July 2023

ಸಂಪಾಜೆ: ಆಸ್ತಿ ವಿವಾದ ಹಿನ್ನಲೆ| ಸಹೋದರರಿಂದಲೇ ಅಣ್ಣನ ಮರ್ಡರ್

ಸಮಗ್ರ ನ್ಯೂಸ್: ಆಸ್ತಿವಿವಾದ ಹಿನ್ನಲೆಯಲ್ಲಿ ಸ್ವಂತ ತಮ್ಮಂದಿರೇ ಅಣ್ಣನನ್ನು ಕೊಚ್ಚಿ ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದಿಂದ ವರದಿಯಾಗಿದೆ. ಇಲ್ಲಿನ ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ […]

ಸಂಪಾಜೆ: ಆಸ್ತಿ ವಿವಾದ ಹಿನ್ನಲೆ| ಸಹೋದರರಿಂದಲೇ ಅಣ್ಣನ ಮರ್ಡರ್ Read More »

ಬಾಲನಟಿ ವನ್ಷಿಕಾ ಆನಂದ್ ಹೆಸರಲ್ಲಿ ವಂಚನೆ| ಆರೋಪಿಯನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ ಎಸಗಿರುವ ಪ್ರಕರಣ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ನಿಶಾ ನರಸಪ್ಪ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ವಂಚನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ ದೂರು ನೀಡಿದ್ದಾರೆ. ಯಶಸ್ವಿನಿ ಅವರಿಗೆ ಇನ್ ಸ್ಟಾಗ್ರಾಂ ಮೂಲಕ ಆರೋಪಿ ನಿಶಾ ಎಂಬಾಕೆಯ ಪರಿಚಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ತಾಯಿ–ಮಗಳನ್ನು ಆರೋಪಿ ಆಹ್ವಾನಿಸಿದ್ದರು. ಇದರಿಂದ ಮತ್ತಷ್ಟು ಹತ್ತಿರವಾಗಿದ್ದರು. ವಂಶಿಕಾ ಹೆಸರು ಹಾಗೂ ಫೋಟೊಗಳನ್ನು ದುರ್ಬಳಕೆ

ಬಾಲನಟಿ ವನ್ಷಿಕಾ ಆನಂದ್ ಹೆಸರಲ್ಲಿ ವಂಚನೆ| ಆರೋಪಿಯನ್ನು ಬಂಧಿಸಿದ ಪೊಲೀಸರು Read More »

RSS ಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ!! ಏನ್ ಸ್ಟೋರಿ ಗೊತ್ತಾ!?

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್ ಎಸ್‌ಎಸ್ ಗೆ ಬಿಗ್ ಶಾಕ್ ನೀಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಆರ್ ಎಸ್‌ಎಸ್ ಗೆ ನೀಡಿದ್ದ 35 ಎಕರೆ 33 ಗುಂಟೆ ಗೋಮಾಳ ಜಮೀನು ಹಸ್ತಾಂತರ ಆದೇಶಕ್ಕೆ ತಡೆ ನೀಡಿದೆ. ಹಿಂದಿನ ಬಿಜೆಪಿ ಸರ್ಕಾರವು ಆರ್ ಎಸ್‌ಎಸ್ ಗೆ ಸೇರಿದ ಜನ ಸೇವಾ ಟ್ರಸ್ಟ್ ಗೆ ಬೆಂಗಳೂರು ದಕ್ಷಿಣ ತಾಲೂಕಿನ ಕುರುಬರಹಳ್ಳಿ ಗ್ರಾಮದ ತಾವರಕೆರೆ ಹೋಬಳಿಯಲ್ಲಿ 35 ಎಕರೆ 33 ಗುಂಟೆ ಗೋಮಾಳ ಜಮೀನನನ್ನು ನೀಡಿತ್ತು. 2023 ರ

RSS ಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ!! ಏನ್ ಸ್ಟೋರಿ ಗೊತ್ತಾ!? Read More »

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆಗೆ ತಡೆ

ಸಮಗ್ರ ನ್ಯೂಸ್: ಪುತ್ತೂರು ಸಹಾಯಕ ಆಯುಕ್ತರಾಗಿದ್ದು, ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಗಿರೀಶ್ ನಂದನ್ ಅವರ ವರ್ಗಾವಣೆಗೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ಪ್ರಾಧಿಕಾರ ಅವಧಿಪೂರ್ಣ ವರ್ಗಾವಣೆ ಎಂಬ ನೆಲೆಯಲ್ಲಿ ತಡೆ ನೀಡಿರುವುದಾಗಿ ತಿಳಿದುಬಂದಿದೆ. ಗಿರೀಶ್ ನಂದನ್ ಅವರು ಸುಮಾರು ಒಂದೂವರೆ ವರ್ಷದಿಂದ ಪುತ್ತೂರು ಎಸಿ ಆಗಿದ್ದರು. ಅವರ ವರ್ಗಾವಣೆಯ ಬಳಿಕ ಮಂಗಳೂರಿ ಕೆಎಐಡಿಬಿಯಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಮಹೇಶ್ಚಂದ್ರ ಅವರು ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಕೆಎಟಿಯಿಂದ ವರ್ಗಾವಣೆ ಆದೇಶಕ್ಕೆ ತಡೆ ದೊರೆತಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಾಗಿದೆ. ಅಡ್ವಕೇಟ್

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆಗೆ ತಡೆ Read More »

ಕೊಡಗು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ಚಾಲಕ ಗಂಭೀರ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಮನೆ ಮತ್ತು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ. ಕಾರು ಚಾಲಕ ಕೊಡ್ಲಿಪೇಟೆಯ ರಕ್ಷಿತ್‌ ಎಂದು ಗುರುತಿಸಲಾಗಿದೆ. ಡಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು-ಗುಜ್ಜಾಗಿದೆ. ಕಾರು ಚಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಮನೆಗೆ ಡಿಕ್ಕಿಯಾಗಿ ವಿದ್ಯುತ್ ಕಂಬಕ್ಕೆ ಕಾರು ಗುದ್ದಿದೆ. ಶನಿವಾರಸಂತೆಯಿಂದ ಕೊಡ್ಲಿಪೇಟೆಗೆ ಹೋಗುತ್ತಿದ್ದ ಕಾರು ಮಸೀದಿ ಬಳಿ ಅಪಘಾತಕ್ಕೀಡಾಗಿದೆ. ಭೀಕರ ಅಪಘಾತದಲ್ಲಿ

ಕೊಡಗು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ಚಾಲಕ ಗಂಭೀರ Read More »

ಸುಳ್ಯ: ವ್ಯಕ್ತಿ ಮೇಲೆ ಹಲ್ಲೆ, ಜೀವಬೆದರಿಕೆ – ದೂರು ದಾಖಲು

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕಸಬಾ ಗ್ರಾಮದ ಗಾಂಧಿನಗರದ ನಾವೂರು ನಿವಾಸಿ ಅಬ್ದುಲ್ ನಾಜೀರ್ (31) ಈ ಬಗ್ಗೆ ದೂರು ನೀಡಿದ್ದಾರೆ. ಅಬ್ದುಲ್ ನಾಜೀರ್ ಆರೋಪಿ ಶಾಬೀತ್ ಎಂಬವರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಮೊಗರ್ಪಣೆ, ಹಳೆಗೇಟು ಎಂಬಲ್ಲಿ ಆಟೋ ಕ್ಯಾರ್ ಎಂಬ ಸರ್ವಿಸ್ ಸ್ಟೇಷನ್ ಅನ್ನು ಪಾರ್ಟನರ್ ಶೀಫ್ ನಲ್ಲಿ ವ್ಯವಹಾರ ನಡೆಸುತ್ತಿದ್ದು, ತಮ್ಮ ವ್ಯವಹಾರದಲ್ಲಿ ತಮ್ಮೊಳಗೆ ತಕರಾರು

ಸುಳ್ಯ: ವ್ಯಕ್ತಿ ಮೇಲೆ ಹಲ್ಲೆ, ಜೀವಬೆದರಿಕೆ – ದೂರು ದಾಖಲು Read More »

ಬೆಳ್ತಂಗಡಿ: ಸೈನೇಡ್ ಸೇವಿಸಿ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವಕನೋರ್ವ ಸೈನೇಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಗುರುವಾರ ಸಂಭವಿಸಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಗಣೇಶ ಆಚಾರ್ಯ ಅವರ ಪುತ್ರ ರೂಪೇಶ್ ಆಚಾರ್ಯ(31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸ್ವರ್ಣ ಕುಸುರಿ ಕೆಲಸಗಾರರಾಗಿದ್ದ ರೂಪೇಶ್ ಅವರು ಸ್ಥಳೀಯ ಸಂಸ್ಥೆಯಲ್ಲಿ ನೌಕರರಾಗಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದರು. ಮದ್ಯವ್ಯಸನಿಯಾಗಿದ್ದ ಅವರು ಗುರುವಾರ ಮಧ್ಯಾಹ್ನ ತನ್ನ ಕೊಠಡಿಯಲ್ಲಿ ಸೈನೇಡ್ ಸೇವಿಸಿದ್ದರು. ಇದನ್ನು ಗಮನಿಸಿದ ಮನೆ ಮಂದಿ ಕೂಡಲೇ 108 ಅಂಬ್ಯುಲೆನ್ಸ್ ಮೂಲಕ ಮಂಗಳೂರು

ಬೆಳ್ತಂಗಡಿ: ಸೈನೇಡ್ ಸೇವಿಸಿ ಯುವಕ ಆತ್ಮಹತ್ಯೆ Read More »

ದಾಖಲೆಯ ಮೊತ್ತಕ್ಕೆ ಒಟಿಟಿ ಹಕ್ಕು ಮಾರಾಟ| ಪ್ರಭಾಸ್ ನಟನೆಯ ‘ಸಲಾರ್’ ಮೇಲೆ ಭಾರೀ ನಿರೀಕ್ಷೆ

ಸಮಗ್ರ ನ್ಯೂಸ್: ನಟ ಪ್ರಭಾಸ್‌ ಅಭಿನಯದಲ್ಲಿ ಸಿದ್ಧವಾಗಿರುವ ಸಲಾರ್‌ ಸಿನಿಮಾ, ಹತ್ತು ಹಲವು ವಿಚಾರಕ್ಕೆ ಚರ್ಚೆಯಲ್ಲಿದೆ. ಹೊಂಬಾಳೆ ಫಿಲಂಸ್‌ ನಿರ್ಮಾಣದ ಸಿನಿಮಾ ಎಂಬುದು ಒಂದೆಡೆಯಾದರೆ, ಪ್ರಶಾಂತ್‌ ನೀಲ್‌ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೂ ಚಿತ್ರ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಲಾರ್ ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಇನ್ನೆರಡು ತಿಂಗಳು ಬಾಕಿ ಇದೆ. ಈ ನಡುವೆ ಈ ಹಿಂದಿನ ಹಲವು ಸಿನಿಮಾ ದಾಖಲೆಗಳನ್ನು ಸಲಾರ್‌ ಮುರಿಯಲಿದೆ ಎಂದೂ ಹೇಳಲಾಗುತ್ತಿದೆ. ಅದರಂತೆ

ದಾಖಲೆಯ ಮೊತ್ತಕ್ಕೆ ಒಟಿಟಿ ಹಕ್ಕು ಮಾರಾಟ| ಪ್ರಭಾಸ್ ನಟನೆಯ ‘ಸಲಾರ್’ ಮೇಲೆ ಭಾರೀ ನಿರೀಕ್ಷೆ Read More »

ತೃತೀಯ ಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ| ಅವನು ಅವಳಲ್ಲ ಅವನೇ..!!

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಘಟನೆ ನಡೆದಿದ್ದು, ತೃತೀಯಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದವನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸರಹಳ್ಳಿಯ ಮಂಜುನಾಥ ನಗರ ನಿವಾಸಿ ಚೇತನ್ ತೃತೀಯ ಲಿಂಗಿಯ ವೇಷ ಧರಿಸಿ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದ. ಅಲ್ಲಿಗೆ ಮಹಿಳೆಯರು, ಪುರುಷರನ್ನು

ತೃತೀಯ ಲಿಂಗಿ ವೇಷ ಧರಿಸಿ ವೇಶ್ಯಾವಾಟಿಕೆ| ಅವನು ಅವಳಲ್ಲ ಅವನೇ..!! Read More »

ಚಂದ್ರಶಿಕಾರಿಯತ್ತ ಇಸ್ರೋ| ಇಂದು ಮಧ್ಯಾಹ್ನ ಚಂದ್ರಯಾನ-3

ಸಮಗ್ರ ನ್ಯೂಸ್: ಚಂದ್ರನ ಕುರಿತ ಹಲವು ಮೊದಲುಗಳನ್ನು ಮೊದಲ ಚಂದ್ರಯಾನದಲ್ಲಿ ಜಗತ್ತಿಗೆ ಬಿತ್ತರಿಸಿದ್ದ ಭಾರತ, ಇದೀಗ ಮತ್ತಷ್ಟು ಪ್ರಥಮಗಳನ್ನು ಸಾಧಿಸಲು ಮೂರನೇ ಬಾರಿಗೆ ಚಂದ್ರನ ಸವಾರಿ ಹೊರಟಿದೆ. ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆಗೆ ಗುರುವಾರ ಮಧ್ಯಾಹ್ನದಿಂದ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ಉಡಾವಣೆ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.

ಚಂದ್ರಶಿಕಾರಿಯತ್ತ ಇಸ್ರೋ| ಇಂದು ಮಧ್ಯಾಹ್ನ ಚಂದ್ರಯಾನ-3 Read More »