Ad Widget .

ಅಪ್ ಡೇಟ್ ಆಗಿರಿ, ಯಾವುದೂ ಅಸಾಧ್ಯವಲ್ಲ| ಗೊತ್ತಿಲ್ಲದ್ದನ್ನು ಕೇಳಿ ತಿಳಿಯೋದ್ರಿಂದ ನಾವೇನೂ ದಡ್ಡರಾಗಲ್ಲ!

ಸಮಗ್ರ ನ್ಯೂಸ್: ಯಾವುದೇ ವ್ಯಕ್ತಿ ಇರಲಿ ಯಾವುದೇ ಕೆಲಸವಿರಲಿ ಕಾಲಕಾಲಕ್ಕೆ ಅಪಡೇಟ್ ಆಗುತ್ತಿರಬೇಕು. ಕ್ಷಣಕ್ಷಣಕ್ಕೂ ಹೊಸತನ ಹರಿಯುತ್ತಿರುವ ಇಂದಿನ ಕಾಲದಲ್ಲಿ ಅದಕ್ಕೆ ತಕ್ಕಂತೆ ಒಗ್ಗಿಕೊಳ್ಳದಿದ್ದರೆ ಕೆಲಸ ಕಷ್ಟ ಎನಿಸಲಾರಂಭಿಸುತ್ತದೆ. ಕೆಲಸಕ್ಕೆ ಹೋಗಬೇಕು ಎಂದರೆ ಒಂದು ತರಹದ ಬೇಸರ, ಜುಗುಪ್ಸೆ ಮೂಡಲಾರಂಭಿಸುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದಿನಗಳು ಉರುಳಿದಂತೆ ಇದು ಮಾನಸಿಕ ಖಿನ್ನತೆಗೆ ಎಡೆ ಮಾಡಿಕೊಡುತ್ತದೆ. ಅದರಿಂದ ಆ ವ್ಯಕ್ತಿಯ ವೈಯಕ್ತಿಕ ಜೀವನದ ಜತೆ ಜತೆಗೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಖಿನ್ನತೆಗೊಳಗಾದ ಆ ವ್ಯಕ್ತಿ ಸದಾ ಒತ್ತಡದಲ್ಲಿರುತ್ತಾನೆ. ಕೆಲಸದಲ್ಲಿರುವ ಸಮಸ್ಯೆಯನ್ನು ಹೇಳಲಾಗದೆ ಬಿಡಲಾರದೆ ತೊಳಲಾಡುತ್ತಿರುತ್ತಾನೆ. ಈ ವ್ಯಕ್ತಿಯ ಚಿಂತೆ ಕ್ರಮೇಣ ಎಲ್ಲರಿಗೂ ಆವರಿಸುತ್ತದೆ. ಹೀಗೆ ಮಾನಸಿಕ ತೊಳಲಾಟದ ಸರಣಿ ಶುರುವಾಗುತ್ತದೆ. ನೆಮ್ಮದಿ ಮರೀಚಿಕೆಯಾಗುತ್ತದೆ.

Ad Widget . Ad Widget . Ad Widget .

ಇದು ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ. ಇಂದು ಅನೇಕರು ಈ ತರಹದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಮಾದರಿಯ ಸಮಸ್ಯೆಗಳಿಗೆ ಪರಿಹಾರ ಎಂದರೆ ಮನಸ್ಸಿದ್ದರೆ ಮಾರ್ಗ ಎಂಬ ಉಕ್ತಿಯ ಪಾಲನೆ. ಹೌದು, ಮನುಷ್ಯ ಮನಸ್ಸು ಮಾಡಿದರೆ ಆಗದ ಕೆಲಸ ಯಾವುದೂ ಇಲ್ಲ. ಆರಂಭದಲ್ಲಿ ಹೊಸ ಕೆಲಸ ಅಥವಾ ಹೊಸ ರೀತಿ, ನೀತಿ ಕಷ್ಟವಾಗಬಹುದು ಹಾಗಂತ ಅದಕ್ಕೆ ಬೆನ್ನು ತೋರಿಸಿ ಪಲಾಯನ ಮಾಡುವುದಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡುವುದಿದೆಯಲ್ಲ, ಅದು ನಿಜವಾದ ಸಾಧನೆ. ಇದನ್ನು ಮಾಡಿದಲ್ಲಿ ಎಳ್ಳಷ್ಟೂ ಆಗದು ವೇದನೆ.

ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಅದನ್ನು ಹುಡುಕುವ ವ್ಯವಧಾನ, ವಿಧಾನ ಗೊತ್ತಿರಬೇಕಷ್ಟೇ. ಹೊಸ ತಂತ್ರಜ್ಞಾನ, ಮಾದರಿ ಅರಿಯಬೇಕು. ದಿಢೀರ್ ಆಗಿ ಒಗ್ಗಿಕೊಳ್ಳಲು ಅಥವಾ ಕಲಿಯಲು ಆಗದಿದ್ದರೂ ಯತ್ನ ಬಿಡಬಾರದು. ಕಲಿಕೆ ನಿರಂತರ ಪ್ರಕ್ರಿಯೆ.

ಸದಾ ಹೊಸದನ್ನು ಕಲಿಯುತ್ತಿರಲೇಬೇಕು. ಜ್ಞಾನದಾಹ ನಿರಂತರವಾಗಿರಬೇಕು.ಉಸಿರಿರುವರೆಗೂ ಜ್ಞಾನದ ಹಸಿವು ನಮ್ಮಲ್ಲಿ ಇರಬೇಕು ಎಂದು ಜಗತ್ತಿನ ಖ್ಯಾತ ತತ್ವಜ್ಞಾನಿ ಸಾಕ್ರೇಟಿಸ್ ಕೂಡ ಹೇಳಿದ್ದು. ಗೊತ್ತಿಲ್ಲದ್ದನ್ನು ಗೊತ್ತಿರುವವರ ಬಳಿ ಕೇಳಿ ತಿಳಿಯುವುದರಿಂದ ನಾವೇನು ದಡ್ಡರಾಗುವುದಿಲ್ಲ. ಮೇಲಾಗಿ ಹಾಗೇನಾದರೂ ಕೇಳದೆ ಸುಮ್ಮನೆ ಕುಳಿತರೆ ಅದರಿಂದ ನಮಗೆ ನಷ್ಟ ಹೆಚ್ಚು. ಹುದ್ದೆಯ ಹಮ್ಮು ಬಿಮ್ಮು ಬಿಟ್ಟು ಸಾಗಿದರೆ ಎಲ್ಲವೂ ಸುಲಲಿತ. ಅದು ಇಂದಿನ ತುರ್ತು ಅಗತ್ಯವೂ ಹೌದು.

Leave a Comment

Your email address will not be published. Required fields are marked *