ಸಮಗ್ರ ನ್ಯೂಸ್: ಟೇಸ್ಟ್ ಅಟ್ಲಾಸ್ ಕಳೆದ ಕೆಲವು ದಿನಗಳ ಹಿಂದೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಂತೆ ಕರ್ನಾಟಕದ ಹೆಮ್ಮೆ ಮೈಸೂರು ಪಾಕ್ ವಿಶ್ವ ಅಗ್ರ ಸಿಹಿ ತಿನಿಸುಗಳ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದೆ. ಕುಲ್ಫಿ ಹಾಗೂ ಕುಲ್ಫಿ ಪಲೋಡಾ ಕ್ರಮವಾಗಿ 18 ಹಾಗೂ 32ನೇ ಸ್ಥಾನಗಳನ್ನು ಪಡೆದುಕೊಂಡಿವೆ.
ವಿಶ್ವ ಅಗ್ರ ಸಿಹಿ ತಿನಿಸುಗಳ ಪೈಕಿ ಮೊದಲ ಐದು ಸ್ಥಾನದಲ್ಲಿ ಪೋರ್ಚುಗಲ್‌ನ ಪಾಸ್ತೆಲ್ ಡಿ ನಾಟಾ, ಇಂಡೋನೇಷ್ಯಾದ ಸೆರಾಬಿ, ಟರ್ಕಿಯ ಡೊಂಡುರ್ಮಾ, ದಕ್ಷಿಣ ಕೊರಿಯಾದ ಹೊಟೆಕ್, ಥಾಯ್ಲೆಂಡ್‌ನ ಪಾ ಥಾಂಗ್ ಕೋ ಇದೆ.
ಆಚರಣೆ, ಸಂಸ್ಕಾರ, ಸಂಸ್ಕೃತಿಯಂತೆ ಆಹಾರ ಸಂಸ್ಕೃತಿಯಲ್ಲೂ ಭಾರತ ಭಿನ್ನವಾಗಿದೆ. ಬಹಳ ಹಿಂದಿನ ಕಾಲದಿಂದಲೂ ಭಾರತದಲ್ಲಿ ಭಿನ್ನ ಆಹಾರ ಪದಾರ್ಥಗಳು ಜಗತ್ತಿನ ಗಮನ ಸೆಳೆದಿವೆ. ಅಲ್ಲದೆ ಇಂದಿಗೂ ಭಾರತೀಯ ಭಕ್ಷ್ಯಗಳು ಜಗತ್ತಿನಾದ್ಯಂತ ಖ್ಯಾತಿ ಪಡೆಯುತ್ತಲೇ ಇವೆ.
ವಿಶ್ವದ 50 ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್‌ಗಳ ಪಟ್ಟಿ ಪ್ರಕಟವಾಗಿದ್ದು, ಭಾರತದ ಮೂರು ತಿನಿಸುಗಳು ಇವುಗಳಲ್ಲಿ ಸ್ಥಾನ ಪಡೆದಿರುವುದೇ ಭಾರತದ ಆಹಾರ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಪಾಕ್ ಕೂಡ ಇದೆ ಎಂಬುದು ಇನ್ನೂ ಗಮನಾರ್ಹ ಸಂಗತಿಯಾಗಿದೆ.
ಪೋರ್ಚುಗಲ್‌ನ ಪ್ಯಾಸ್ಟೆಲ್ ಡೆ ನಾಟಾ, ಇಂಡೋನೇಷ್ಯಾದ ಸೆರಾಬಿ, ಟರ್ಕಿಯ ದೊಂಡುರ್ಮಾ, ದಕ್ಷಿಣ ಕೊರಿಯಾದ ಹೊಟ್ಟೆಯೋಕ್ ಹಾಗೂ ಥೈಲ್ಯಾಂಡ್‌ನ ಪಾ ಥಾಂಗ್ ಕೊ ಕ್ರಮವಾಗಿ ಒಂದರಿಂದ ಐದನೇ ಸ್ಥಾನದಲ್ಲಿವೆ. ಪಟ್ಟಿಯಲ್ಲಿ ಭಾರತದ ಮೂರು ತಿನಿಸುಗಳು ಸ್ಥಾನ ಪಡೆದಿರುವುದಕ್ಕೆ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ.