ಚಂದ್ರನ ಮೇಲೆ ಭಾರತ ಲ್ಯಾಂಡ್ ಆದಾಗ ಇಲ್ಲೊಂದು ಟ್ವೀಟ್ ವೈರಲ್| ಏನಿತ್ತು ಗೊತ್ತಾ ಹುಬ್ಬಳ್ಳಿ-ಧಾರವಾಡ ಪೊಲೀಸರ ಟ್ವೀಟ್ ನೊಳಗೆ?
ಸಮಗ್ರ ನ್ಯೂಸ್: ಕೋಟ್ಯಂತರ ಭಾರತೀಯರ ಹರಕೆ ಹಾರೈಕೆಯೊಂದಿಗೆ ಬಾಹ್ಯಾಕಾಶ ಲೋಕದಲ್ಲಿ ಹೊಸ ಚರಿತ್ರೆ ಸೃಷ್ಠಿಸಿದೆ ಭಾರತ. ಚಂದ್ರನ ಮೇಲೆ ಯಶಸ್ವಿಯಾಗಿ ಚಂದ್ರಯಾನ 3 ನೌಕೆ ಇಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಚಂದ್ರಯಾನ-3 ಯಶಸ್ಸು ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇಸ್ರೋಗೆ ಶುಭಾಶಯ ಹರಿದು ಬರುತ್ತಿದೆ. ಚಂದ್ರಯಾನ-3 ಯಶಸ್ಸು ಬಳಿಕ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಮಾಡಿದ ಟ್ವೀಟ್ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಹಿಡಿದು ಕೆಜಿಎಫ್ ಸಿನಿಮಾ ಡೈಲಾಗ್ ನಂತೆ ಪೊಲೀಸರು ಟ್ವೀಟ್ […]