲೇಷಿಸುತ್ತದೆ. ಒಂದು ಉನ್ನತ-ಶಕ್ತಿಯ ಲೇಸರ್ ಪಲ್ಸ್ ಬಂಡೆ

ಪ್ರಗ್ಯಾನ್ ನಿಂದ ಚಂದ್ರನ ಹಲವು ರಹಸ್ಯ ಬಹಿರಂಗ| ಶಶಿಯ ಮೇಲಿದೆ ಹಲವು ಧಾತುವರ್ಗ Read More »

ಸುಳ್ಯ:ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ| ಸ್ಥಳಕ್ಕೆ ಕಾಂಗ್ರೆಸ್ ಮುಖಂಡರಿಂದ ಭೇಟಿ ಪರಿಶೀಲನೆ

ಸಮಗ್ರ ನ್ಯೂಸ್:ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರಕಾರದ ಮಹಾತ್ವಕಾಂಕ್ಷಿ ಮಹಿಳಾ ಸಬಳೀಕರಣ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಆ. 30ರಂದು ರಾಜ್ಯಾದ್ಯಂತ ನಡೆಯಲಿದೆ. ಎಐಸಿಸಿ ನಾಯಕರು, ಮುಖ್ಯಮಂತ್ರಿಗಳು, ಉಪ-ಮುಖ್ಯಮಂತ್ರಿ ಹಾಗೂ ಸಚಿವರುಗಳ ನೇತೃತ್ವದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮವು ರಾಜ್ಯದಾದ್ಯಂತ ಸುಮಾರು 11 ಸಾವಿರ ಕಡೆಗಳಲ್ಲಿ ಏಕ ಕಾಲದಲ್ಲಿ ನೇರಪ್ರಸಾರಗೊಳ್ಳಲಿದೆ. ಸುಳ್ಯ ನಗರಪಂಚಾಯತ್ ವ್ಯಾಪ್ತಿಯ ಮುಖ್ಯ ಕಾರ್ಯಕ್ರಮ ಸುಳ್ಯದ ಲಯನ್ಸ್ ಸಭಾಭವನದಲ್ಲಿ ನಡೆಯಲಿದೆ. ಸುಳ್ಯದ ನಗರ ಪಂಚಾಯತ್ ಕಚೇರಿಯಲ್ಲಿ ಆ. 29ರಂದು ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ

ಸುಳ್ಯ:ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ| ಸ್ಥಳಕ್ಕೆ ಕಾಂಗ್ರೆಸ್ ಮುಖಂಡರಿಂದ ಭೇಟಿ ಪರಿಶೀಲನೆ Read More »

ಬಂಟ್ವಾಳ: ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್| ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವಿಡಿಯೋ ವ್ಯಕ್ತಿಯೋರ್ವ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಪ್ರಕರಣ ಬಂಟ್ವಾಳದಲ್ಲಿ ವರದಿಯಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಜಕ್ರಿಬೆಟ್ಟು ಎಂಬಲ್ಲಿನ‌ ಮನೆಯಲ್ಲಿ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ವ್ಯಕ್ತಿಯೋರ್ವ ಗೋಡೆಯ ಸಂದಿ ಮಧ್ಯೆ ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಕಂಡ ಯುವತಿ ಜೋರಾಗಿ ಬೊಬ್ಬೆ ಹಾಕಿದ್ದಾಳೆ, ಈ ಸಂದರ್ಭ

ಬಂಟ್ವಾಳ: ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್| ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು Read More »

ಮಡಿಕೇರಿಯಿಂದ ಮೈಸೂರಿಗೆ ಸಾಗಿದ ಜನರಲ್ ತಿಮ್ಮಯ್ಯ ಪ್ರತಿಮೆ

ಸಮಗ್ರ ನ್ಯೂಸ್:ಆ. 21 ರಂದು ಸರಕಾರಿ ಬಸ್ ಡಿಕ್ಕಿಯಾಗಿ ಹಾನಿಗೊಳಗಾಗಿದ್ದ ಪ್ರತಿಮೆ 50 ವಷ೯ ಪರಂಪರೆಯುಳ್ಳ ವೀರಸೇನಾನಿ ಪ್ರತಿಮೆಯನ್ನು ಮಡಿಕೇರಿಯಿಂದ ಮೈಸೂರಿನಿಂದ ಮಾಡಿಕೇರಿಗೆ ಸಾಗಿಸಲಾಯಿತು. ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ಮಡಿಕೇರಿಯ ತಿಮ್ಮಯ್ಯ ಮ್ಯೂಸಿಯಂ ಆವರಣದಲ್ಲಿಡಲಾಗಿತ್ತು. ಇದೀಗ ಪ್ರತಿಮೆಗೆ ಆದ ಹಾನಿಯನ್ನು ಸರಿಪಡಿಸಿ, ಸೂಕ್ತ ರೀತಿಯಲ್ಲಿ ದುರಸ್ಥಿಪಡಿಸುವ ನಿಟ್ಟಿನಲ್ಲಿ ಮೈಸೂರಿಗೆ ಸಾಗಾಣೆ ಮಾಡಲಾಯಿತು. ಈ ಪ್ರತಿಮೆಯನ್ನು ಸ್ಥಾಪಿಸಿದ್ದ ಹಿರಿಯರಾದ ಎಂ.ಸಿ.ನಾಣಯ್ಯ ಸಲಹೆ ಮೇರೆಗೆ ಇದೇ ಪ್ರತಿಮೆಯನ್ನು ದುರಸ್ಥಿ ಪಡಿಸಲು ಶಾಸಕರಾದ ಡಾ.ಮಂಥರ್ ಗೌಡ, ಎ.ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟರಾಜು ಅವರ

ಮಡಿಕೇರಿಯಿಂದ ಮೈಸೂರಿಗೆ ಸಾಗಿದ ಜನರಲ್ ತಿಮ್ಮಯ್ಯ ಪ್ರತಿಮೆ Read More »

ದೇಶವಾಸಿಗಳಿಗೆ ಬಿಗ್ ರಿಲೀಪ್| ಅಡುಗೆ ಅನಿಲ ಬೆಲೆಯಲ್ಲಿ ಭಾರೀ ಇಳಿಕೆ

ಸಮಗ್ರ ನ್ಯೂಸ್: ಹಣದುಬ್ಬರದಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ಸರ್ಕಾರವು ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ 200 ರೂ.ವರೆಗೆ ಕಡಿತಗೊಳಿಸಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ 200 ರೂ.ಗಳ ಸಹಾಯಧನವನ್ನ ಸರ್ಕಾರ ಘೋಷಿಸಿದೆ. ಉಜ್ವಲ ಯೋಜನೆಯಡಿ ಬರುವ ಫಲಾನುಭವಿಗಳಿಗೆ ಈ ಸಹಾಯಧನವನ್ನ ನೀಡಲಾಗುವುದು. ಆಗಸ್ಟ್ ಒಂದರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 100 ರೂಪಾಯಿ ಕಡಿತಗೊಳಿಸಿದ್ದವು. ಆದ್ರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಂದ್ಹಾಗೆ, ಪೆಟ್ರೋಲಿಯಂ

ದೇಶವಾಸಿಗಳಿಗೆ ಬಿಗ್ ರಿಲೀಪ್| ಅಡುಗೆ ಅನಿಲ ಬೆಲೆಯಲ್ಲಿ ಭಾರೀ ಇಳಿಕೆ Read More »

ದ.ಕ. ಜಿಲ್ಲೆಯಲ್ಲಿ ಸೆ. ನಿಂದ ಶನಿವಾರ ಪೂರ್ತಿ ತರಗತಿ ನಡೆಸಲು ಸೂಚನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಗೆ ನೀಡಲಾಗಿದ್ದ ರಜೆಯನ್ನು ಸರಿದೂಗಿಸಲು ಸೆಪ್ಟೆಂಬರ್ ನಿಂದ ಶನಿವಾರ ಪೂರ್ಣ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಸೆಪ್ಟೆಂಬರ್ ಮೊದಲ ವಾರದಿಂದ ಆರಂಭಿಸಿ ಒಟ್ಟು 14 ಶನಿವಾರ ಇಡೀ ದಿನ ಶಾಲೆ ನಡೆಸುವಂತೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದ್ದಾರೆ. ಜುಲೈನಲ್ಲಿ ಸುರಿದ ಅತೀ ಹೆಚ್ಚು ಮಳೆಗೆ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿಯ ನಿರ್ದೇಶನದಂತೆ ಏಳು ದಿನ ರಜೆ ಸಾರಲಾಗಿತ್ತು. ಅಂದಿನ ರಜೆಗಳನ್ನು ಭರ್ತಿ

ದ.ಕ. ಜಿಲ್ಲೆಯಲ್ಲಿ ಸೆ. ನಿಂದ ಶನಿವಾರ ಪೂರ್ತಿ ತರಗತಿ ನಡೆಸಲು ಸೂಚನೆ Read More »

ಸಂಗೀತ ನಿರ್ದೇಶಕ ಹಂಸಲೇಖರಿಗೆ ಒಲಿದ ಮೈಸೂರು ದಸರಾ ಉದ್ಘಾಟನಾ ಭಾಗ್ಯ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿಯ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಬಾರಿಯ ದಸರಾ ಉದ್ಘಾಟನೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ನೆರವೇರಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸಂಗೀತ ನಿರ್ದೇಶಕ ಹಂಸಲೇಖರಿಗೆ ಒಲಿದ ಮೈಸೂರು ದಸರಾ ಉದ್ಘಾಟನಾ ಭಾಗ್ಯ Read More »