Ad Widget .

ಸೌಜನ್ಯ ಪ್ರಕರಣದ ತನಿಖಾಧಿಕಾರಿ ಯೋಗೀಶ್ ನನ್ನು ಮೊದಲು ಗಲ್ಲಿಗೇರಿಸಬೇಕು – ತಿಮರೋಡಿ

ಸಮಗ್ರ ನ್ಯೂಸ್: ಪೇಟಧಾರಿಗಳು ಸಾಕಷ್ಟು ಅನ್ಯಾಯ ಅಕ್ರಮದ ಕೆಲಸ ಮಾಡಿದ್ದಾರೆ. ಇವರ ಮೇಲೆ ಇದುವರೆಗೂ ಪ್ರಕರಣ ದಾಖಲು ಮಾಡುವ ಕೆಲಸ ಮಾಡಿಲ್ಲ ಎಂದು ಸೌಜನ್ಯ ನ್ಯಾಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕಿಡಿಕಾರಿದ್ದಾರೆ.

Ad Widget . Ad Widget .

ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು.

Ad Widget . Ad Widget .

11 ವರ್ಷವಾದರೂ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಅನ್ನೋದು ಗೊತ್ತಾಗಿಲ್ಲ. ಧರ್ಮಸ್ಥಳದ ದೇವಸ್ಥಾನದ ಪೇಟದಾರಿಗಳು ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ. ಧಾರ್ಮಿಕ ವಿಚಾರದಲ್ಲಿ ಪೇಟಾಧಾರಿಗಳು ಭಯೋತ್ಪಾದಕರು ಎಂದು ಆಕ್ರೋಶ ಹೊರ ಹಾಕಿದರು.

ಧರ್ಮಸ್ಥಳದಲ್ಲಿ ಯಾವುದೇ ಪ್ರಕರಣ ನಡೆದರೂ ಅವರ ಮೇಲೆ ಕೇಸ್ ಆಗಲ್ಲ ಎಂದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತನಿಖಾಧಿಕಾರಿ ಯೋಗಿಶ್‌ನನ್ನ ಮೊದಲಿಗೆ ಗಲ್ಲಿಗೆ ಹಾಕಬೇಕು. ಸೌಜನ್ಯ ಪ್ರಕರಣದ ಎಲ್ಲ ಸಾಕ್ಷ್ಯಗಳನ್ನ ನಾಶ ಮಾಡಿದ್ದಾನೆ. ಸೌಜನ್ಯ ಕೇಸ್‌ನಲ್ಲಿ ಸದ್ಯ ಯಾವುದೇ ಸಾಕ್ಷ್ಯವನ್ನು ಬಿಟ್ಟಿಲ್ಲ. ಎಲ್ಲ ಸಾಕ್ಷ್ಯಗಳನ್ನ ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಇವರನ್ನ ಅನ್ನಪ್ಪ ಸ್ವಾಮಿ, ಮಂಜುನಾಥ ಸ್ವಾಮಿಯೇ ನೋಡಿಕೊಳ್ತಾನೆ ಎಂದು ಕಿಡಿಕಾರಿದರು.

ಸೌಜನ್ಯ ಮೃತಪಟ್ಟಾಗ ಅವರ ಮನೆಗೆ ಸಿಎಂ ಡಿವಿ ಸದಾನಂದಗೌಡ, ಗೃಹ ಸಚಿವ ಆರ್ ಅಶೋಕ, ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಆಗಮಿಸಿದ್ದರು. ಇವರು ಸೌಜನ್ಯ ಮನೆಗೆ ಅಂತ ಆಗಮಿಸಿ ಧರ್ಮಸ್ಥಳದಲ್ಲಿ ಪ್ರಸಾದ ಸ್ವೀಕರಿಸಿ ವಾಪಸ್ ತೆರಳುತ್ತಾರೆ. ಸೌಜನ್ಯ ಮನೆಗೆ ಯಾಕೆ ಬರಲಿಲ್ಲ ಅಂತ ಕೇಳಿದ್ರೆ ಭದ್ರತೆ ಇಲ್ಲ ಅಂತ ಹೇಳುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *