Ad Widget .

ಪುತ್ತೂರು: ಸೌಜನ್ಯ ಕೊಲೆ ಪ್ರಕರಣದ ನ್ಯಾಯಕ್ಕಾಗಿ ಹಕ್ಕೊತ್ತಾಯ| ತನಿಖೆಯ ದಿಕ್ಕು ತಪ್ಪಿಸಿದವರಿಗೂ ಶಿಕ್ಷೆಯಾಗಲಿ – ತಿಮರೋಡಿ

ಸಮಗ್ರ ನ್ಯೂಸ್: ವಿದ್ಯಾರ್ಥಿನಿ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕತಣದ ಮರು ತನಿಖೆಗೆ ಪುತ್ತೂರಿನಲ್ಲಿ ಒತ್ತಾಯಿಸಲಾಗಿದೆ. ಅಭಿನವ ಮಿತ್ರ ಮಂಡಳಿ, ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನಾ ಜಾಥಾ ನಡೆದಿದೆ. ಪುತ್ತೂರಿನ ಬೊಳುವಾರು ವೃತ್ತದಿಂದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದವರೆಗೆ ನಡೆದ ಜಾಥಾದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಪ್ರಸಾದ್ ಅತ್ತಾವರ, ಪ್ರವೀಣ್ ವಾಲ್ಕೆ ಮೊದಲಾದವರು ಭಾಗಿಯಾಗಿದ್ದಾರೆ‌.

Ad Widget . Ad Widget .

ಸೌಜನ್ಯ ಕೊಲೆ ಅತ್ಯಾಚಾರದ ಹೋರಾಟಗಾರರು ನ್ಯಾಯಾಲಯದಲ್ಲಿ ಮರು ತನಿಖೆಗೆ ಅರ್ಜಿ ಸಲ್ಲಿಸಬೇಕು ಎನ್ನುವ ಗೃಹಸಚಿವ ಜಿ‌. ಪರಮೇಶ್ವರ್ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಹೋರಾಟದ ಮುಂದಾಳು ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಪ್ರಕರಣ ಇಡೀ ದೇಶದಲ್ಲಿ ಸುದ್ದಿಯಾಗುತ್ತಿದೆ. ಮಾಜಿ ನ್ಯಾಯಾಧೀಶರು, ವೈದ್ಯರು, ದೊಡ್ಡ ದೊಡ್ಡ ಸಂಘಟನೆಗಳು ನಮ್ಮ ಜೊತೆ ಸೇರಿಕೊಂಡಿದೆ. ಅವರೆಲ್ಲಾ ಸೇರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.

Ad Widget . Ad Widget .

ಸರ್ಕಾರ ತಮ್ಮ ಸ್ವ ಇಚ್ಛೆಯಿಂದ ಮರು ತನಿಖೆಗೆ ಬೇಕಾದ ವ್ಯವಸ್ಥೆ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 20 ದಿನಗಳ ನ್ಯಾಯಾಲಯದ ಕಾಲಾವಕಾಶವಿದೆ. ಅದಕ್ಕೆ ಮೊದಲು ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ಹೋರಾಟ ತೀವ್ರ ಸ್ವರೂಪಕ್ಕೆ ಬರಲು ಸರಕಾರವೇ ಕಾರಣ. ನಮ್ಮನ್ನಾಳುವವರು ಮಾಡಿದ ತಪ್ಪಿನ ಪರಿಣಾಮ ಇದು. ರಾಜಕೀಯದವರು ಮಾಡಿದ ತಪ್ಪನ್ನು ಜನ ಅನುಭವಿಸುವಂತಾಗಿದೆ. ಸೌಜನ್ಯ ಪ್ರಕರಣ ಮುಚ್ಚಿ ಹೋಗಲು ರಾಜಕೀಯದವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣ ಅವರ ಕೈಯಿಂದಲೇ ಮತ್ತೆ ರೀ ಓಪನ್ ಆಗಬೇಕು. ನಾವು ಈ ನಾಡಿನ ಪ್ರಜೆಗಳು. ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿ ಎಂದು ನಾವು ಸರಕಾರದ ಮುಂದೆ ಬಿಕ್ಷೆ ಬೇಡಬೇಕಾ? ಕಾನೂನಿನ ಹೋರಾಟ ಎಲ್ಲಿ ಮಾಡಬೇಕು ಅಲ್ಲಿ ಮಾಡುತ್ತೇವೆ. ಇಡೀ ದೇಶದಲ್ಲಿ ಈ ಸಂಬಂಧ ವ್ಯವಸ್ಥೆಗಳು ನಡೆಯುತ್ತಿದೆ. ರಾಜಕೀಯದವರಿಗೆ 5 ವರ್ಷ ಮಾತ್ರ ಶಕ್ತಿ. ಆದರೆ ನಮ್ಮಂತಹ ಪ್ರಜೆಗಳಿಗೆ ನಿರಂತರ ಶಕ್ತಿಯಿದೆ ಎಂದರು.

ಸೌಜನ್ಯ ಪ್ರಕರಣ ಈ ರೀತಿಯಾಗಲು ಬಿಜೆಪಿ ಮಾಡಿದ ತಪ್ಪೇ ಕಾರಣ. ನ್ಯಾಯಪೀಠದಲ್ಲಿ ಆದ ಅತ್ಯಾಚಾರ, ಕೊಲೆ ಇದು. ಇಲ್ಲಿ ನ್ಯಾಯ ಸಿಗದಿದ್ದರೆ ಇಡೀ ಸನಾತನ ಧರ್ಮ ಅವಸಾನವಾಗಲಿದೆ. ಸೌಜನ್ಯ ಇಲ್ಲಿ ಒಂದು ಕಾರಣ ಮಾತ್ರ. ಅತ್ಯಾಚಾರಿಗಳ ಪರ ನಿಂತವರಿಗೂ ಶಿಕ್ಷೆಯಾಗಬೇಕು. ಅತ್ಯಾಚಾರದ ರಕ್ತ ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥ ಸ್ವಾಮಿಯ ಮೇಲೆ ಚಿಮ್ಮಿದೆ. ಆ ರಕ್ತವನ್ನು ತೊಳೆಯುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *