ಸುಳ್ಯ: ಭುಗಿಲೆದ್ದ ಅಸಮಾಧಾನ| ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಹಾಜರಾಗದ ಸ್ವಪಕ್ಷೀಯ ಸದಸ್ಯರು!?
ಸಮಗ್ರ ಸುದ್ದಿ: ಪಂಚಾಯತ್ ನ ಸದಸ್ಯರ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ವಪಕ್ಷೀಯ ಸದಸ್ಯರೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಹಾಜರಾಗದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾ.ಪಂ ನಲ್ಲಿ ನಡೆದಿದೆ. ಗುತ್ತಿಗಾರು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಬಿ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿಗೆ ಮೀಸಲಾತಿ ನಿಗದಿಯಾಗಿ ಇಂದು(ಆ.10) ಚುನಾವಣೆ ನಡೆದಿದೆ. ಆದರೆ ಪಕ್ಷದೊಳಗಿನ ಅಸಮಾಧಾನದಿಂದ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಒಂದನೇ ವಾರ್ಡ್ ನ ನಾಲ್ಕೂ ಸದಸ್ಯರು ಗೈರಾಗಿದ್ದರು. ಇನ್ನು […]