August 2023

ಮಡಿಕೇರಿ:ಅನಧಿಕೃತ ಮಳಿಗೆ ನಿರ್ಮಾಣ| ಕಣ್ಮುಚ್ಚಿ ಕುಳಿತ ಮಡಿಕೇರಿ ನಗರಸಭೆ

ಸಮಗ್ರ ನ್ಯೂಸ್: ಮಡಿಕೇರಿ ನಗರದ ಚಿಕ್ಕಪೇಟೆಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಹಳೆಯ ಮರ್ಕರ ಕ್ಲಿನಿಕ್ ಜಾಗದಲ್ಲಿ ವರ್ಷಕ್ಕೆ ಮಾತ್ರ ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಳಿಗೆಯ ಖಾಯಂ ರೀತಿಯಲ್ಲಿ ಕಾಣುತ್ತಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಸ್ಥಳದಲ್ಲಿ ಮಳಿಗೆಗಳಿಗೆ ಕೇವಲ ಒಂದು ವರ್ಷಕ್ಕೆ ಮಾತ್ರ ಅನುಮತಿ ಇದೆ. ಆದರೆ ಮಳಿಗೆಗಳ ನಿರ್ಮಾಣದ ತಂತ್ರಜ್ಞಾನಗಳು ಖಾಯಂ ಮಾಡಿದ ರೀತಿ ಕಾಣುತ್ತಿದೆ. ಮಳಿಗೆಯ ನಿರ್ಮಾಣದ ಸಮಯದಲ್ಲಿ ನಗರ ಸಭೆ ವತಿಯಿಂದ ಕೇವಲ […]

ಮಡಿಕೇರಿ:ಅನಧಿಕೃತ ಮಳಿಗೆ ನಿರ್ಮಾಣ| ಕಣ್ಮುಚ್ಚಿ ಕುಳಿತ ಮಡಿಕೇರಿ ನಗರಸಭೆ Read More »

ಕಡಲ ಕಿನಾರೆಯಲ್ಲಿ ಸಾಹಿತಿ ಭುವನೇಶ್ವರಿ ಹೆಗಡೆಯವರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ

ಸಮಗ್ರ ನ್ಯೂಸ್:”ಹಾಸ್ಯ ಮನಸ್ಸುಗಳನ್ನು ಬೆಸೆಯುವುದರೊಂದಿಗೆ, ನೋವುಗಳನ್ನು ಮರೆಸುವ ದಿವ್ಯೌಷಧಿಯೂ ಹೌದು. ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಎಲ್ಲೆಡೆಯೂ ನಾನು ಸಂತೋಷವನ್ನು ಮಾತ್ರ ಕಂಡೆ. ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ  ಯಾರೂ ನೋವುಂಟು ಮಾಡಿದ್ದನ್ನು ನಾನು ಕಂಡೇ ಇಲ್ಲ. ಹುಟ್ಟಿದೂರನ್ನು ಬಿಟ್ಟು ಮಂಗಳೂರಿಗೆ ಬಂದ ಮೇಲೆ ನನ್ನನ್ನು ಇಲ್ಲಿನವರು ಮುಕ್ತವಾಗಿ ಸ್ವೀಕರಿಸಿ, ತುಂಬು ಪ್ರೀತಿಯನ್ನು ಕೊಟ್ಟಿದ್ದಾರೆ. ಹಾಗಿರುವಾಗ ನಾನು ಹಾಸ್ಯ ಬರಹಗಳನ್ನಲ್ಲದೆ ಇನ್ನೇನನ್ನು ತಾನೇ ಬರೆಯಲಿ?” ಎಂದು ಪ್ರಖ್ಯಾತ ಹಾಸ್ಯ ಸಾಹಿತಿ  ಭುವನೇಶ್ವರಿ ಹೆಗಡೆಯವರು ಹೇಳಿದರು. ದಕ್ಷಿಣ ಕನ್ನಡ ಸಾಹಿತ್ಯ

ಕಡಲ ಕಿನಾರೆಯಲ್ಲಿ ಸಾಹಿತಿ ಭುವನೇಶ್ವರಿ ಹೆಗಡೆಯವರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ Read More »

ಕಡಬ ಗೃಹರಕ್ಷಕ ದಳದ ಘಟಕದ ಕಛೇರಿ ಕಟ್ಟಡಕ್ಕೆ ಗುದ್ದಲಿ ಪೂಜೆ…!!

ಸಮಗ್ರ ನ್ಯೂಸ್:ಕಡಬ ತಾಲೂಕಿನ ಗೃಹರಕ್ಷಕ ದಳ ಘಟಕ ಕಛೇರಿಗೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯ ಕ್ರಮ ಆ.20 ರಂದು ನಡೆಯಿತು. ಈ ಶಿಲಾನ್ಯಾಸ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಮತ್ತು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಭೂಮಿ ಪೂಜೆಯ ವೈದಿಕ ವಿಧಿವಿಧಾನವನ್ನು ಪ್ರಸಾದ್ ಕೆದಿಲಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಮಾಂಡೆಂಟ್ ಮಾತನಾಡಿ, ಇನ್ನು ಆರು ತಿಂಗಳ ಒಳಗೆ ಕಟ್ಟಡ ನಿರ್ಮಾಣವಾಗಿ ಗೃಹರಕ್ಷಕರ ಉಪಯೋಗಕ್ಕೆ ದೊರಕುವಂತಾಗಿ ಎಂದು ಶುಭ ಹಾರೈಸಿದರು. ಇನ್ನು ಮುಂದೆ ಗೃಹರಕ್ಷಕರಿಗೆ

ಕಡಬ ಗೃಹರಕ್ಷಕ ದಳದ ಘಟಕದ ಕಛೇರಿ ಕಟ್ಟಡಕ್ಕೆ ಗುದ್ದಲಿ ಪೂಜೆ…!! Read More »

ಶಕ್ತಿ ಯೋಜನೆ ಎಫೆಕ್ಟ್| ದೇವಾಲಯಗಳ ಹುಂಡಿ ಭರ್ತಿ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ಬಂದಿರುವುದು ಶಕ್ತಿ ಯೋಜನೆ. ಈ ಯೋಜನೆಗೆ ಅಭೂತಪೂರ್ವ ಮಹಿಳಾ ಬೆಂಬಲ ದೊರೆತಿದ್ದು ಉಚಿತ ಪ್ರಯಾಣದ ಕಾರಣದಿಂದ ದೇವಾಲಯಗಳ ಆದಾಯವೂ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಸಹ ರಶ್ ಆಗುತ್ತಿವೆ. ಶಕ್ತಿ ಯೋಜನೆಯಿಂದ ದೇವಾಲಯಗಳಿಗೆ ಹರಿದು ಬರುತ್ತಿರುವ ಆದಾಯ ದ್ವಿಗುಣಗೊಂಡಿದೆ. ರಾಜ್ಯ ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಗೆ ಬಂದು ಮೂರು ತಿಂಗಳಾಗಿದೆ. ಸಾರಿಗೆ ನಿಗಮಗಳ ಬಸ್ನಲ್ಲಿ ಉಚಿತ ಪ್ರಯಾಣದ ಲಾಭವನ್ನ ಮಹಿಳೆಯರು ಬಹಳ

ಶಕ್ತಿ ಯೋಜನೆ ಎಫೆಕ್ಟ್| ದೇವಾಲಯಗಳ ಹುಂಡಿ ಭರ್ತಿ Read More »

ವಾಷಿಂಗ್ಟನ್:ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ ಮೂಲಕ ಜನರ ಮನ ಸೆಳೆದಿದ್ದ ಚೀಮ್ಸ್ ನಾಯಿ ಇನ್ನಿಲ್ಲ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ (Mems) ಮೂಲಕ ಜನರ ಮಾನಸೆಳೆದಿದ್ದ ಚೀಮ್ಸ್ (Cheems) ನಾಯಿ ಸಾವನ್ನಪ್ಪಿರುವುದಾಗಿ ಅದರ ಮಾಲೀಕರು ತಿಳಿಸಿದ್ದಾರೆ. ಹಾಸ್ಯಮಯ ಸನ್ನಿವೇಶಗಳನ್ನು ಮೀಮ್ಸ್‌ಗಳ ಮೂಲಕ ರಚಿಸುವ ಸಂದರ್ಭದಲ್ಲಿ ಚೀಮ್ಸ್‌ನ ವೈರಲ್ ಫೋಟೋವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆದರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚೀಮ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂಧರ್ಭದಲ್ಲಿ ಮಲಗಿದ್ದು, ಬಳಿಕ ಏಳಲಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಚೀಮ್ಸ್‌ನ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಲೀಕರು, ಆ. 18ರಂದು ನಾಯಿಯನ್ನು ಕಿಮೋಥೆರಪಿಗೆ ಒಳಪಡಿಸಲು ನಿರ್ಧರಿಸಿದ್ದರು ತುಂಬಾ ತಡವಾದ

ವಾಷಿಂಗ್ಟನ್:ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ ಮೂಲಕ ಜನರ ಮನ ಸೆಳೆದಿದ್ದ ಚೀಮ್ಸ್ ನಾಯಿ ಇನ್ನಿಲ್ಲ Read More »

ನಾಗರಪಂಚಮಿಗೆ ಸಾರ್ವತ್ರಿಕ ರಜೆ ಘೋಷಿಸಿ| ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜೈ ತುಳುನಾಡ್ ಸಂಘ

ಸಮಗ್ರ ನ್ಯೂಸ್: ತುಳುನಾಡಿನಲ್ಲಿ ವಿಶಿಷ್ಟವಾಗಿ ಆಚರಿಸಲಾಗುವ ನಾಗರ ಪಂಚಮಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಜೈ ತುಳುನಾಡ್‌ ಸಂಘಟನೆ ವತಿಯಿಂದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ತುಳುನಾಡು “ದೈವಸೃಷ್ಟಿ ನಾಗದೃಷ್ಟಿ’ ಎಂಬ ಪ್ರತೀತಿ ಹೊಂದಿದೆ. ಇಲ್ಲಿ ದೈವಾರಾಧನೆಯಂತೆ ನಾಗರಾಧನೆಯೂ ತುಂಬಾ ಪ್ರಾಮುಖ್ಯ ಪಡೆದಿದೆ. ಕುಟುಂಬದ ಹಿರಿಯರು-ಕಿರಿಯರು ಸೇರಿ ಮೂಲಸ್ಥಳಕ್ಕೆ ಹೋಗಿ ನಾಗರಪಂಚಮಿ ಆಚರಿಸುವುದು ತುಳುನಾಡಿನ ವೈಶಿಷ್ಟ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಮತ್ತು ಶಾಲೆ-ಕಾಲೇಜು, ಕಚೇರಿಗಳಿಗೆ

ನಾಗರಪಂಚಮಿಗೆ ಸಾರ್ವತ್ರಿಕ ರಜೆ ಘೋಷಿಸಿ| ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜೈ ತುಳುನಾಡ್ ಸಂಘ Read More »

ಚಂದ್ರಯಾನ -3: ಡಿ ಬೂಸ್ಟಿಂಗ್ ಕಾರ್ಯ ಯಶಸ್ವಿ

ಸಮಗ್ರ ನ್ಯೂಸ್: ಚಂದ್ರಯಾನ -3 ಮಿಷನ್ನ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ನ ಕಕ್ಷೆಯನ್ನು ಯಶಸ್ವಿಯಾಗಿ ಕಡಿಮೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ. ‘ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ (ನಿಧಾನಗೊಳಿಸುವ) ಕಾರ್ಯಾಚರಣೆಯು ಎಲ್‌ಎಂ ಕಕ್ಷೆಯನ್ನು 25 ಕಿಮೀ x 134 ಕಿ.ಮೀ.ಗೆ ಯಶಸ್ವಿಯಾಗಿ ಇಳಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್ನಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತದೆ. ಆಗಸ್ಟ್ 23, 2023 ರಂದು ಭಾರತೀಯ ಕಾಲಮಾನ 17.45 ರ ಸುಮಾರಿಗೆ ಶಕ್ತಿಯುತ ಇಳಿಯುವಿಕೆ ಪ್ರಾರಂಭವಾಗುವ ನಿರೀಕ್ಷೆಯಿದೆ” ಎಂದು

ಚಂದ್ರಯಾನ -3: ಡಿ ಬೂಸ್ಟಿಂಗ್ ಕಾರ್ಯ ಯಶಸ್ವಿ Read More »

ಸೊಳ್ಳೆಗಳ ಸಾಮ್ರಾಜ್ಯದತ್ತ ಇಣುಕು ನೋಟ| ವಿಶ್ವ ಸೊಳ್ಳೆಗಳ ದಿನ –ಆಗಸ್ಟ್20

ಸಮಗ್ರ ನ್ಯೂಸ್: ಜಗತ್ತಿನಾದ್ಯಂತ ಆಗಸ್ಟ್ 20ನ್ನು ವಿಶ್ವ ಸೊಳ್ಳೆಗಳ ದಿನ ಎಂದು ಆಚರಿಸಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನುಕುಲದ ಮಹೋನ್ನತಿಗೆ ಮಹತ್ತರ ಕೊಡುಗೆ ನೀಡಿ, 1902ರಲ್ಲಿ ವೈದ್ಯ ವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತ ಭಾರತೀಯ ಸಂಜಾತ ಬ್ರಿಟಿಷ್ ವೈದ್ಯ ಸರ್ ರೋನಾಲ್ಡ್ ರೋಸ್ ಅವರನ್ನು ಸ್ಮರಿಸುವ ಸುದಿನ. 1897ನೇ ಆಗಸ್ಟ್ 20ರಂದು ತಾನು ಮಾಡಿದ ಸಂಶೋಧನೆಗಳ ಮೂಲಕ ಸೊಳ್ಳೆಗಳಿಂದ ಮನುಷ್ಯನಿಗೆ ಮಲೇರಿಯಾ ಹರಡುತ್ತದೆ ಎಂದು ಜಗತ್ತಿಗೆ ಸಾರಿ

ಸೊಳ್ಳೆಗಳ ಸಾಮ್ರಾಜ್ಯದತ್ತ ಇಣುಕು ನೋಟ| ವಿಶ್ವ ಸೊಳ್ಳೆಗಳ ದಿನ –ಆಗಸ್ಟ್20 Read More »

ಸೌಜನ್ಯ ಪ್ರಕರಣದ ತನಿಖಾಧಿಕಾರಿ ಯೋಗೀಶ್ ನನ್ನು ಮೊದಲು ಗಲ್ಲಿಗೇರಿಸಬೇಕು – ತಿಮರೋಡಿ

ಸಮಗ್ರ ನ್ಯೂಸ್: ಪೇಟಧಾರಿಗಳು ಸಾಕಷ್ಟು ಅನ್ಯಾಯ ಅಕ್ರಮದ ಕೆಲಸ ಮಾಡಿದ್ದಾರೆ. ಇವರ ಮೇಲೆ ಇದುವರೆಗೂ ಪ್ರಕರಣ ದಾಖಲು ಮಾಡುವ ಕೆಲಸ ಮಾಡಿಲ್ಲ ಎಂದು ಸೌಜನ್ಯ ನ್ಯಾಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು. 11 ವರ್ಷವಾದರೂ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಅನ್ನೋದು ಗೊತ್ತಾಗಿಲ್ಲ. ಧರ್ಮಸ್ಥಳದ ದೇವಸ್ಥಾನದ ಪೇಟದಾರಿಗಳು ಲಕ್ಷಾಂತರ ಕೋಟಿ

ಸೌಜನ್ಯ ಪ್ರಕರಣದ ತನಿಖಾಧಿಕಾರಿ ಯೋಗೀಶ್ ನನ್ನು ಮೊದಲು ಗಲ್ಲಿಗೇರಿಸಬೇಕು – ತಿಮರೋಡಿ Read More »

ಪುತ್ತೂರು: ಬಾವಿಗೆ ಬಿದ್ದು ಕಾಡುಕೋಣ ಸಾವು

ಸಮಗ್ರ ನ್ಯೂಸ್: ನಾಡಿಗೆ ಬಂದಿದ್ದ‌ ಕಾಡುಕೋಣವೊಂದು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮದ ಐಟಿಐ ಮೈದಾನದ ಬಳಿ‌ ನಡೆದಿದೆ. ನರಿಮೊಗರು ಐಟಿಐ ಸಮೀಪದ ನಿವಾಸಿ ಪ್ರಕಾಶ್ ಎಂಬುವರ ಜಾಗದಲ್ಲಿರುವ ಬಾವಿಯಲ್ಲಿ ಸುಮಾರು 5 ವರ್ಷದ ಕಾಡುಕೋಣದ ಕಳೇಬರ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಕ್ರೇನ್ ಬಳಸಿ ಕಳೇಬರ ಮೇಲೆತ್ತಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ,

ಪುತ್ತೂರು: ಬಾವಿಗೆ ಬಿದ್ದು ಕಾಡುಕೋಣ ಸಾವು Read More »