August 2023

ಮಾನಸಿಕ ಒತ್ತಡ ನಿರ್ವಹಣೆ ಅತ್ಯಗತ್ಯ -ಡಾ ಆನಂದ್|ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ

ಸಮಗ್ರ ನ್ಯೂಸ್:ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆ ಇದರ ವತಿಯಿಂದ ದ.ಕ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಇದರ ಸಹಕಾರದೊಂದಿಗೆ, ನೇತ್ರಾವತಿ ಸಭಾಂಗಣ, ಜಿಲ್ಲಾ ಪಂಚಾಯತ್ ಕೊಟ್ಟಾರ, ಮಂಗಳೂರು ಇಲ್ಲಿ ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ಹಾಗೂ ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ, ಇಸಿಜಿ, ಕಣ್ಣಿನ ತಪಾಸಣೆಯನ್ನು ಆ.24ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ […]

ಮಾನಸಿಕ ಒತ್ತಡ ನಿರ್ವಹಣೆ ಅತ್ಯಗತ್ಯ -ಡಾ ಆನಂದ್|ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ Read More »

ಚಂದ್ರಯಾನ 3 ಟೀಂನಲ್ಲಿ ಭಾಗಿಯಾದ ಮಾನಸ ಅವರಿಗೆ ಸಮಗ್ರ ಸಮಾಚಾರ ವತಿಯಿಂದ ಸನ್ಮಾನ

ಸಮಗ್ರ ನ್ಯೂಸ್: ಚಂದ್ರಯಾನ- 3 ತಂಡದಲ್ಲಿ ಭಾಗಿಯಾದ ಸುಳ್ಯದ ಮಾನಸ ಎಂ. ಜೆ. ಅವರು ಸಮಗ್ರ ಸಮಾಚಾರ ಕಛೇರಿಗೆ ಬೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ಚಂದ್ರಯಾನದ ತಯಾರಿ ಮತ್ತು ಯಶಸ್ವಿಯ ಬಗ್ಗೆ  ಸಂದರ್ಶನ ನಡೆಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮಾನಸ ಅವರ ಪತಿ ಜಯಕುಮಾರ್ ಬಿ.ಎಸ್., ತಾಯಿ ಕುಸುಮಾವತಿ, ಅಕ್ಕ ಜ್ಯೋತಿ ಮತ್ತು ಮಗಳು ಸನ್ನಿಧಿ, ಸುಬ್ರಹ್ಮಣ್ಯ ಐವರ್ನಾಡು ಹಾಗೂ ಸಮಗ್ರ ಸಮಾಚಾರ ಮುಖ್ಯಸ್ಥ ಜಯದೀಪ್ ಕುದ್ಕುಳಿ, ಸಿಬ್ಬಂದಿಯಾದ ಕೀರ್ತನ್ ಕುಕ್ಕುಡೆಲು, ಅನನ್ಯ ಕಾಟೂರು, ಧನ್ಯಶ್ರೀ

ಚಂದ್ರಯಾನ 3 ಟೀಂನಲ್ಲಿ ಭಾಗಿಯಾದ ಮಾನಸ ಅವರಿಗೆ ಸಮಗ್ರ ಸಮಾಚಾರ ವತಿಯಿಂದ ಸನ್ಮಾನ Read More »

ಸೌಜನ್ಯ ಪ್ರಕರಣ| ಬಿಜೆಪಿ ನೇತೃತ್ವದ ಪ್ರತಿಭಟನೆಗೆ ಸೌಜನ್ಯ ತಾಯಿಗೆ ಆಹ್ವಾನ ‌ನೀಡಿದ ಹರೀಶ್ ಪೂಂಜ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯಲ್ಲಿ ನಡೆಯುವ ಭಾರತೀಯ ಜನತಾ ಪಾರ್ಟಿ ಪ್ರತಿಭಟನಾ ಹೋರಾಟದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭಾಗಿಯಾಗುವಂತೆ ಶಾಸಕ‌ ಹರೀಶ್ ಪೂಂಜ ಹಾಗೂ ತಂಡ ಆ.24 ರಂದು ಅವರ ಮನೆಗೆ ಭೇಟಿ ನೀಡಿ ಆಹ್ವಾನಿಸಿದೆ. ನೈಜ ಆರೋಪಿಗಳ ಪತ್ತೆಗಾಗಿ ಆಗಸ್ಟ್‌ 27 ರಂದು ಬೆಳ್ತಂಗಡಿಯಲ್ಲಿ ನಡೆಯುವ ಭಾರತೀಯ ಜನತಾ ಪಾರ್ಟಿ ಪ್ರತಿಭಟನಾ ಹೋರಾಟದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭಾಗಿಯಾಗುವಂತೆ ಶಾಸಕ‌ ಹರೀಶ್ ಪೂಂಜ ಹಾಗೂ ಅವರ ಸೌಜನ್ಯಳ ಮನೆಗೆ ತೆರಳಿ

ಸೌಜನ್ಯ ಪ್ರಕರಣ| ಬಿಜೆಪಿ ನೇತೃತ್ವದ ಪ್ರತಿಭಟನೆಗೆ ಸೌಜನ್ಯ ತಾಯಿಗೆ ಆಹ್ವಾನ ‌ನೀಡಿದ ಹರೀಶ್ ಪೂಂಜ Read More »

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಅಲ್ಲು ಅರ್ಜುನ್ ಶ್ರೇಷ್ಠ ನಟ| ‘777 ಚಾರ್ಲಿ’ ಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನ ಪ್ರಕಟಿಸಿದೆ. 69ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ತೀರ್ಪುಗಾರರ ಸದಸ್ಯರು ವಾಚಿಸಿದರು. ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, 69 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೆಲುಗು ನಾಯಕರೊಬ್ಬರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಕ್ಷಿತ್ ಶೆಟ್ಟಿ ನಟನೆ ಹಾಗೂ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಅಲ್ಲು ಅರ್ಜುನ್ ಶ್ರೇಷ್ಠ ನಟ| ‘777 ಚಾರ್ಲಿ’ ಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ Read More »

ವಿಶ್ವಕಪ್ ಚೆಸ್ ಫೈನಲ್| ರೋಚಕ ಪೈಪೋಟಿ ನೀಡಿ ವಿರೋಚಿತ ಸೋಲು ಕಂಡ ಪ್ರಜ್ಞಾನಂದ|

ಸಮಗ್ರ ನ್ಯೂಸ್: ವಿಶ್ವಕಪ್ ಚೆಸ್ ಫೈನಲ್ ಪಂದ್ಯದಲ್ಲಿ 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸೆನ್ ವಿರುದ್ಧ ಸೋಲು ಕಂಡಿದ್ದಾರೆ. ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್ ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್ ಸೆನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಗುರುವಾರ ನಡೆದ

ವಿಶ್ವಕಪ್ ಚೆಸ್ ಫೈನಲ್| ರೋಚಕ ಪೈಪೋಟಿ ನೀಡಿ ವಿರೋಚಿತ ಸೋಲು ಕಂಡ ಪ್ರಜ್ಞಾನಂದ| Read More »

ಪುತ್ತೂರು: ಚೂರಿ ಇರಿತ ಪ್ರಕರಣ|ಯುವತಿ ಸಾವು|ಯುವಕ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ಚೂರಿ ಇರಿತಕ್ಕೊಳಗಾದ ಯುವತಿ ಸಾವನಪ್ಪಿದ್ದು. ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜೀವನ್ಮರಣ ಸ್ಥಿತಿಯಲ್ಲಿರುವ ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೆರದೊಯ್ಯುವಾಗ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಇರಿತಕ್ಕೆ ಒಳಗಾಗಿರುವ ಯುವತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಭಾಗದ ಅಳಿಕೆ ನಿವಾಸಿ ಗೌರಿ(18) ಎಂದು ಗುರುತಿಸಲಾಗಿದೆ. ಯುವಕನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ

ಪುತ್ತೂರು: ಚೂರಿ ಇರಿತ ಪ್ರಕರಣ|ಯುವತಿ ಸಾವು|ಯುವಕ ಪೊಲೀಸ್ ವಶಕ್ಕೆ Read More »

ಪುತ್ತೂರು: ಯುವತಿಗೆ ಚೂರಿ ಇರಿತ ಯುವಕ ಪರಾರಿ| ಆರೋಪಿ ಪೊಲೀಸ್ ವಶಕ್ಕೆ..?

ಸಮಗ್ರ ನ್ಯೂಸ್: ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ಯುವತಿಯೊಬ್ಬಳಿಗೆ ಚೂರಿ ಇರಿದು ಪರಾರಿಯಾದ ಘಟನೆ ಆ.24 ರಂದು ನಡೆದಿದೆ. ಗಾಯಗೊಂಡ ಯುವತಿಯನ್ನು ವಿಟ್ಲದ ಕುದ್ದುಪದವು ಮೂಲದವಳು ಎಂದು ಗುರುತಿಸಲಾಗಿದೆ. ಈಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಹಿಂಬದಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಬಳಿ ನಿಂತಿದ್ದ ವೇಳೆ ಬೈಕಿನಲ್ಲಿ ಬಂದ ಆರೋಪಿ ಪದ್ಮರಾಜ್ ಚೂರಿ ಇರಿದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಬಳಿಕ ಪೋಲೀಸರು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಮೇಲ್ನೋಟಕ್ಕೆ ಯುವಕ ಕೊಲೆಯತ್ನ ನಡೆಸಿರುವುದು ಕಂಡುಬರುತ್ತಿದ್ದು

ಪುತ್ತೂರು: ಯುವತಿಗೆ ಚೂರಿ ಇರಿತ ಯುವಕ ಪರಾರಿ| ಆರೋಪಿ ಪೊಲೀಸ್ ವಶಕ್ಕೆ..? Read More »

ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ| ಹಲವು ಮನೆಗಳು ಕುಸಿತ; ಜಲಸಮಾಧಿ ಶಂಕೆ

ಸಮಗ್ರ ನ್ಯೂಸ್: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಗುರುವಾರ ಭಾರೀ ಭೂಕುಸಿತ ಉಂಟಾದ ಪರಿಣಾಮ ಹಲವಾರು ಮನೆಗಳು ಕುಸಿದುಬಿದ್ದಿದ್ದು, ಅನೇಕ ಜನರು ಸಿಲುಕಿರುವ ಆತಂಕವಿದೆ ಎಂದು NDTV ವರದಿ ಮಾಡಿದೆ. ಕುಲು ಜಿಲ್ಲೆಯ ಅನ್ನಿ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಸುಮಾರು 8-9 ಬಹುಮಹಡಿ ಕಟ್ಟಡಗಳು ಭೂಕುಸಿತದಿಂದ ಏಕಾಏಕಿ ಕುಸಿದುಬಿದ್ದು ಭಾರೀ ಧೂಳು ಮೇಲೆದ್ದಿರುವ ದೃಶ್ಯವು ವೀಡಿಯೊದಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ. ಕಳೆದ ಒಂದು ವಾರದ ಹಿಂದೆಯೇ ಕಟ್ಟಡ ತೆರವು ಮಾಡುವಂತೆ ಆಡಳಿತ ಮಂಡಳಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ| ಹಲವು ಮನೆಗಳು ಕುಸಿತ; ಜಲಸಮಾಧಿ ಶಂಕೆ Read More »

ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ?

ಸಮಗ್ರ ನ್ಯೂಸ್: ಚಂದ್ರಯಾನ 3 ಕಾರ್ಯಾಚರಣೆಯ ಮುಕ್ಕಾಲು ಭಾಗ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಕ್ರಮ್ ಲ್ಯಾಂಡರ್‌ ಚಂದ್ರನ ಮೇಲೆ ಇಳಿದಾಗಿದೆ. ಇದೀಗ ಅಸಲಿ ಕೆಲಸ ಪ್ರಾರಂಭ ಮಾಡಬೇಕಿದ್ದು, ರೋವರ್‌ ಪ್ರಗ್ಯಾನ್‌ ಕೂಡಾ ಲ್ಯಾಂಡರ್‌ನಿಂದ ಹೊರಬಂದಿದೆ. ಇಂದಿನಿಂದ 14 ದಿನಗಳ ಕಾಲ (ಭೂಮಿಯ ಪ್ರಕಾರದ ದಿನದ ಅಳತೆ‌ ಇದು ಚಂದ್ರನ ಒಂದು ದಿನ ) ಚಂದ್ರನ ಮೇಲೆ ಸಂಚರಿಸಲಿರುವ ಪ್ರಗ್ಯಾನ್‌ ರೋವರ್‌ ತನ್ನ ಕೆಲಸ ಮಾಡಲಿದೆ. ರೋವರ್‌ ಚಂದ್ರನ ಮೇಲ್ಮೈನಲ್ಲಿರುವ ಲೂನಾರ್‌ ರೆಗೊಲಿತ್‌ ಅಗ್ಲೂಟಿನೇಟ್ಸ್‌ ಅಂದರೆ ಘನಪದಾರ್ಥ ಅಧ್ಯಯನ

ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ? Read More »

ಪರಾಕ್ರಮ ಮೆರೆದ ಇಸ್ರೋ ಅಭಿನಂದಿಸಲು ಇಂದು ಭೇಟಿ ನೀಡಲಿರುವ ಸಿಎಂ

ಸಮಗ್ರ ನ್ಯೂಸ್: ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿ ಹಿನ್ನೆಲೆ ಇಂದು ಇಸ್ರೋ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಇಸ್ರೋ ಕೇಂದ್ರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ ವಿಜ್ಞಾನ & ತಂತ್ರಜ್ಞಾನ ಸಚಿವ ಬೋಸರಾಜು ಸಾಥ್​​​​ ನೀಡಲಿದ್ದಾರೆ. ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋ(ISRO) ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಇಸ್ರೋದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ

ಪರಾಕ್ರಮ ಮೆರೆದ ಇಸ್ರೋ ಅಭಿನಂದಿಸಲು ಇಂದು ಭೇಟಿ ನೀಡಲಿರುವ ಸಿಎಂ Read More »