ಸಮಗ್ರ ನ್ಯೂಸ್: ಭಾರತದ ಮಿಷನ್ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಲು ಕೇವಲ ಎರಡು ದಿನಗಳು ಬಾಕಿ ಇದೆ. ಈ ನಡುವೆ ಚಂದ್ರಯಾನ-2ರ ಆರ್ಬಿಟರ್ ಚಂದ್ರಯಾನ-3ನ್ನ ಚಂದ್ರನ ಕಕ್ಷೆಯಲ್ಲಿ ಸ್ವಾಗತಿಸಿದ್ದು, ಇಬ್ಬರ ನಡುವೆ ಸಂಪರ್ಕ ಏರ್ಪಟ್ಟಿದೆ.
ಇಸ್ರೋದ ಚಂದ್ರಯಾನ-3 ಮಿಷನ್‌ನ ಸಾಫ್ಟ್ ಲ್ಯಾಂಡಿಂಗ್‌ಗೆ ಈಗ 48 ಗಂಟೆಗಳು ಉಳಿದಿವೆ, ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಈ ಮಿಷನ್ ನೋಡುತ್ತಿದೆ.
ವಿಕ್ರಮ್ ಲ್ಯಾಂಡರ್ ಯಶಸ್ವಿ ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ನೊಂದಿಗೆ, ಚಂದ್ರಯಾನ -3 ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಇದು ಮಹತ್ವಾಕಾಂಕ್ಷೆಯ ಸಾಫ್ಟ್ ಲ್ಯಾಂಡಿಂಗ್ಗೆ ಕ್ಷಣಗಣನೆಯ ಆರಂಭವನ್ನ ಸೂಚಿಸುತ್ತದೆ. ಲ್ಯಾಂಡರ್ ಮಾಡ್ಯೂಲ್ (LM)ನ ಕಕ್ಷೆಯನ್ನ ಯಶಸ್ವಿಯಾಗಿ ಕಡಿಮೆ ಮಾಡಲಾಗಿದೆ ಎಂದು ಇಸ್ರೋ ಭಾನುವಾರ ಘೋಷಿಸಿತು. ಇನ್ನು ಆಗಸ್ಟ್ 23ರ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಕ್ಕೆ ವೇದಿಕೆ ಕಲ್ಪಿಸಿತು.