ಕೊಟ್ಟಿಗೆಹಾರ: ಗ್ರಾಮೀಣ ಭಾಗದ ಅಂಚೆ ಕಚೇರಿಯಲ್ಲಿ ಇಂಟರ್ನೆಟ್ ಸಮಸ್ಯೆ | ಮಾಸಿಕ ವೇತನ ಪಡೆಯಲು ವೃದ್ಧರ, ಮಹಿಳೆಯರ ಪರದಾಟ
ಸಮಗ್ರ ನ್ಯೂಸ್: ನಾಗರಿಕರಿಗೆ ಉತ್ತಮ ಸೇವೆ ಶೀಘ್ರವಾಗಿ ನೀಡಲು ನೆರವಾಗುವಂತೆ ಅಂಚೆ ಕಚೇರಿಗಳಲ್ಲಿ ಮಂತ್ರ ಎಂಬ ಉಪಕರಣ ನೀಡಲಾಗಿದೆ. ಆದರೆ ವ್ಯವಸ್ಥೆಗಳನ್ನು ಮೇಲ್ದರ್ಜೆ ಏರಿಸಲಾದರೂ ನೆಟ್ ವರ್ಕ್ ಸಮಸ್ಯೆ ಮಾತ್ರ ಕಗ್ಗಂಟಾಗಿ ಉಳಿದಿದೆ. ಅಂಚೆ ಕಚೇರಿಗಳ ಮುಂಭಾಗದಲ್ಲಿ ನೆಟ್ ವರ್ಕ್ ಸಿಗುವ ಬಸ್ ನಿಲ್ದಾಣಗಳಲ್ಲಿ ನಾಗರೀಕರು ಗಂಟೆ ಗಟ್ಟಲೆ ಕಾಯುಬೇಕಾದ ದುಸ್ಥಿತಿ ಎದುರಾಗಿದೆ. ಮಲೆನಾಡು ಭಾಗದ ಗ್ರಾಮೀಣ ಪ್ರದೇಶದಲ್ಲಿ ಈಗ ಮಳೆಗಾಲವಾದ್ದರಿಂದ ನೆಟ್ ವರ್ಕ್ ಸೇವೆ ಗಗನ ಕುಸುಮವಾಗುತ್ತಿದೆ. ಅಂಚೆ ಕಚೇರಿಗಳಲ್ಲಿ ಮಾಸಿಕ ವೇತನಕ್ಕಾಗಿ ಮಾತ್ರವಲ್ಲ ಕೆಲವು […]