August 2023

‘ಇಂದಿರಾ ಕ್ಯಾಂಟೀನ್’ ಊಟದ ಬೆಲೆಯಲ್ಲಿ ಹೆಚ್ಚಳವಿಲ್ಲ – ಎಚ್.ಕೆ ಪಾಟೀಲ್

ಸಮಗ್ರ ನ್ಯೂಸ್: ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಈ ಬಗ್ಗೆ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಸಚಿವ ಹೆಚ್​ಕೆ ಪಾಟೀಲ್ ಅವರೇ ಇದೀಗ ಬೆಲೆ ಏರಿಕೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬೆಲೆ ಏರಿಕೆ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ ಹೆಚ್​ಕೆ ಪಾಟೀಲ್, ಇಂದಿರಾ ಕ್ಯಾಂಟೀನ್‌ ಊಟದ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ. ಯಥಾ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತೆ ದರ ಇರಲಿದೆ. ಅದರಂತೆ ತಿಂಡಿ ಬೆಲೆ […]

‘ಇಂದಿರಾ ಕ್ಯಾಂಟೀನ್’ ಊಟದ ಬೆಲೆಯಲ್ಲಿ ಹೆಚ್ಚಳವಿಲ್ಲ – ಎಚ್.ಕೆ ಪಾಟೀಲ್ Read More »

ಕಣಿವೆಗೆ ಉರುಳಿದ ಸೇನಾ ವಾಹನ|ಒಂಬತ್ತು ಸೇನಾ ಸಿಬ್ಬಂದಿ ಹುತಾತ್ಮ

ಸಮಗ್ರ ನ್ಯೂಸ್: ‘ಲಡಾಖ್’ನಲ್ಲಿ ಸೇನಾ ವಾಹನವು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಒಂಬತ್ತು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಈ ಕುರಿತು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದು, ಲಡಾಖ್’ನಲ್ಲಿ ಕಲ್ಲಿನ ಕಣಿವೆಗೆ ಸೇನಾ ವಾಹನ ಡಿಕ್ಕಿ ಹೊಡೆದ ಪರಿಣಾಮ, ಕಂದಕಕ್ಕೆ ಕಾರು ಬಿದ್ದು ಏಳು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ. ಕ್ಯಾರಿ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ನಡೆದ ಅಪಘಾತದಲ್ಲಿ ಏಳು ಭಾರತೀಯ ಸೇನಾ ಸೈನಿಕರು

ಕಣಿವೆಗೆ ಉರುಳಿದ ಸೇನಾ ವಾಹನ|ಒಂಬತ್ತು ಸೇನಾ ಸಿಬ್ಬಂದಿ ಹುತಾತ್ಮ Read More »

ವಿಧಾನ ಪರಿಷತ್ ಗೆ ಮೂವರು ನಾಮನಿರ್ದೇಶನ

ಸಮಗ್ರ ನ್ಯೂಸ್: ವಿಧಾನ ಪರಿಷತ್‌ಗೆ ಕೊನೆಗೂ ಮೂವರು ಹೆಸರು ಫೈನಲ್ ಆಗಿದೆ. ಉಮಾಶ್ರೀ, ಸುಧಾಮ್ ದಾಸ್ ಹಾಗೂ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರನ್ನು ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಮೂವರು ಹೆಸರನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ. ವಿಧಾನ ಪರಿಷತ್‌ಗೆ ನಟಿ ಉಮಾಶ್ರೀ, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಹಾಗೂ ನಿವೃತ್ತ ಇ.ಡಿ ಅಧಿಕಾರಿ ಸುಧಾಮ್ ದಾಸ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮ್ಯಯ ಅಂತಿಮಗೊಳಿಸಿ ರಾಜ್ಯಪಾಲರಿಗೆ ರವಾನಿಸಿದ್ದರು. ಆದರೆ ಸುಧಾಮ್ ದಾಸ್ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ಸ್ವಪಕ್ಷೀಯರಿಂದಲೇ ಆಕ್ಷೇಪ ಕೇಳಿಬಂದಿತ್ತು. ಈ

ವಿಧಾನ ಪರಿಷತ್ ಗೆ ಮೂವರು ನಾಮನಿರ್ದೇಶನ Read More »

ನಾಗರ ಪಂಚಮಿಗೆ ರಜೆ ಘೋಷಿಸಿ| ಜಿಲ್ಲಾಧಿಕಾರಿಗೆ ಶಾಸಕ‌ ಸುನಿಲ್ ಮನವಿ

ಸಮಗ್ರ ನ್ಯೂಸ್: ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 21 ರಂದು ರಜೆ ಘೋಷಿಸುವಂತೆ ಕಾರ್ಕಳ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ‘ನಾಗರ ಪಂಚಮಿಯು ದಕ್ಷಿಣ ಕನ್ನಡ ಮತ್ತು ಉಡುಪಿಯ ಅವಳಿ ಜಿಲ್ಲೆಗಳನ್ನು ಒಳಗೊಂಡಿರುವ ತುಳುನಾಡಿನಲ್ಲಿ ಹಿಂದೂಗಳು ಮತ್ತು ಜೈನರು ಆಚರಿಸುವ ನಾಗ ಪಂಚಮಿ ಪ್ರಮುಖ ಸಾಂಪ್ರದಾಯಿಕ ಹಬ್ಬವಾಗಿದ್ದು, ದೈವ ದೇವರುಗಳ ಆರಧಾನೆಯಲ್ಲಿ ನಾಗರಾಧನೆಯು ಪ್ರಮುಖವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ರಜೆ ಘೋಷಿಸುವಂತೆ

ನಾಗರ ಪಂಚಮಿಗೆ ರಜೆ ಘೋಷಿಸಿ| ಜಿಲ್ಲಾಧಿಕಾರಿಗೆ ಶಾಸಕ‌ ಸುನಿಲ್ ಮನವಿ Read More »

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ| ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿಗಳಿಂದ ಆದೇಶ

ಸಮಗ್ರ ನ್ಯೂಸ್: ಕೇರಳದ ಕನಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಹಂದಿಗಳನ್ನು ಎರಡು ಫಾರ್ಮ್ಗಳಲ್ಲಿ ಕೊಲ್ಲಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮಲೆಯಂಪಾಡಿನಲ್ಲಿ ಖಾಸಗಿ ಫಾರ್ಮ್ ನಲ್ಲಿ ಹಂದಿ ಜ್ವರ ಪತ್ತೆಯಾಗಿದ್ದು, ಈ ಬಗ್ಗೆ ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ. ನಂತರ, ಜಿಲ್ಲಾಧಿಕಾರಿಗಳು ಹಂದಿಗಳನ್ನು ಮಲೆಯಂಪಾಡಿಯಲ್ಲಿರುವ ಮತ್ತು 10 ಕಿಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ ನೀಡಿದ್ದಾರೆ. ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಒಂದು ಕಿ.ಮೀ ಪ್ರದೇಶ ಮತ್ತು 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯವೆಂದು

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ| ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿಗಳಿಂದ ಆದೇಶ Read More »

ಲಂಡನ್: ಒಂದೇ ವರ್ಷದಲ್ಲಿ 7 ಶಿಶುಗಳನ್ನ ಹತ್ಯೆ ಮಾಡಿದ ಬ್ರಿಟಿಷ್‌ ನರ್ಸ್| ಭಾರತೀಯ ಮೂಲದ ವೈದ್ಯನಿಂದ ಬಲೆಗೆ

ಸಮಗ್ರ ನ್ಯೂಸ್: ಕಳೆದ ಒಂದು ವರ್ಷದಲ್ಲಿ 7 ನವಜಾತ ಶಿಶುಗಳನ್ನ ಹತ್ಯೆ ಮಾಡಿ, ಇನ್ನೂ 6 ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದ ಬ್ರಿಟಿಷ್ ನರ್ಸ್ ಒಬ್ಬಳನ್ನು ತಪ್ಪಿತಸ್ಥೆ ಎಂದು ನ್ಯಾಯಾಲಯ ಪರಿಗಣಿಸಿದ್ದು, ಆರೋಪಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಕ್ರೌನ್ ಪ್ರಾಸಿಕ್ಯೂಷನ್ ಸೇವೆ ತಿಳಿಸಿದೆ. ಹಂತಕಿ ಲೂಸಿ ಲೆಟ್ಬಿ ಎಂದು ಗುರುತಿಸಲಾಗಿದ್ದು, 2015ರ ಜೂನ್ ರಿಂದ 2016ರ ಜೂನ್ ನಡುವೆ ವಾಯವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಸರಣಿ ಕೊಲೆಗಳನ್ನ ಮಾಡಿದ್ದಾಳು. ಕಳೆದ ಅಕ್ಟೋಬರ್‌ನಿಂದ ಪ್ರಕರಣದ ವಿಚಾರಣೆ

ಲಂಡನ್: ಒಂದೇ ವರ್ಷದಲ್ಲಿ 7 ಶಿಶುಗಳನ್ನ ಹತ್ಯೆ ಮಾಡಿದ ಬ್ರಿಟಿಷ್‌ ನರ್ಸ್| ಭಾರತೀಯ ಮೂಲದ ವೈದ್ಯನಿಂದ ಬಲೆಗೆ Read More »

ಹಾಸನ:ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಲೈನ್‍ಮೆನ್ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿ ಚೆಸ್ಕಾಂ ನೌಕರರ ಮೇಲೆ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆನರಸೀಪುರದ ಕಡವಿನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಹಾಗೂ ಕೃಷ್ಣಮೂರ್ತಿ ಎಂಬ ಚೆಸ್ಕಾಂ ಸಿಬ್ಬಂದಿಗಳಿಗೆ ಆ 18ರಂದು ಸಂಜೆ ಇಬ್ಬರೂ ನೌಕರರು ಕಡವಿನಹೊಸಹಳ್ಳಿ ಗ್ರಾಮದಲ್ಲಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವಕರು ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ಎಂದು ಲೈನ್‍ಮೆನ್‍ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ಮಾಡಿದ್ದಾರೆ. ಬಳಿಕ ಇದು ವಿಕೋಪಕ್ಕೆ ತಿರುಗಿ ದೊಣ್ಣೆಗಳಿಂದ

ಹಾಸನ:ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಲೈನ್‍ಮೆನ್ ಮೇಲೆ ಹಲ್ಲೆ Read More »

‘ಗೃಹಲಕ್ಷ್ಮಿ’ ಯೋಜನೆಗೆ ಆ. 30ರಂದು ಚಾಲನೆ -ಲಕ್ಷ್ಮೀ ಹೆಬ್ಬಾಳ್ಕರ್

ಸಮಗ್ರ ನ್ಯೂಸ್: ರಾಜ್ಯ ಸರಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಚಾಲನೆ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವೆ, ಚಾಮುಂಡೇಶ್ವರಿ ತಾಯಿಯ ಕ್ಷೇತ್ರದಲ್ಲಿ ಈ ಯೋಜನೆಗೆ ಚಾಲನೆ ಸಿಗುತ್ತಿರುವುದು ನನ್ನ ಅದೃಷ್ಟ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮ ಸಿದ್ಧತೆ ಕುರಿತು ವೀಕ್ಷಿಸಲು ಇಂದು ಮೈಸೂರಿಗೆ ತೆರಳುತ್ತಿರುವ ಅವರು ಮೈಸೂರು, ಮಂಡ್ಯ

‘ಗೃಹಲಕ್ಷ್ಮಿ’ ಯೋಜನೆಗೆ ಆ. 30ರಂದು ಚಾಲನೆ -ಲಕ್ಷ್ಮೀ ಹೆಬ್ಬಾಳ್ಕರ್ Read More »

ಶಾಲಾ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್| ಮುಂದಿನ ತಿಂಗಳಿನಿಂದ ‘ಶುಚಿ’ ಯೋಜನೆ ಮತ್ತೆ ಜಾರಿ

ಸಮಗ್ರ ನ್ಯೂಸ್: ಕರ್ನಾಟಕದ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸುವ ಶುಚಿ ಯೋಜನೆಯು ಸೆಪ್ಟೆಂಬರ್ 10 ರಿಂದ ಮತ್ತೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿದುಬಂದಿದೆ. ಯುವತಿಯರಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು 2014 ರಲ್ಲಿ ಶುಚಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಕೋವಿಡ್ ನಂತರ ಯೋಜನೆ ಸ್ಥಗಿತಗೊಂಡಿತ್ತು. ಇದರಿಂದ ಹಣ ನೀಡಿ ಸ್ಯಾನಿಟರಿ ನ್ಯಾಪ್ಕಿನ್ ಖರೀದಿ ಮಾಡಲು ಸಾಧ್ಯವಾಗದೆ ಬಡಮಕ್ಕಳು ಸಂಕಷ್ಟ ಸಿಕುವಂತಾಗಿತ್ತು. ಇದೀಗ ಸರ್ಕಾರ ಯೋಜನೆ ಪುನರಾರಂಭ ಮಾಡಲು ಮುಂದಾಗಿರುವ

ಶಾಲಾ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್| ಮುಂದಿನ ತಿಂಗಳಿನಿಂದ ‘ಶುಚಿ’ ಯೋಜನೆ ಮತ್ತೆ ಜಾರಿ Read More »

ಪತಿಯನ್ನ ಸ್ನಾನಕ್ಕೆ ಕಳುಹಿಸಿ, ಸ್ನೇಹಿತನೊಂದಿಗೆ ಪತ್ನಿ ಎಸ್ಕೇಪ್..!!

ಸಮಗ್ರ ನ್ಯೂಸ್: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಗಂಡನಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾಳೆ ಎಂದು ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ಧಾನೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ರಮೇಶ್ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ರಮೇಶ್ ಜೊತೆಗೆ ಚೆನ್ನಾಗಿಯೇ ಇದ್ದ ಪತ್ನಿ, ಇದೇ ಆಗಸ್ಟ್ 12ರಂದು ಬೆಳಗ್ಗೆ ಪತಿ ರಮೇಶ್‌ನನ್ನು ಸ್ನಾನ ಮಾಡುವಂತೆ ಬಾತ್ ರೂಮ್‌ಗೆ ಕಳುಹಿಸಿ, ಆತ ಒಳಗೆ ಹೋದ ತಕ್ಷಣ ಪತ್ನಿ ಹೊರಗಿನಿಂದ ಬಾತ್‌ರೂಮ್ ಬಾಗಿಲು ಹಾಕಿಕೊಂಡು ಮನೆಯ ಬಾಗಿಲನ್ನೂ ಲಾಕ್

ಪತಿಯನ್ನ ಸ್ನಾನಕ್ಕೆ ಕಳುಹಿಸಿ, ಸ್ನೇಹಿತನೊಂದಿಗೆ ಪತ್ನಿ ಎಸ್ಕೇಪ್..!! Read More »