July 2023

ಎಎಪಿ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು, ಸಂಘಟನಾ ಕಾರ್ಯದರ್ಶಿಯಾಗಿ ಸಂದೀಪ್ ಪಾಠಕ್ ನೇಮಕ

ಸಮಗ್ರ ನ್ಯೂಸ್: ಎಎಪಿ ರಾಜ್ಯಾಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಚಂದ್ರು, ಪಕ್ಷದ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಪಾಠಕ್ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಅಮ್ ಆದ್ಮಿ ಪಕ್ಷ ಮಾಹಿತಿ ನೀಡಿದ್ದು, ರಾಜ್ಯದ ಹೆಸರಾಂತ ರಂಗಭೂಮಿ – ಚಲನಚಿತ್ರ ಕಲಾವಿದ, ಮಾಜಿ ಶಾಸಕರು ಹಾಗೂ ಹಿರಿಯ ರಾಜಕಾರಣಿಗಳಾದ ಮುಖ್ಯಮಂತ್ರಿ ಚಂದ್ರು ರವರನ್ನು ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷದ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ದೆಹಲಿಯಲ್ಲಿ […]

ಎಎಪಿ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು, ಸಂಘಟನಾ ಕಾರ್ಯದರ್ಶಿಯಾಗಿ ಸಂದೀಪ್ ಪಾಠಕ್ ನೇಮಕ Read More »

ಗೃಹಜ್ಯೋತಿ ಅರ್ಜಿ ಸಲ್ಲಿಸಲು ಗಡುವು ನೀಡಿದ ಸರ್ಕಾರ

ಸಮಗ್ರ ನ್ಯೂಸ್: ಕರ್ನಾಟಕ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದು ‘ಗೃಹಜ್ಯೋತಿ’ ಯೋಜನೆ. ಜನರು ಈಗಾಗಲೇ ಯೋಜನೆಗೆ ಫಲಾನುಭವಿಯಾಗಲು ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಸರ್ಕಾರ ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಲು ಗಡುವು ನೀಡಿದೆ. ಇಂಧನ ಸಚಿವ ಕೆ. ಜೆ. ಜಾರ್ಜ್ ವಿಧಾನಸಭೆ ಕಲಾಪದಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ‘ಗೃಹಜ್ಯೋತಿ’ ಯೋಜನೆ ಕುರಿತಂತೆ ನಡೆದ ಚರ್ಚೆಯ ವೇಳೆ ಸಚಿವರು ಈ ಬಗ್ಗೆ ಮಾತನಾಡಿದರು. ಸಚಿವರು ಮಾತನಾಡಿ, “ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ

ಗೃಹಜ್ಯೋತಿ ಅರ್ಜಿ ಸಲ್ಲಿಸಲು ಗಡುವು ನೀಡಿದ ಸರ್ಕಾರ Read More »

ಮತ್ತೊಮ್ಮೆ ಸಾಬೀತಾದ ತುಳುನಾಡಿನ ಕೊರಗಜ್ಜನ ಕಾರಣಿಕ| ಹರಕೆ ಕಟ್ಟಿ ಏಳು ಹೆಜ್ಜೆ ಇಡುವಷ್ಟರಲ್ಲಿ ಪತ್ತೆಯಾಯ್ತು ಕಳೆದುಹೋದ ಹಣ!!

ಸಮಗ್ರ ನ್ಯೂಸ್: ತುಳುನಾಡಿನ ದೈವ ಕೊರಗಜ್ಜ ಮತ್ತೊಮ್ಮೆ ಕಾರಣಿಕ ಮೆರೆದಿದ್ದಾನೆ. ಉಡುಪಿ ಜಿಲ್ಲೆಯ ಕುರುಡುಂಜೆಯಲ್ಲಿ ಕೊರಗಜ್ಜ ಭಕ್ತನೊಬ್ಬ ಕಷ್ಟ ಪಟ್ಟು ದುಡಿದ ಇಪ್ಪತ್ತೈದು ಸಾವಿರ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದ. ನಂತರ ಆತ ಕೊರಗಜ್ಜನನ್ನು ನೆನೆದು ಏಳು ಹೆಜ್ಜೆ ಹಾಕುವ ಮುನ್ನ ಪವಾಡದಂತೆ ಕಳೆದು ಹೋದ ಹಣ ಸಿಕ್ಕಿದೆ. ಬ್ರಹ್ಮಾವರ ಸಮೀಪದ ಕುರುಡುಂಜೆಯಲ್ಲಿ ಈ ಘಟನೆ ನಡೆದಿದೆ. ಕುರುಡುಂಜೆಯಲ್ಲಿ ಗದ್ದೆಯೊಂದರಲ್ಲಿ ಶಿವಮೊಗ್ಗ ಮೂಲದ ಗಣೇಶ್ ತನ್ನ ಟ್ರಾಕ್ಟರ್ ಉಳುಮೆ ಮಾಡುತ್ತಿದ್ದರು. ಹತ್ತಿರದ ಗದ್ದೆಗಳಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ

ಮತ್ತೊಮ್ಮೆ ಸಾಬೀತಾದ ತುಳುನಾಡಿನ ಕೊರಗಜ್ಜನ ಕಾರಣಿಕ| ಹರಕೆ ಕಟ್ಟಿ ಏಳು ಹೆಜ್ಜೆ ಇಡುವಷ್ಟರಲ್ಲಿ ಪತ್ತೆಯಾಯ್ತು ಕಳೆದುಹೋದ ಹಣ!! Read More »

ಬಂಟ್ವಾಳ: ಹಾಸಿಗೆ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ| ಲಕ್ಷಾಂತರ ರೂ. ನಷ್ಟ

ಸಮಗ್ರ ನ್ಯೂಸ್: ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಫ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿ ಎಂಬಲ್ಲಿ ಜು. 12 ರಂದು ಬೆಳಿಗ್ಗೆ ನಡೆದಿದೆ. ಸಜೀಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಪ್ಯಾಕ್ಟರಿ ಇದಾಗಿದೆ. ಪ್ಯಾಕ್ಟರಿಯೊಳಗೆ ಲಕ್ಷಾಂತರ ರೂ. ಮೌಲ್ಯದ ಮೆಷಿನರಿಗಳು ಇದ್ದು, ಬೆಂಕಿ ಹಚ್ಚಿಕೊಂಡಿದೆ. ಇದರ ಜೊತೆಗೆ ಲಕ್ಷಾಂತರ ರೂ ಗಳ ತಲೆದಿಂಬು ಹಾಗೂ ಹಾಸಿಗೆಗಳು ದಸ್ತಾನು ಇದ್ದವು. ದಾಸ್ತಾನು ಕೊಠಡಿಗೆ ಬೆಂಕಿ ಹಚ್ಚಿಕೊಂಡಿದೆಯಾದರೂ ದೊಡ್ಡ

ಬಂಟ್ವಾಳ: ಹಾಸಿಗೆ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ| ಲಕ್ಷಾಂತರ ರೂ. ನಷ್ಟ Read More »

ಪತ್ನಿ, ಕುಟುಂಬಸ್ಥರಿಂದ ಕಿರುಕುಳ: ‘ಲೈವ್ ವಿಡಿಯೋ’ ಮಾಡಿ ವ್ಯಕ್ತಿ ಆತ್ಮಹತ್ಯೆ

ಸಮಗ್ರ ನ್ಯೂಸ್:‌ ಪತ್ನಿ ಹಾಗೂ ಆಕೆಯ ಮನೆಯವರ ವಿರುದ್ಧ ಆರೋಪ ಮಾಡಿದ ವ್ಯಕ್ತಿ ಸೆಲ್ಫಿ ವಿಡಿಯೋ ಮಾಡಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಮಾರಗೌಡನಹಳ್ಳಿಯಲ್ಲಿ ನಡೆದಿದೆ. ವಿನಯ್ (40) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪತ್ನಿ ಆಶಾ ಹಾಗೂ ಅವರ ಪೋಷಕರು ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.ವಿಷ ಸೇವಿಸುವ ಮುನ್ನ ವಿಡಿಯೋ ಮಾಡಿಟ್ಟಿರುವ ವಿನಯ್, ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ನಾದಿನಿ ಉಷಾ ಕಾರಣ. ಆಶಾ

ಪತ್ನಿ, ಕುಟುಂಬಸ್ಥರಿಂದ ಕಿರುಕುಳ: ‘ಲೈವ್ ವಿಡಿಯೋ’ ಮಾಡಿ ವ್ಯಕ್ತಿ ಆತ್ಮಹತ್ಯೆ Read More »

ಕೊಡಗು: ಡಿ.ಸಿ.ಕಛೇರಿ ತಡೆಗೋಡೆ ಕಳಪೆ ಕಾಮಗಾರಿ ಪ್ರಕರಣ, ಸ್ಥಳ ತನಿಖೆಗೆ ಮುಂದಾದ ಲೋಕಾಯುಕ್ತ

ಸಮಗ್ರ ನ್ಯೂಸ್: ಕೊಡಗಿನಲ್ಲಿ ಬಹು ಚರ್ಚಿತ ವಿವಾದದ ಬೆಟ್ಟವನ್ನೇ ಸೃಷ್ಟಿಸಿದ್ದ ಕೊಡಗು ಜಿಲ್ಲಾಧಿಕಾರಿಗಳ ಕಛೇರಿ ಮುಂದಿನ ತಡೆಗೋಡೆ ನಿರ್ಮಾಣದ ಕಳಪೆ ಕಾಮಗಾರಿಯ ಬಗ್ಗೆ ಸ್ಥಳ ತನಿಖೆಗೆ ಕರ್ನಾಟಕ ಲೋಕಾಯುಕ್ತ ಮುಂದಾಗಿದೆ. ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಈ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಸಂಭಂದ ಪಟ್ಟ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು,ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತ ಕಿರಿಯ ಅಭಿಯಂತರರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ

ಕೊಡಗು: ಡಿ.ಸಿ.ಕಛೇರಿ ತಡೆಗೋಡೆ ಕಳಪೆ ಕಾಮಗಾರಿ ಪ್ರಕರಣ, ಸ್ಥಳ ತನಿಖೆಗೆ ಮುಂದಾದ ಲೋಕಾಯುಕ್ತ Read More »

ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾರಾಜುಗೆ 5ನೇ ಸ್ಥಾನ

ಸಮಗ್ರ ನ್ಯೂಸ್: ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾರಾಜು ಪ್ರಾನ್ಸ್ ನ ಪ್ಯಾರಿಸ್ ನಲ್ಲಿ ಜುಲೈ6 ರಿಂದ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ನಲ್ಲಿ ಕೀನ್ಯಾ,‌ ರಷ್ಯಾ, ಪೋಲೆಂಡ್, ಚೀನಾ, ಭಾರತ ಕ್ರೀಡಾಪಟುಗಳು ಭಾಗವಹಿಸಿದ್ದು ಜು8 ರಂದು ಶನಿವಾರ ನಡೆದ ಮಹಿಳೆಯರ 1500ಮೀ ಕ್ರೀಡಾಕೂಟದಲ್ಲಿ ರಕ್ಷಿತಾರಾಜು ಟಿ11ವಿಭಾಗದಲ್ಲಿ ( 5:26.47ಸೆಕೆಂಡುಗಳಲ್ಲಿ )ಮೂರನೇ ಸ್ಥಾನ ಪಡೆದು ಪೈನಲ್ ಗೆ ಪ್ರವೇಶಿಸಿದ್ದರು. ಜು10 ಸೋಮವಾರದಂದು ನಡೆದ 1500ಮೀ ಓಟದಲ್ಲಿ (5:24.95 ಸೆಕೆಂಡುಗಳಲ್ಲಿ )ರಕ್ಷಿತಾ 5 ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾರಾಜುಗೆ 5ನೇ ಸ್ಥಾನ Read More »

ಕರ್ತವ್ಯದ ವೇಳೆ ಹಸಿರು ಟೋಪಿ ಧರಿಸಿದ ಬಿಎಂಟಿಸಿ ಕಂಡಕ್ಟರ್| ಮಹಿಳೆಯಿಂದ‌ ಕಂಡಕ್ಟರ್ ಗೆ ಕ್ಲಾಸ್

ಸಮಗ್ರ ನ್ಯೂಸ್: ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ ಆಗಿರುವ ಮುಸ್ಲಿಂ ವ್ಯಕ್ತಿ, ಕರ್ತವ್ಯದ ವೇಳೆ ಹಸಿರು ಬಣ್ಣದ ಟೋಪಿ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನು ಮಹಿಳೆಯೊಬ್ಬರು ಪ್ರಶ್ನಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರವೇ ಸಮವಸ್ತ್ರ ನೀಡುತ್ತದೆ, ಅದರಲ್ಲಿ ಈ ಹಸಿರು ಟೋಪಿ ಕೂಡ ಭಾಗವಾಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಂಡಕ್ಟರ್‌ ಹಾರಿಕೆ ಉತ್ತರ ನೀಡುತ್ತಲೇ ಟೋಪಿಯನ್ನು ತೆಗೆಯಲು ನಿರಾಕರಿಸುತ್ತಾರೆ. ಈ ವಿಡಿಯೋ ವೈರಲ್‌ ಆಗಿದ್ದು, ಮಹಿಳೆಯ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೆಲವರು

ಕರ್ತವ್ಯದ ವೇಳೆ ಹಸಿರು ಟೋಪಿ ಧರಿಸಿದ ಬಿಎಂಟಿಸಿ ಕಂಡಕ್ಟರ್| ಮಹಿಳೆಯಿಂದ‌ ಕಂಡಕ್ಟರ್ ಗೆ ಕ್ಲಾಸ್ Read More »

ಕನ್ನಡಕ್ಕೂ ಬಂದ ಎಐ ಸುದ್ದಿವಾಚಕಿ| ಪವರ್ ಟಿವಿಯ ‘ಸೌಂದರ್ಯ’ ಳಿಗೆ ಮನಸೋತ ಕನ್ನಡಿಗರು!!

ಸಮಗ್ರ ನ್ಯೂಸ್: ಟಿವಿ ನಿರೂಪಕ ಅಥವಾ ಟಿವಿ ನಿರೂಪಕಿಯರ ಸ್ಥಾನವನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಥವಾ ಕೃತಕ ಬುದ್ಧಿಮತ್ತೆ ಆಕ್ರಮಿಸಿಕೊಳ್ಳುತ್ತಿದೆ. ಇತ್ತೀಚೆಗೆ ಒಡಿಶಾದ ಟಿವಿ ಚಾನೆಲ್‌ ಒಟಿವಿಯು ಲಿಸಾ ಹೆಸರಿನ ಸುದ್ದಿ ನಿರೂಪಕಿಯಿಂದ ಸುದ್ದಿ ಓದಿಸಿ ಎಲ್ಲರ ಗಮನ ಸೆಳೆದಿತ್ತು. ಈಗಾಗಲೇ ಇಂಡಿಯಾ ಟುಡೇ ಸೇರಿದಂತೆ ಹಲವು ಸುದ್ದಿ ವಾಹಿನಿಗಳು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನ್ಯೂಸ್‌ ಆಯಂಕರ್‌ಗಳನ್ನು ಪರಿಚಯಿಸಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಜನರೂ ಖುಷಿ ಪಡುವಂತೆ ಪವರ್‌ ಟಿವಿಯು ಸೌಂದರ್ಯ ಹೆಸರಿನ ಎಐ ಆಯಂಕರ್ ಮೂಲಕ ಸುದ್ದಿ ಪ್ರಸಾರ

ಕನ್ನಡಕ್ಕೂ ಬಂದ ಎಐ ಸುದ್ದಿವಾಚಕಿ| ಪವರ್ ಟಿವಿಯ ‘ಸೌಂದರ್ಯ’ ಳಿಗೆ ಮನಸೋತ ಕನ್ನಡಿಗರು!! Read More »

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರೈಲಿನಲ್ಲಿ ಪ್ರಯಾಣಿಸುವವರೇ ಗಮನಿಸಿ…

ಸಮಗ್ರ ನ್ಯೂಸ್: ರೈಲಿನ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗುವ ಭಕ್ತರಿಗೆ ಪ್ರಮುಖ ಮಾಹಿತಿಯೊಂದಿದೆ. ಜುಲೈ 17ರಿಂದ ಅನ್ವಯವಾಗುವಂತೆ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ರೈಲು ಸಂಖ್ಯೆ 16540 ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ರೈಲು ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿಯನ್ನು ಸಂಪರ್ಕಿಸುತ್ತದೆ. ಈ ರೈಲು ಹಾಸನ, ಸಕಲೇಶಪುರ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಯಡಿಯೂರು, ಕುಣಿಗಲ್,

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರೈಲಿನಲ್ಲಿ ಪ್ರಯಾಣಿಸುವವರೇ ಗಮನಿಸಿ… Read More »