ಡಾಕ್ಟರ್‌ಗೆ 500 ರೂ. ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ| ಫನ್ನಿ ಮೂಮೆಂಟ್‌ ಎಂದ ಡಾಕ್ಟರ್‌

ಸಮಗ್ರ ನ್ಯೂಸ್: ರೋಗಿಯೊಬ್ಬ ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ಘಟನೆ ನಡೆದಿದೆ. ನಕಲಿ ನೋಟಿನ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಡಾಕ್ಟರ್‌, ಇದೊಂದು ಫನ್ನಿ ಮೂಮೆಂಟ್‌ ಅಂತ ಬರೆದುಕೊಂಡಿದ್ದಾರೆ.

Ad Widget ... ..

ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್‌ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಶುಲ್ಕವಾಗಿ 500 ರೂ. ಮುಖಬೆಲೆ ನೋಟನ್ನು ಕೊಟ್ಟಿದ್ದರು. ಆದರೆ ಇದು ನಕಲಿ ನೋಟು ಎಂದು ನಂತರ ವೈದ್ಯರಿಗೆ ಗೊತ್ತಾಗಿದೆ.

Ad Widget

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನೋಟಿನೊಂದಿಗೆ ಡಾ. ಮಾನನ್‌ ವೊರ ಅವರು ಪೋಸ್ಟ್‌ವೊಂದನ್ನು ಹಾಕಿದ್ದಾರೆ. ವೈದ್ಯಕೀಯ ತಪಾಸಣೆಗೆ ಬಂದಿದ್ದ ರೋಗಿಯೊಬ್ಬರು ನಕಲಿ ನೋಟನ್ನು ಕೊಟ್ಟು ಹೋಗಿದ್ದಾರೆ. ನಮ್ಮ ಸಿಬ್ಬಂದಿ ಕೂಡ ಅದನ್ನು ಸರಿಯಾಗಿ ಗಮನಿಸಿಲ್ಲ. ಕೊನೆಗೆ ಅದು ನನ್ನ ಬಳಿಗೆ ಬಂದಿದೆ. ಈ ನೋಟನ್ನು ನೋಡಿ ನನಗೆ ನಗು ಬಂತು. ಆ ರೋಗಿ ನನ್ನ ಬಳಿ ದರೋಡೆ ಮಾಡಿದ್ದಾರೆ. ಆದರೂ ಇದು ಫನ್ನಿಯಾಗಿದೆ. ಈ ನೆನಪಿಗಾಗಿ ಆ ನೋಟನ್ನು ಇಟ್ಟುಕೊಳ್ಳುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವೈದ್ಯರ ಈ ಪೋಸ್ಟ್‌ನ್ನು ಅನೇಕರು ಲೈಕ್‌ ಮಾಡಿದ್ದಾರೆ. ಇನ್ನೂ ಕೆಲವು ನೆಟ್ಟಿಗರು ಕಾಮೆಂಟ್‌ ಕೂಡ ಮಾಡಿದ್ದಾರೆ.

Leave a Comment

Your email address will not be published. Required fields are marked *