ಸಮಗ್ರ ನ್ಯೂಸ್:ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಅದರೊಂದಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಆದರೆ ನೀವು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡುತ್ತಿದ್ದೀರಿ ಎಂಬುದನ್ನು ಎಂದಾದರು ಗಮನಿಸಿದ್ದೀರಾ?
ಅತಿಯಾಗಿ ಮೊಬೈಲ್ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾಳಾಗಬಹುದು. ಮತ್ತು ಕಡಿಮೆ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾನಿಗೋಳಗಾಗಬಹುದು. ಹಗಲಿನಲ್ಲಿ ಪದೇ ಪದೇ ಫೋನ್ ಚಾರ್ಜ್ ಮಾಡುವ ಅಭ್ಯಾಸವನ್ನು ಇಂದೇ ನಿಲ್ಲಿಸಿ.
ಒಂದೆಡೆ ಬ್ಯಾಟರಿ (Smartphone Battery) ಖಾಲಿಯಾದ ಕಾರಣ ಫೋನ್ ಬಳಸಲಾಗುವುದಿಲ್ಲ, ಆದರೆ ಪದೇ ಪದೇ ಚಾರ್ಜ್ ಮಾಡದೇ ಇರುವುದು ಇದಕ್ಕೆ ಪರಿಹಾರವಾಗಿದೆ. ಒಂದು ವಿಧಾನದ ಪ್ರಕಾರ ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡಿದರೆ. ಆಗ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ.
ಬ್ಯಾಟರಿ ಎಷ್ಟು ಪರ್ಸಂಟೇಜ್ ಇದ್ದಾಗ ಸ್ಮಾರ್ಟ್ ಫೋನ್ ಚಾರ್ಜ್ ಮಾಡಬೇಕು ಗೊತ್ತಾ? ಕೆಲವರು ಫೋನ್ ಚಾರ್ಜ್ ಮಾಡಲು ಹೆಚ್ಚು ಸಮಯ ಕಳೆಯುತ್ತಾರೆ ಮತ್ತು ಕೆಲವರು ಕಡಿಮೆ ಸಮಯವನ್ನು ಕಳೆಯುತ್ತಾರೆ. ಇನ್ನೂ ಕೆಲವರು ಪದೇ ಪದೇ ಚಾರ್ಜ್ ಮಾಡುತ್ತಾರೆ. ಇವೆಲ್ಲವೂ ಒಳ್ಳೆಯ ವಿಧಾನಗಳಲ್ಲ.
ಫೋನ್ ಬ್ಯಾಟರಿಯನ್ನು ಚಾರ್ಚ್ ಮಾಡುವ ಸರಿಯಾದ ವಿಧಾನ:
- ಬ್ಯಾಟರಿ 20% ಕ್ಕಿಂತ ಕಡಿಮೆ ಇದ್ದಾಗ ಚಾರ್ಜಿಂಗ್ ಮಾಡಬೇಕು.
- ಬ್ಯಾಟರಿ ಸಂಪೂರ್ಣವಾಗಿ ಖಾಲಿ ಆಗುವ ತನಕ ಬಳಸಬೇಡಿ.
- ಫೋನ್ ಬ್ಯಾಟರಿಯನ್ನು 80% ಮತ್ತು 100% ನಡುವೆ ಇರಿಸಲು ಪ್ರಯತ್ನಿಸಿ.
- ಫೋನ್ 100% ಚಾರ್ಜ್ ಆದ ನಂತರದಲ್ಲಿ ಚಾರ್ಜರ್ ಅನ್ನು ತೆಗೆದುಹಾಕಬೇಕು.
- ಕೆಲವರು ರಾತ್ರಿ ಮಲಗುವ ಮುನ್ನ ಚಾರ್ಜ್ ಗೆ ಹಾಕಿ ಬೆಳಿಗ್ಗೆ ತೆಗೆಯುತ್ತಾರೆ, ಎಂದಿಗೂ ಈ ತಪ್ಪನ್ನು ಮಾಡಬೇಡಿ. ಫೋನ್ ಸಿಡಿಯುವ ಅಥವಾ ಬ್ಯಾಟರಿ ಹಾಳಾಗುವ ಸಾಧ್ಯತೆ ಹೆಚ್ಚು. ಅಲ್ಲದೆ, ಇದು ಅಪಾಯದ ಅಭ್ಯಾಸ.
ಫೋನ್ ಬ್ಯಾಟರಿಯನ್ನು ಸುರಕ್ಷಿತವಾಗಿಡಲು 20-80 ನಿಯಮವನ್ನು ಅನುಸರಿಸಬಹುದು. ಇದು ಫೋನ್ ಬ್ಯಾಟರಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಬ್ಯಾಟರಿ 20% ಅಥವಾ ಕಡಿಮೆ ಇದ್ದಾಗ ಫೋನ್ ಅನ್ನು ಚಾರ್ಜ್ ಮಾಡಿ ಮತ್ತು 80% ತಲುಪಿದಾಗ ಚಾರ್ಜ್ ಅನ್ನು ತೆಗೆದುಹಾಕಿ.