ಸಾಲದ ಹೊರೆ ತಾಳಲಾರದೆ ಕರಾಚಿ ಬಂದರನ್ನೇ ಮಾರಾಟಕ್ಕಿಟ್ಟ ನೆರೆರಾಷ್ಟ್ರ| ಅರಾಜಕತೆಯಿಂದ ಮಾಡಿದ್ದನ್ನು ಉಣ್ಣುತ್ತಿರುವ ಪಾಕಿಸ್ತಾನ
ಸಮಗ್ರ ನ್ಯೂಸ್: ಭಯೋತ್ಪಾದನೆ, ಅರಾಜಕತೆ ಮತ್ತು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಪಾಕಿಸ್ಥಾನ ಈಗ ಹಣಕಾಸು ಹೊಂದಿಸಲು ಪ್ರಮುಖ ವಾಣಿಜ್ಯ ನಗರಿಯೂ ಆಗಿರುವ ಕರಾಚಿ ಬಂದರನ್ನೇ ಮಾರಲು ಮುಂದಾಗಿದೆ. ಹಣಕಾಸಿನ ಬಿಕ್ಕಟ್ಟಿನಿಂದಾಗಿ ದಿವಾಳಿಯಾಗಿ ಬೀದಿಗೆ ಬಿದ್ದಿರುವ ಪಾಕಿಸ್ಥಾನಕ್ಕೆ ಈಗ ದೇಶದ ಆಸ್ತಿಗಳನ್ನು ಮಾರುವುದೊಂದೇ ಉಳಿದಿರುವ ಮಾರ್ಗ. ಹೀಗಾಗಿ ಕರಾಚಿ ಬಂದರನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಮಾರಲು ಮುಂದಾಗಿದೆ. ಈ ಸಂಬಂಧ ವಾಣಿಜ್ಯ ಒಪ್ಪಂದದ ಮಾತುಕತೆಗಾಗಿ ಅಂತರ್ ಸರ್ಕಾರಿ ವಾಣಿಜ್ಯ ವಹಿವಾಟುಗಳ ಕ್ಯಾಬಿನೆಟ್ ಸಮಿತಿ ರಚಿಸಿದೆ. ತುತ್ತು ಅನ್ನಕ್ಕೂ ಪರದಾಡುವ […]