Ad Widget .

ವಿಫಲಗೊಂಡ ಚಂದ್ರಯಾನ| ಚಂದ್ರನ ಮೇಲೆ ಅಪ್ಪಳಿಸಿದ ಲೂನಾ 25

ಸಮಗ್ರ ನ್ಯೂಸ್: ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಪತನವಾಗಿ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಹೇಳಿದೆ.

Ad Widget . Ad Widget .

ಚಂದ್ರಯಾನ 3 ಉಡಾವಣೆ ಬಳಿಕ ಆಗಸ್ಟ್​ 11 ರಂದು ರಷ್ಯಾ ಈ ರಾಕೆಟ್​ ಉಡಾವಣೆ ಮಾಡಿತ್ತಾದರೂ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಪ್ಲಾನ್​ ಮಾಡಿತ್ತು. ಆದರೆ ಇದು ಸಫಲವಾಗಿಲ್ಲ.

Ad Widget . Ad Widget .

ಆಗಸ್ಟ್ 21 ರಂದು ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್​ ಮಾಡಲು ರೋಸ್ಕೋಸ್ಮಾಸ್ ಉದ್ದೇಶಿಸಿತ್ತು. ಆದರೆ ನೌಕೆಯು ತಪ್ಪಾದ ಕಕ್ಷೆಗೆ ಜಾರಿ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ.

1976ರ ಬಳಿಕ ರಷ್ಯಾ ಇದೀಗ ಅಂದರೆ 2023ರಲ್ಲಿ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿಕೊಟ್ಟಿತ್ತು. ಒಂದು ವೇಳೆ ರಷ್ಯಾದ ಈ ಮಿಷನ್​ ಯಶಸ್ವಿಯಾಗಿದ್ದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗುತ್ತಿತ್ತು. ಆದರೆ 47 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ಇಳಿಯುವ ಅವಕಾಶ ಕೈತಪ್ಪಿದೆ.

Leave a Comment

Your email address will not be published. Required fields are marked *