ಸಮಗ್ರ ನ್ಯೂಸ್: ಚಂದ್ರಯಾನ 3 ಕಾರ್ಯಾಚರಣೆಯ ಮುಕ್ಕಾಲು ಭಾಗ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಾಗಿದೆ. ಇದೀಗ ಅಸಲಿ ಕೆಲಸ ಪ್ರಾರಂಭ ಮಾಡಬೇಕಿದ್ದು, ರೋವರ್ ಪ್ರಗ್ಯಾನ್ ಕೂಡಾ ಲ್ಯಾಂಡರ್‌ನಿಂದ ಹೊರಬಂದಿದೆ.
ಇಂದಿನಿಂದ 14 ದಿನಗಳ ಕಾಲ (ಭೂಮಿಯ ಪ್ರಕಾರದ ದಿನದ ಅಳತೆ ಇದು ಚಂದ್ರನ ಒಂದು ದಿನ ) ಚಂದ್ರನ ಮೇಲೆ ಸಂಚರಿಸಲಿರುವ ಪ್ರಗ್ಯಾನ್ ರೋವರ್ ತನ್ನ ಕೆಲಸ ಮಾಡಲಿದೆ.
ರೋವರ್ ಚಂದ್ರನ ಮೇಲ್ಮೈನಲ್ಲಿರುವ ಲೂನಾರ್ ರೆಗೊಲಿತ್ ಅಗ್ಲೂಟಿನೇಟ್ಸ್ ಅಂದರೆ ಘನಪದಾರ್ಥ ಅಧ್ಯಯನ ,ಚಂದ್ರನಲ್ಲಿ ಸಂಭವಿಸಿರಬಹುದಾದ ಲೂನಾರ್ ಸೀಸ್ಮಿಸಿಟಿ ಅಂದರೆ ಚಂದ್ರನಲ್ಲಿ ಉಂಟಾಗಿರುವ ಕಂಪನದ ಅಧ್ಯಯನ , ಚಂದ್ರನ ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಹಾಗೂ ರಚನೆ ಮುಂತಾದವುಗಳ ಅಧ್ಯಯನ ನಡೆಸುತ್ತೆ.
ರೋವರ್‌ನಲ್ಲಿರುವ ಲೇಸರ್- ಪ್ರೇರಿತ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಚಂದ್ರನ ಮೇಲ್ಮೈಯ ರಚನೆಯನ್ನು ಅಧ್ಯಯನ ಮಾಡಿದ್ರೆ.. ಮತ್ತೊಂದು ಉಪಕರಣ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಚಂದ್ರನ ಮೇಲ್ಮೈನಲ್ಲಿರುವ ಮೆಗ್ನೀಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ಟೈಟಾನಿಯಂ, ಸಿಲಿಕಾ ಹಾಗೂ ಇತರೆ ಪದಾರ್ಥಗಳ ಉಪಸ್ಥಿತಿಯ ಬಗ್ಗೆ ಅಧ್ಯಯನ ಮಾಡಲಿದೆ.