August 2023

ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ

ಸಮಗ್ರ ನ್ಯೂಸ್:ಸುಳ್ಯ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳ ಕಾರ್ಯಕ್ಷೇತ್ರದ ಪ್ರಗತಿ ಪರಿಶೀಲನೆ ಕಾರ್ಯಕ್ರಮವು ಆ. 23ರಂದು ಸುಳ್ಯ ಯೋಜನಾ ಕಚೇರಿ ಸಭಾ ಭವನ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ತಾಲೂಕಿನ ಪ್ರತಿ ಗ್ರಾಮಕ್ಕೆ ಯೋಜನೆಯಿಂದ ಸಿಗುವ ಸೌಲಭ್ಯಗಳ ವಿತರಣೆ ಮಾಡುವ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಯೋಜನಾಧಿಕಾರಿಯಾದ ನಾಗೇಶ್ ರವರು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ವಲಯದ ಮೇಲ್ವಿಚಾರಕರು ಹಾಗೂ ಕಾರ್ಯಕ್ಷೇತ್ರ ಸೇವಾಪ್ರತಿನಿಧಿಗಳು […]

ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ Read More »

ಚಿಕ್ಕಮಗಳೂರು : ವಿಕ್ರಮ್ ನ ಯಶಸ್ವಿ ಲ್ಯಾಂಡಿಂಗ್ ಗೆ ಪುಟ್ಟ ಪೊರನ ಪ್ರಾರ್ಥನೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ತಾಲೂಕಿನ ಮಾಚೇನಹಳ್ಳಿ ಗ್ರಾಮದ ಬಾಲಕನೊಬ್ಬ ದೇವರಿಗೆ ಇಸ್ರೋ ಹೆಸರಿನ ದೀಪ ಹಚ್ಚಿ ಪೂಜೆ ಮಾಡಿದ ಘಟನೆ ಆ.23 ರಂದು ನಡೆದಿದೆ. ಅರಸೀಕೆರೆ ತಾಲೂಕಿನ ಜಾವಗಲ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಬಾಲಕ ಸುಕ್ಷಿತ್ ,ವಿಕ್ರಮ್ ನ ಸುರಕ್ಷಿತ ಲ್ಯಾಂಡಿಂಗ್ ಗಾಗಿ ದೇವರಿಗೆ ಇಸ್ರೋ ಹೆಸರಿನ ದೀಪ ಹಚ್ಚಿ ಪೂಜೆ ಮಾಡಿದ್ದಾನೆ, ಬಳಿಕ ನಮ್ಮ ಇಸ್ರೋ-ನಮ್ಮ ಹೆಮ್ಮೆ ಎಂದು ಬ್ಯಾಡ್ಜ್ ಧರಿಸಿ ಶಾಲೆಗೆ ತೆರಳಿದ್ದಾನೆ. ಈ ಪುಟ್ಟ ಬಾಲಕನ ಚಂದ್ರಯಾನ-3 ಪ್ರೇಮವು ತನ್ನ ಪ್ರತಿಭಾ

ಚಿಕ್ಕಮಗಳೂರು : ವಿಕ್ರಮ್ ನ ಯಶಸ್ವಿ ಲ್ಯಾಂಡಿಂಗ್ ಗೆ ಪುಟ್ಟ ಪೊರನ ಪ್ರಾರ್ಥನೆ Read More »

ಕಾವೇರಿಗಾಗಿ ಒಂದಾದ ಸರ್ವಪಕ್ಷಗಳು| ಸರ್ಕಾರದ ‌ಕಾನೂನಾತ್ಮಕ ಹೋರಾಟಕ್ಕೆ ಒಕ್ಕೋರಲ ಬೆಂಬಲ

ಸಮಗ್ರ ನ್ಯೂಸ್: ಕಾವೇರಿ ನೀರಿನ ವಿಚಾರದ ಕುರಿತಂತೆ ಕಾನೂನಾತ್ಮಕ ಹೋರಾಟಕ್ಕೆ ಸರ್ವಪಕ್ಷಗಳು ಬೆಂಬಲ ಸೂಚಿಸಿ, ರಾಜ್ಯ ಸರ್ಕಾರಕ್ಕೆ ಬಲ ತುಂಬಿವೆ.ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್‌ ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್‌ 10 ರಂದು 1,5000 ಕ್ಯೂಸೆಕ್‌ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ

ಕಾವೇರಿಗಾಗಿ ಒಂದಾದ ಸರ್ವಪಕ್ಷಗಳು| ಸರ್ಕಾರದ ‌ಕಾನೂನಾತ್ಮಕ ಹೋರಾಟಕ್ಕೆ ಒಕ್ಕೋರಲ ಬೆಂಬಲ Read More »

ಇಸ್ರೋ ಮುಖ್ಯಸ್ಥರು ‘ಚಂದ್ರಯಾನ -3’ ಲ್ಯಾಂಡಿಂಗ್‌ ನ ಬಗ್ಗೆ ಹೇಳಿದ್ದೇನು?

ಸಮಗ್ರ ನ್ಯೂಸ್: ಇನ್ನು ಕೆಲವೇ ಗಂಟೆಗಳಲ್ಲಿ ದೇಶ ಹೊಸ ಇತಿಹಾಸ ಸೃಷ್ಟಿಸಲಿದೆ. ಚಂದ್ರಯಾನ 3 ಲ್ಯಾಂಡರ್ ವಿಕ್ರಮ್ ಇಂದು ಸಂಜೆ 6:04 ಕ್ಕೆ ಚಂದ್ರನನ್ನು ಚುಂಬಿಸಲಿದೆ. ದೇಶದೆಲ್ಲೆದೆ ಈ ಉತ್ಸಾಹವಿದ್ದರೂ, ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಸಮಯ ಹತ್ತಿರವಾಗುತ್ತಿದ್ದಂತೆ ಜನರ ಎದೆಬಡಿತವೂ ಹೆಚ್ಚುತ್ತಿದೆ. ಇಡೀ ವಿಶ್ವದ ಕಣ್ಣುಗಳು ಕೂಡ ಈ ಮಿಷನ್ ಮೇಲೆ ಕೇಂದ್ರೀಕೃತವಾಗಿವೆ. ವಿಕ್ರಮ್ ಯಶಸ್ವಿ ಲ್ಯಾಂಡಿಂಗ್‌ಗಾಗಿ ದೇಶದ ಎಲ್ಲೆಡೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು,ಈ ಎಲ್ಲದರ ನಡುವೆ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಮಿಷನ್‌ನ

ಇಸ್ರೋ ಮುಖ್ಯಸ್ಥರು ‘ಚಂದ್ರಯಾನ -3’ ಲ್ಯಾಂಡಿಂಗ್‌ ನ ಬಗ್ಗೆ ಹೇಳಿದ್ದೇನು? Read More »

ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಸೇತುವೆ ಕುಸಿತ| 17 ಮಂದಿ ದುರ್ಮರಣ

ಸಮಗ್ರನ್ಯೂಸ್: ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಸೇತುವೆಯೊಂದು ಕುಸಿದು ಬಿದ್ದು 17 ಮಂದಿ ಮೃತಪಟ್ಟಿರುವ ಘಟನೆ ಮಿಝೋರಾಂನಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಹಲವರು ಸ್ಥಳದಲ್ಲಿ ಸಿಲುಕಿರುವ ಶಂಕೆ ಇದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಸೇತುವೆ ಕುಸಿದಾಗ ಸುಮಾರು 35 ರಿಂದ 40 ಕಟ್ಟಡ ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಝೋರಾಂ ನ ಐಝಾಲ್ ನಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಸಾಯಿರಾಂಗ್ ಪ್ರದೇಶದಿಂದ ಈ ಘಟನೆ ವರದಿಯಾಗಿದೆ. ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ

ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಸೇತುವೆ ಕುಸಿತ| 17 ಮಂದಿ ದುರ್ಮರಣ Read More »

ಪುತ್ತೂರು: ಲೈವ್ ವೀಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಯತ್ನ

ಸಮಗ್ರನ್ಯೂಸ್: ಲೈವ್ ವೀಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಬ್ಯಾರಿ‌ ಭಾಷೆಯಲ್ಲಿ ಲೈವ್ ವೀಡಿಯೋ ಮಾಡಿ ನೇಣಿಗೆ ಶರಣಾಗುತ್ತೇನೆ ಎಂದಿದ್ದ ನಾಸಿರ್ ಬಳಿಕ ನೇಣಿಗೆ ಶರಣಾಗದೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಲೈವ್ ವೀಡಿಯೋ ಮಾಡಿ ಕೃತ್ಯಕ್ಕೆ ಕಾರಣ ಹೇಳಿರುವ ನಾಸಿರ್ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ, ಅಲ್ಲಿನ ಕುಟುಂಬದ ಹುಡುಗಿಯೊಂದಿಗೆ ಸಂಬಂಧ ಇದೆಯೆಂದು

ಪುತ್ತೂರು: ಲೈವ್ ವೀಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಯತ್ನ Read More »

ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ಇನ್ನಿಲ್ಲ| ಕ್ಯಾನ್ಸರ್ ಗೆ ಬಲಿಯಾದ ಜಿಂಬಾಬ್ವೆ ಲೆಜೆಂಡ್

ಸಮಗ್ರ ನ್ಯೂಸ್: ಬಾಂಗ್ಲಾದೇಶದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದ ಝಿಂಬಾಬ್ವೆಯ ಲೆಜೆಂಡರಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ಕ್ಯಾನ್ಸರ್ ವಿರುದ್ಧ ದೀರ್ಘಕಾಲದ ಹೋರಾಟದ ನಂತರ 49 ನೇ ವಯಸ್ಸಿನಲ್ಲಿ ನಿಧನರಾದರು. 65 ಟೆಸ್ಟ್ ಗಳು ಹಾಗೂ 189 ಏಕದಿನ ಪಂದ್ಯಗಳಲ್ಲಿ ಝಿಂಬಾಬ್ವೆಯನ್ನು ಪ್ರತಿನಿಧಿಸುವ ಮೂಲಕ 4,933 ರನ್ ಗಳನ್ನು ಗಳಿಸಿ , 455 ವಿಕೆಟ್ ಗಳನ್ನು ಕಬಳಿಸಿದ್ದ ಸ್ಟ್ರೀಕ್ ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. ಸ್ಟ್ರೀಕ್ ಟೆಸ್ಟ್ ನಲ್ಲಿ 1,000 ರನ್ ಹಾಗೂ 100 ವಿಕೆಟ್ ಗಳ

ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ಇನ್ನಿಲ್ಲ| ಕ್ಯಾನ್ಸರ್ ಗೆ ಬಲಿಯಾದ ಜಿಂಬಾಬ್ವೆ ಲೆಜೆಂಡ್ Read More »

ಮಂಗಳೂರು:ಇ-ಸಿಗರೇಟ್ ಮಾರಾಟ|ಸುಳ್ಯದ ಯುವತಿ ಸೇರಿ ನಾಲ್ವರ ಬಂಧನ

ಸಮಗ್ರ ನ್ಯೂಸ್: ಮಂಗಳೂರು ನಗರದ ಲಾಲ್‌ಬಾಗ್‌ನನಲ್ಲಿ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ನಾಲ್ವರರನ್ನು ಬರ್ಕೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ಮೂಲತಃ ಸುಳ್ಯದ ಸ್ವಾತಿ, ಮಣ್ಣಗುಡ್ಡೆಯ ಶಿವಕುಮಾರ್, ಕುತ್ತಾರ್ ಸಮೀಪದ ಹಸನ್ ಶರೀಫ್ ಮತ್ತು ರಹಮತುಲ್ಲಾ ಎಂಬವರ ವಿರುದ್ಧ ಇ-ಸಿಗರೇಟ್ ನಿರ್ಬಂಧ ಹಾಗೂ ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರ ಪೈಕಿ ಇಬ್ಬರಿಗೆ ಠಾಣೆಯಲ್ಲೇ ಜಾಮೀನು ಲಭಿಸಿದ್ದರೆ, ಇನ್ನಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ. ಲಾಲ್‌ಬಾಗ್‌ನ ಸಾಯಿಬಿನ್

ಮಂಗಳೂರು:ಇ-ಸಿಗರೇಟ್ ಮಾರಾಟ|ಸುಳ್ಯದ ಯುವತಿ ಸೇರಿ ನಾಲ್ವರ ಬಂಧನ Read More »

ಚಂದ್ರಯಾನ -3: ಶಶಿಯ ಅಂಗಳದಲ್ಲಿ ಹೆಜ್ಜೆ ಇರಿಸಲು ‘ವಿಕ್ರಮ’ ಸನ್ನದ್ಧ| ಎಲ್ಲರ ಚಿತ್ತ ಭಾರತದತ್ತ…

ಸಮಗ್ರ ನ್ಯೂಸ್: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ‌’ ಲ್ಯಾಂಡರ್ ಹೆಜ್ಜೆ ಇರಿಸಲು ಸನ್ನದ್ಧವಾಗಿದ್ದು, ಇಂದು ಸಂಜೆ 6.04 ನಿಮಿಷಕ್ಕೆ ಗುರಿ ತಲುಪಲಿದೆ. ಹೀಗಾಗಿ ಚಂದ್ರಯಾನ-3 ಯೋಜನೆಯತ್ತ‌ ಎಲ್ಲರ ಚಿತ್ತ ನೆಟ್ಟಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದೆ ಮತ್ತು ಆಗಸ್ಟ್ 23 ರ ಇಂದು ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಜ್ಜಾಗಿದೆ.ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಮಿಷನ್ ಪ್ರಾರಂಭವಾದ 42 ದಿನಗಳ ನಂತರ

ಚಂದ್ರಯಾನ -3: ಶಶಿಯ ಅಂಗಳದಲ್ಲಿ ಹೆಜ್ಜೆ ಇರಿಸಲು ‘ವಿಕ್ರಮ’ ಸನ್ನದ್ಧ| ಎಲ್ಲರ ಚಿತ್ತ ಭಾರತದತ್ತ… Read More »

ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ವರ್ಗಾವಣೆ| ನೂತನ ಎಸ್ಪಿಯಾಗಿ ಅಮಾಟೆ ವಿಕ್ರಮ್ ನೇಮಕ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಮಾ ಪ್ರಶಾಂತ್ ಅವರನ್ನು ವರ್ಗಾವಣೆ ಮಾಡುವಂತೆ ಆ. 23 ರಂದು ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಜಿಲ್ಲೆಯ ನೂತನ ಎಸ್ಪಿಯನ್ನಾಗಿ ಅಮಾಟೆ ವಿಕ್ರಮ್ ಅವರನ್ನು ನೇಮಿಸಲಾಗಿದೆ. 2021ನೇ ಸಾಲಿನ ಬ್ಯಾಚ್‍ನ ಐಪಿಎಸ್ ಅಧಿಕಾರಿ ಅಮಟೆ ವಿಕ್ರಮ್ ಅವರನ್ನು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯುಕ್ತಿಗೊಳಿಸಿ ರಾಜ್ಯ ಸರಕಾರದ ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ನಾಗಪ್ ಎಸ್. ಪರೀತ್ ಅವರು ಹೊರಡಿಸಿದ ಆದೇಶ

ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ವರ್ಗಾವಣೆ| ನೂತನ ಎಸ್ಪಿಯಾಗಿ ಅಮಾಟೆ ವಿಕ್ರಮ್ ನೇಮಕ Read More »