Ad Widget .

ನೇತ್ರಾವತಿ ಪೀಕ್ ಚಾರಣಕ್ಕೆ ಷರತ್ತು ವಿಧಿಸಿದ ಅರಣ್ಯ ಇಲಾಖೆ| ಪ್ರವಾಸಿಗರಿಂದ ಅಧಿಕಾರಿಗಳ ಜೊತೆ ವಾಗ್ವಾದ

ಸಮಗ್ರ ನ್ಯೂಸ್: ಪ್ರವಾಸಿಗರು ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖದಲ್ಲಿ ನಡೆದಿದೆ. ಪ್ರವಾಸಿಗರು ಮುಂಗಡ ಬುಕ್ಕಿಂಗ್ ಮಾಡಿದ್ರು ಅರಣ್ಯ ಇಲಾಖೆ ಸಿಬ್ಬಂದಿಗಳು ಚಾರಣಕ್ಕೆ ಅವಕಾಶ ನೀಡದ ಹಿನ್ನೆಲೆ ಪ್ರವಾಸಿಗರಿಗೆ ನಿರಾಸೆಯಾಗಿದೆ.

Ad Widget . Ad Widget .

ಅರಣ್ಯ ಇಲಾಖೆಯ ನಿಯಮದಂತೆ ದಿನಕ್ಕೆ 300 ಮಂದಿಗಷ್ಟೆ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ನೇತ್ರಾವತಿ ಪೀಕ್ ಗೆ ಆಗಮಿಸಿದ್ದ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.

Ad Widget . Ad Widget .

ಳೆದ ವರ್ಷ ದಿನವೊಂದಕ್ಕೆ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಬಾರಿ ವಾರಾಂತ್ಯದಲ್ಲಿ ಚಾರಣಕ್ಕೆ ಬರುತ್ತಿರುವವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಇರುವುದರಿಂದ ಅರಣ್ಯ ಇಲಾಖೆ 300 ಜನರಿಗೆ ಅವಕಾಶವನ್ನು ನೀಡಿದೆ. ಚಾರಣಕ್ಕೆ ಹೋಗಲು ಬಯಸುವವರಿಗೆ ಆನ್‍ಲೈನ್ ಮೂಲಕ ಮುಂಗಡ ಬುಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳ ಬಹುತೇಕ ವಾರಾಂತ್ಯದ ದಿನಗಳ ಚಾರಣದ ಬುಕಿಂಗ್‌ (300 ಜನರ ಮಿತಿಯಲ್ಲಿ) ಮುಗಿದಿದೆ ಎಂಬ ಮಾಹಿತಿ ಇದೆ. ಬುಕಿಂಗ್‌ ಮಾಡಲು ಸಾಧ್ಯವಾಗದಿರುವ ಚಾರಣ ಪ್ರಿಯರಲ್ಲಿ ಇದು ನಿರಾಶೆ ತರುತ್ತಿದೆ.

‘ಒಂದು ಇಮೇಲ್ ಐಡಿಯ ಮೂಲಕ ಗರಿಷ್ಟ 10 ಜನರಿಗೆ ಬುಕಿಂಗ್ ಮಾಡುವ ಅವಕಾಶ ಇರುತ್ತದೆ. ಈ ನಿಯಮದ ಅಡಿಯಲ್ಲೇ ಜನರು ಚಾರಣ ಬುಕಿಂಗ್ ಮಾಡುತ್ತಿದ್ದಾರೆ. ಬುಕಿಂಗ್ ಮಾಡಿದ ವ್ಯಕ್ತಿ ಜೊತೆಗೆ ಇದ್ದರೆ ಮಾತ್ರ ಆ ತಂಡವನ್ನು ಚಾರಣಕ್ಕೆ ಕಳಿಸುತ್ತೇವೆ’ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಹೇಳಿದ್ದಾರೆ.

Leave a Comment

Your email address will not be published. Required fields are marked *