July 2023

ಹಾಸನ: ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದು ಬಾಲಕಿ ಸಾವು

ಸಮಗ್ರ ನ್ಯೂಸ್: ಜೋಕಾಲಿ ಆಡಲು ಹೋಗಿ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕುಣಿಕೇರಿ ಗ್ರಾಮದಲ್ಲಿ ನಡೆದಿದೆ. ಬಸವರಾಜು ಮತ್ತು ಬೇಬಿ ದಂಪತಿಯ ಪುತ್ರಿ ಸಾನಿತ (9) ಮೃತಪಟ್ಟ ದುರ್ದೈವಿಯಾಗಿದ್ದು, ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಮನೆಯ ಒಳಗೆ ಸೀರೆಯಲ್ಲಿ ಜೋಕಾಲಿ ಆಡುಲು ಸೀರೆ ಕಟ್ಟಿದ್ದು, ಅದರಲ್ಲಿ ಆಡುವ ಸಂದರ್ಭದಲ್ಲಿ ಆಯತಪ್ಪಿ ಕುತ್ತಿಗೆಗೆ ಸೀರೆ ಬಿಗಿದು ಬಾಲಕಿ ಸಾವನ್ನಪ್ಪಿದ್ದಾಳೆ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ […]

ಹಾಸನ: ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದು ಬಾಲಕಿ ಸಾವು Read More »

ಮಂಗಳೂರು: ಪಡಿತರ ಚೀಟಿಯಿಂದ ಮೃತರ ಹೆಸರು ತೆಗೆಯಲು ಸೂಚನೆ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯ ಕೆಲವೊಂದು ಕುಟುಂಬಗಳ ಸದಸ್ಯರು ಮೃತರಾಗಿದ್ದರೂ, ಅವರ ಹೆಸರು ಪಡಿತರದಲ್ಲಿ ತೆಗೆದು ಹಾಕಿರುವುದಿಲ್ಲ. ಈ ರೀತಿಯ 13,133 ಫಲಾನುಭವಿಗಳ ಹೆಸರು ಪಡಿತರ ಚೀಟಿಯಲ್ಲಿ ಉಳಿಸಿರುವುದು ಅಕ್ರಮವಾಗಿದೆ. ಅಂತಹ ಪಡಿತರ ಚೀಟಿದಾರರು ಮೃತಪಟ್ಟವರ ದಾಖಲಾತಿಯನ್ನು ತಾಲೂಕು ಕಚೇರಿಗೆ ಸಲ್ಲಿಸಿ ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರನ್ನು ತೆಗೆಸಬೇಕು. ಮೃತರಾದವರ ಹೆಸರನ್ನು ಚೀಟಿಯಿಂದ ತೆಗೆಯದೇ ಇರುವಂತವರನ್ನು ನಿಯಾಮಾನುಸಾರ ಅನರ್ಹಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

ಮಂಗಳೂರು: ಪಡಿತರ ಚೀಟಿಯಿಂದ ಮೃತರ ಹೆಸರು ತೆಗೆಯಲು ಸೂಚನೆ Read More »

ಮೈಸೂರು:ಗಗನಕ್ಕೇರಿದ ಶುಂಠಿ ಬೆಲೆ | 8 ಮೂಟೆ ಶುಂಠಿಯನ್ನೇ ಕದ್ದೊಯ್ದ ಕಳ್ಳರು

ಸಮಗ್ರ ನ್ಯೂಸ್:ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರಿದೆ. ಟೊಮೆಟೊ ಬೆಲೆಗೆ ಬಂಗಾರದ ರೇಟ್ ಬಂದ ಬೆನ್ನಲ್ಲೇ ಟೊಮೆಟೊ ತೋಟಕ್ಕೆ ಸಿಸಿಟಿವಿ ಕಣ್ಗಾವಲು, ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆಯೊದಗಿಸಿದ್ದಾಯಿತು. ಈಗ ಶುಂಠಿ ಸರದಿ ಆರಂಭವಾಗಿದೆ. ಶುಂಠಿ ಬೆಲೆಯಲ್ಲೂ ಒಂದೇ ಸಮನೇ ಏರಿಕೆಯಾಗುತ್ತಿದೆ. ಟೊಮೆಟೊ ಬೆಲೆ ಹೆಚ್ಚಳವಾಗುತ್ತಿದ್ದಂತೆ ಮಾರ್ಕೆಟಿಗೆ ಸಾಗಿಸುತ್ತಿದ್ದ ಟೊಮೆಟೊ ವಾಹನಗಳನ್ನೇ ಕಳ್ಳತನ ಮಾಡಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಕಟಾವು ಮಾಡಿಟ್ಟಿದ್ದ ಶುಂಠಿಯನ್ನೇ ಕಳ್ಳರು ಕದ್ದೊಯ್ದಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಶುಂಠಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಂಠಿ

ಮೈಸೂರು:ಗಗನಕ್ಕೇರಿದ ಶುಂಠಿ ಬೆಲೆ | 8 ಮೂಟೆ ಶುಂಠಿಯನ್ನೇ ಕದ್ದೊಯ್ದ ಕಳ್ಳರು Read More »

21 ಲಕ್ಷ ಮೌಲ್ಯದ ಟೊಮೆಟೊ ತುಂಬಿಕೊಂಡು ಹೊರಟಿದ್ದ ಲಾರಿ ನಾಪತ್ತೆ

ಸಮಗ್ರ ನ್ಯೂಸ್: ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೊ ತುಂಬಿದ್ದ ಲಾರಿ ನಾಪತ್ತೆಯಾಗಿ ರೈತ ಕಂಗಾಲಾಗಿರುವ ಘಟನೆ ನಡೆದಿದೆ. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು ಇದರಿಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದು, ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

21 ಲಕ್ಷ ಮೌಲ್ಯದ ಟೊಮೆಟೊ ತುಂಬಿಕೊಂಡು ಹೊರಟಿದ್ದ ಲಾರಿ ನಾಪತ್ತೆ Read More »

ಚಿಕ್ಕಮಗಳೂರು: 20 ಅಡಿ ಆಳಕ್ಕೆ ಬಿದ್ದ ಕಾರು

ಸಮಗ್ರ ನ್ಯೂಸ್: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೂವ ಕಾರೊಂದು 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದಿರುವ ಘಟನೆ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಸಂಭವಿಸಿದೆ. ಕೋಲಾರದಿಂದ ಹೊರನಾಡಿಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದ್ದು ಗಾಯಗೊಂಡ ಪ್ರವಾಸಿಗರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.

ಚಿಕ್ಕಮಗಳೂರು: 20 ಅಡಿ ಆಳಕ್ಕೆ ಬಿದ್ದ ಕಾರು Read More »

ಪಿರಿಯಾಪಟ್ಟಣ: ಗಾಂಜಾ ಮಾರಾಟ| ಕೊಡಗಿನ ವ್ಯಕ್ತಿ ಬಂಧನ

ಸಮಗ್ರ ನ್ಯೂಸ್: ಪಿರಿಯಾಪಟ್ಟಣ ತಾಲೂಕಿನ ಆಯುರ್ಬೀಡು ಸಮೀಪದ ಲಿಂಗಪುರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೊಡಗಿನ ವ್ಯಕ್ತಿಯನ್ನು ಬೈಲುಕುಪ್ಪೆ ಪೊಲೀಸರು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಿವಾಸಿ ಅಜೀಜ್ ಬಂಧಿತ ಆರೋಪಿ. ಖಚಿತ ಮಾಹಿತಿಯ ಆದರದ ಮೇಲೆ ಭಾನುವಾರ ಬೆಳಿಗ್ಗೆ ಆರೋಪಿಯನ್ನು ಸೆರೆ ಹಿಡಿದು 5 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆಯಲ್ಲಿ ಪಿಎಸ್ಐ ಅಜಯ್ ಕುಮಾರ್, ಗುಪ್ತಚರ ಸಬ್ ಇನ್ಸ್ಪೆಕ್ಟರ್ ಮಹಾಲಿಂಗ

ಪಿರಿಯಾಪಟ್ಟಣ: ಗಾಂಜಾ ಮಾರಾಟ| ಕೊಡಗಿನ ವ್ಯಕ್ತಿ ಬಂಧನ Read More »

ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ಕಿಸಿದ ಗಗನಸಖಿ

ಸಮಗ್ರ ನ್ಯೂಸ್: ಎಂ.ಎಸ್ ಧೋನಿ ಅಭಿಮಾನಿಗಳು ಒಮ್ಮೆಯಾದ್ರೂ ಧೋನಿಯನ್ನ ಹತ್ತಿರದಿಂದ ನೋಡ್ಬೇಕು,ಅಂತಹ ಒಂದು ಕ್ಷಣ ಸಿಕ್ಕರೂ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲಾರದೇ ಇರೋದಿಲ್ಲ. 2023 IPL ಟೂರ್ನಿಯಲ್ಲಿ ಮಹಿ ನೋಡಲೆಂದೇ ಸಾವಿರಾರು ಕಿಲೋ ಮೀಟರ್‌ಗಳಿಂದ ಅಭಿಮಾನಿಗಳು ಬಂದಿದ್ರು. ಇದೀಗ ಗಗನಸಖಿಯೊಬ್ಬಳು ಅಂತಹದ್ದೇ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲು ಹೋಗಿ ಸುದ್ದಿಯಾಗಿದ್ದಾಳೆ. ಇತ್ತೀಚೆಗೆ ವಿಮಾನ ಪ್ರಯಾಣ ಸಮಯದಲ್ಲಿ MSD ಪಕ್ಕದಲ್ಲಿ ನಿಂತು ಗಗನ ಸಖಿಯೊಬ್ಬಳು (Air Hostess) ಫೋಟೋ ತೆಗೆದುಕೊಂಡಿದ್ದಾಳೆ. ಆದ್ರೆ ಈ ಫೋಟೋ ತೆಗೆದುಕೊಳ್ಳುವಾಗ ಧೋನಿ ಸಣ್ಣ ನಿದ್ರೆಗೆ ಜಾರಿದ್ದರು.

ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ಕಿಸಿದ ಗಗನಸಖಿ Read More »

ಐವರ್ನಾಡು: ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭ

ಸಮಗ್ರ ನ್ಯೂಸ್: ಐವರ್ನಾಡು ಗ್ರಾಮದ ಜನನಿ ಕಾಂಪ್ಲೆಕ್ಸ್ ನಲ್ಲಿ ಜು.30 ರಂದು ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ರಿಬ್ಬನ್ ಕಟ್ ಮಾಡಿದ ಸತೀಶ್ ಕುಮಾರ್, ಜೀವನ್ ಜಬಳೆ, ರಾಜೇಂದ್ರ, ಮೋಹನ್ ಸುಂದರ್, ಜೋಸೆಫ್ , ಯಕ್ಷಿತ್, ಚರಣ್ ಜಬಳೆ, ವಾಸುದೇವ ಬೊಳುಬೈಲು, ಅಬ್ದುಲ್ಲಾ ಪರ್ಲಿಕಜೆ, ರಂಜಾನ್ ಪರ್ಲಿಕಜೆ, ಮುಝಮಿಲ್ ಮೊದಲಾದವರು ಉಪಸ್ಥಿತರಿದ್ದರು.

ಐವರ್ನಾಡು: ಹೇರ್ ಟ್ರೆಂಡ್ ಬಾರ್ಬರ್ ಶಾಪ್ ಶುಭಾರಂಭ Read More »

ಕುಶಾಲನಗರ: ಕಾಡಾನೆ ಮೃತ ದೇಹ ಪತ್ತೆ

ಸಮಗ್ರ ನ್ಯೂಸ್:ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಕಂಬಿಬಾಣೆ ಗ್ರಾಮದಲ್ಲಿ ಕಾಡಾನೆ ಸಾವನಪ್ಪಿದ ಘಟನೆ ಜು. 30 ರಂದು ವರದಿಯಾಗಿದೆ. ಅಂದಾಜು 20 ವರ್ಷ ಪ್ರಾಯದ ಗಂಡು ಆನೆಯ ಮೃತದೇಹ ಬೆಳಗ್ಗೆ ಕಂಬಿಬಾಣೆ ಗ್ರಾಮದ ಗದ್ದೆ ಬಳಿ ಕಾಣಿಸಿಕೊಂಡಿದೆ. ಅರಣ್ಯದ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕುಶಾಲನಗರ: ಕಾಡಾನೆ ಮೃತ ದೇಹ ಪತ್ತೆ Read More »

ಮನೆಗೆ ತೆರಳಿದ್ದ ಯೋಧನ ಅಪಹರಣ| ಸೇನೆಯಿಂದ ತೀವ್ರ ಹುಡುಕಾಟ

ಸಮಗ್ರ ನ್ಯೂಸ್: ರಜೆಯ ಮೇಲೆ ಮನೆಗೆ ಬಂದಿದ್ದ ಯೋಧನನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu & Kashmir) ಕುಲ್ಗಾಮ್ ನಲ್ಲಿ ನಡೆದಿದೆ. ಜಾವೇದ್ ಅಹ್ಮದ್ ವಾನಿ (25) ಅಪರಹರಣಕ್ಕೊಳಗಾದ ಯೋಧ ಎಂದು ತಿಳಿದು ಬಂದಿದೆ. ಜಾವೇದ್ ಮನೆಯಿಂದ ಅಂಗಡಿಯೊಂದಕ್ಕೆ ತೆರಳುವುದಾಗಿ ಹೇಳಿ ಕಾರಿನಲ್ಲಿ ಹೋಗಿದ್ದರು. ಆದರೆ ತುಂಬಾ ಸಮಯದವರೆಗೂ ಅವರು ವಾಪಾಸ್ ಆಗದೇ ಇರುವುದರಿಂದ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ ಅವರ ಕಾರು ಪರಂಹಾಲ್ ಎಂಬ ಗ್ರಾಮದಲ್ಲಿ ಪತ್ತೆಯಾಗಿದೆ. ಕಾರಿನ ಡೋರ್‌ಗಳು ತೆರೆದಿದ್ದು ಕಾರಿನಲ್ಲಿ

ಮನೆಗೆ ತೆರಳಿದ್ದ ಯೋಧನ ಅಪಹರಣ| ಸೇನೆಯಿಂದ ತೀವ್ರ ಹುಡುಕಾಟ Read More »