June 2023

ಮೈಮೇಲೆ ಮರ ಬಿದ್ದು ಸುಳ್ಯಪದವು ವಲಯದ ಕಾಂಗ್ರೆಸ್ ಅಧ್ಯಕ್ಷ ಮೃತ್ಯು

ಸಮಗ್ರ ನ್ಯೂಸ್ : ಪಿಕಪ್ ವಾಹನಕ್ಕೆ ಮರ ತುಂಬಿಸುವ ವೇಳೆ ಮರ ಮೈಮೇಲೆ ಬಿದ್ದು ಸುಳ್ಯಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಮೃತಪಟ್ಟಿರುವ ಘಟನೆ ಜೂ.5 ರಂದು ಬೆಳಿಗ್ಗೆ ವರದಿಯಾಗಿದೆ. ಬಡಗನ್ನೂರು ಗ್ರಾಮದ ಬಟ್ಯಂಗಲ ದಿ. ಕೊಲ್ಲಯ್ಯ ಒಕ್ಕಲಿಗರವರ ಪುತ್ರ ಗೋಪಾಲಕೃಷ್ಣ ಮೃತಪಟ್ಟರು. ಮನೆಯ ಜಾಗದಲ್ಲಿ ಮರದ ದಿಮ್ಮಿಯನ್ನು ಪಿಕಪ್ ಗೆ ತುಂಬಿಸುವ ವೇಳೆ ಮರ ಹಿಂದಕ್ಕೆ ಬಂದು ಗೋಪಾಲಕೃಷ್ಣ ರವರ ಮೈಮೇಲೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತರುವ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ […]

ಮೈಮೇಲೆ ಮರ ಬಿದ್ದು ಸುಳ್ಯಪದವು ವಲಯದ ಕಾಂಗ್ರೆಸ್ ಅಧ್ಯಕ್ಷ ಮೃತ್ಯು Read More »

ಕೇರಳಕ್ಕೆ ಪ್ರವೇಶಿಸದ ಮುಂಗಾರು| ಇನ್ನೊಂದು ವಾರ ಮಾನ್ಸೂನ್ ಮಳೆ ವಿಳಂಬ

ಸಮಗ್ರ ನ್ಯೂಸ್: ಮುಂಗಾರು ಮಾರುತಗಳು ಜೂನ್ 4 ರ ನಿನ್ನೆ ಕೇರಳ ಪ್ರವೇಶಿಸಲು ವಿಫಲವಾಗಿದ್ದು, ಇನ್ನೂ 3-4 ದಿನ ತಡವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಾರುತಗಳು ಜೂನ್ 4 ರಂದು ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಮುಂಗಾರು ಮಾರುತಗಳ ಕುರಿತಾಗಿ ಉತ್ತಮ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಮಾರುತ ಚಲನೆ ವೇಗ ಪಡೆದುಕೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಸಮುದ್ರಮಟ್ಟಕ್ಕಿಂತ 2 ಕಿ.

ಕೇರಳಕ್ಕೆ ಪ್ರವೇಶಿಸದ ಮುಂಗಾರು| ಇನ್ನೊಂದು ವಾರ ಮಾನ್ಸೂನ್ ಮಳೆ ವಿಳಂಬ Read More »

ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ ಶ್ವಾನ |ಕನ್ನಡದಲ್ಲಿ ಬರುತ್ತಿದೆ ಶ್ವಾನದ ಪ್ರೀತಿ ಕಥೆ

ಸಮಗ್ರ ಸಿನಿಮಾ: ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಯಾವ ಮೋಹನ ಮುರಳಿ ಕರೆಯಿತು’ ಎಂಬ ಹಾಡು ಬಹಳ ಜನಪ್ರಿಯ. ಈಗ ಈ ಹಾಡಿನ ಮೊದಲ ಸಾಲು ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚಿಗೆ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಯಾವ ಮೋಹನ ಮುರಳಿ ಕರೆಯಿತು ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರ. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ. ಭರವಸೆಯ ಹುಡುಕಾಟದಲ್ಲಿರುವ ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ

ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ ಶ್ವಾನ |ಕನ್ನಡದಲ್ಲಿ ಬರುತ್ತಿದೆ ಶ್ವಾನದ ಪ್ರೀತಿ ಕಥೆ Read More »

4 ಮಕ್ಕಳನ್ನು ಕ್ರೂರವಾಗಿ ಕೊಂದ ತಾಯಿ ನೇಣಿಗೆ ಶರಣು

ಸಮಗ್ರ ನ್ಯೂಸ್: ಮಹಿಳೆಯೊಬ್ಬಳು ತನ್ನ 4 ಮಕ್ಕಳನ್ನು ಡ್ರಮ್‌ನಲ್ಲಿ ಕೂಡಿ ಹಾಕಿ ಕೊಂದ ಬಳಿಕ ತಾನೂ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜೇಥರಾಮ್ ಎಂಬವರ ಪತ್ನಿ ಊರ್ಮಿಳಾ ಶನಿವಾರ ತನ್ನ 4 ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ತನ್ನ ಮಕ್ಕಳಾದ ಭಾವನಾ (8), ವಿಕ್ರಮ್ (5), ವಿಮಲಾ (3), ಮತ್ತು ಮನಿಶಾ (2) ರನ್ನು ಧಾನ್ಯದ ಡ್ರಮ್‌ನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾಳೆ. ಬಳಿಕ ಮನೆಯೊಳಗೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸಂಜೆಯವರೆಗೂ ಮಕ್ಕಳು

4 ಮಕ್ಕಳನ್ನು ಕ್ರೂರವಾಗಿ ಕೊಂದ ತಾಯಿ ನೇಣಿಗೆ ಶರಣು Read More »

ಮಂಗಳೂರು: SSF ಮಂಚಿಲ ಯುನಿಟ್ ನಿಂದ ‘ಪರಿಸರ ದಿನ ಆಚರಣೆ’

ಸಮಗ್ರ ನ್ಯೂಸ್: SSF ಮಂಚಿಲ ಯುನಿಟ್ ವತಿಯಿಂದ ‘ಪರಿಸರ ದಿನ’ ಕಾರ್ಯಕ್ರಮವನ್ನು ಮಂಚಿಲ ಮದ್ರಸ ಹಾಲ್ ನಲ್ಲಿ ಜೂನ್ 04 ರಂದು ಏರ್ಪಡಿಲಾಗಿತ್ತು. ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷರು ಜಾಫರ್ ಯು.ಎಸ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸಿನನ್ ಮಿಸ್ಬಾಹಿ ಮುಅಝಿನ್ ಉಸ್ತಾದರು ಉದ್ಘಾಟಿಸಿದರು. ಶಾಹಿಲ್ ಮಂಚಿಲ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಅಯ್ಯುಬ್ ಮಂಚಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಸುಹಾನ್ ಅಲ್ವಾರವರು ದೇನಿಗೆಯಾಗಿ ನೀಡಿದ ಸಸಿಗಳನ್ನು SSF ಮಂಚಿಲ ಯೂನಿಟ್ ವತಿಯಿಂದ ವಿತರಿಸಲಾಯಿತು ಹಾಗೂ

ಮಂಗಳೂರು: SSF ಮಂಚಿಲ ಯುನಿಟ್ ನಿಂದ ‘ಪರಿಸರ ದಿನ ಆಚರಣೆ’ Read More »

ಪುತ್ತೂರು: ಕೇರಳದ ಕೊಲೆ ಆರೋಪಿಯ ಬಂಧಿಸಿದ ಕರ್ನಾಟಕ ಪೊಲೀಸ್

ಸಮಗ್ರ ನ್ಯೂಸ್: ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನ ವೇಳೆ ತಮ್ಮನನ್ನು ಕೊಲೆ ಮಾಡಿ ಪುತ್ತೂರು ಕಡೆಗೆ ತಪ್ಪಿಸಿಕೊಳ್ಳಲು ತೆರಳಿದ್ದ ಆರೋಪಿ ಅಣ್ಣನನ್ನು ಪುತ್ತೂರು ನಗರ ಠಾಣೆ ಪೊಲೀಸರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಪತ್ತೆ ಮಾಡಿ ಬಂಧಿಸಿದ್ದಾರೆ. ಬಳಿಕ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆಯ ನಿವಾಸಿ ಜಯರಾಮ ನೋಂಡ ಬಂಧಿತ ಆರೋಪಿ. ಜಯರಾಮ ನೋಂಡ ತನ್ನ ಸಹೋದರ ಪ್ರಭಾಕರ ನೋಂಡ ಅವರನ್ನು ಶನಿವಾರ ನಸುಕಿನ ವೇಳೆ ಕೊಲೆ

ಪುತ್ತೂರು: ಕೇರಳದ ಕೊಲೆ ಆರೋಪಿಯ ಬಂಧಿಸಿದ ಕರ್ನಾಟಕ ಪೊಲೀಸ್ Read More »

ಮಾತು ತಪ್ಪಿದ ಸಿಎಂ ಸಿದ್ದು| ಝೀರೋ ಟ್ರಾಫಿಕ್ ಬೇಡವೆಂದು ಸದ್ದಿಲ್ಲದೆ ಪ್ರಯಾಣ

ಸಮಗ್ರ ನ್ಯೂಸ್: ಕರ್ನಾಟಕದ ನೂತನ ಸಿಎಂ ಆಗಿ ಆಯ್ಕೆಯಾದ ತಕ್ಷಣ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಚಾರಕ್ಕೆ ಜೀರೊ ಟ್ರಾಫಿಕ್​ ಬೇಡ ಎಂದು ಹೇಳಿದ್ದರು. ಈ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ, ಶನಿವಾರ ಸಂಜೆ ಏಕಾಏಕಿ ಮಾತು ಮರೆತ ಸಿದ್ದರಾಮಯ್ಯ ಅವರು ಸದ್ದಿಲ್ಲದೆ ಜೀರೋ ಟ್ರಾಫಿಕ್ ಬಳಸಿಕೊಂಡು ಬೆಂಗಳೂರಿನ ಸೌತ್​ ಎಂಡ್ ಸರ್ಕಲ್​ನಿಂದ ಲಾಲ್​ಬಾಗ್ ವೆಸ್ಟ್​​ಗೇಟ್​ ತನಕ ಪ್ರಯಾಣ ಮಾಡಿರುವುದು ವರದಿಯಾಗಿದೆ. ಸಿದ್ದರಾಮಯ್ಯ ಅವರಿಗೆ ಜೀರೋ ಟ್ರಾಫಿಕ್​ ವ್ಯವಸ್ಥೆ ಕಲ್ಪಿಸಿರುವ ಮಾಹಿತಿಯನ್ನು ನಗರ ಪೊಲೀಸರು

ಮಾತು ತಪ್ಪಿದ ಸಿಎಂ ಸಿದ್ದು| ಝೀರೋ ಟ್ರಾಫಿಕ್ ಬೇಡವೆಂದು ಸದ್ದಿಲ್ಲದೆ ಪ್ರಯಾಣ Read More »

ತರೀಕೆರೆ:ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಕಗ್ಗೊಲೆ| ಕ್ಷುಲ್ಲಕ ಕಾರಣಕ್ಕೆ ಡ್ರ್ಯಾಗರ್ ನಿಂದ ಇರಿದ ಕೊಲೆಗಾರ

ಸಮಗ್ರ ನ್ಯೂಸ್: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಕೊಲೆ ಚಾಕು ಇರಿದು ವ್ಯಕ್ತಿ ಕೊಲೆಮಾಡಿದ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ವರುಣ್(28) ಮೃತ ಯುವಕ. ತರೀಕೆರೆ ಶಾಸಕ ಶ್ರೀನಿವಾಸ್​ಗೆ ಅಭಿಮಾನಿಗಳು ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಈ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರದಲ್ಲಿ ಕಬಾಬ್ ಮೂರ್ತಿ ಹಾಗೂ ವರುಣ್ ಎಂಬುವವರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳು ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಕಬಾಬ್ ಮೂರ್ತಿ ವರುಣ್​ಗೆ

ತರೀಕೆರೆ:ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಕಗ್ಗೊಲೆ| ಕ್ಷುಲ್ಲಕ ಕಾರಣಕ್ಕೆ ಡ್ರ್ಯಾಗರ್ ನಿಂದ ಇರಿದ ಕೊಲೆಗಾರ Read More »

ಇಂದು ಕೇರಳಕ್ಕೆ ಮುಂಗಾರು ಪ್ರವೇಶ| ರಾಜ್ಯದ ಹಲವೆಡೆ ಜೂ.6 ರವರೆಗೆ ಮಳೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಜೂನ್ 6ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 6 ವರೆಗೆ ಬೆಂಗಳೂರಿನಲ್ಲಿ ಗುಡುಗು , ಬಿರುಗಾಳಿ ಸಹಿತ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಹಗಲಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ದಕ್ಷಿಣ ಒಳ ಕರ್ನಾಟಕ, ಉತ್ತರಒಳ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಭಾಗಗಳಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ವರ್ಷ ನೈಋತ್ಯ ಮುಂಗಾರು ವಿಳಂಬವಾಗಲಿದ್ದು, ಜೂನ್ 4 ರಂದು ಇಂದು ಕೇರಳಕ್ಕೆ ಪ್ರವೇಶಿಸಲಿದೆ ಎನ್ನಲಾಗಿದ್ದು,

ಇಂದು ಕೇರಳಕ್ಕೆ ಮುಂಗಾರು ಪ್ರವೇಶ| ರಾಜ್ಯದ ಹಲವೆಡೆ ಜೂ.6 ರವರೆಗೆ ಮಳೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್:ರಾಶಿಯ ಮೇಲೆ ನಗ್ರಹಗಳ ಸ್ಥಾನವು ತುಂಬಾನೇ ಪ್ರಭಾವಬೀರಲಿದೆ, ಜ್ಯೋತಿಷ್ಯ ಶಾಸ್ತ್ರ ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ಭವಿಷ್ಯ ಹೇಳಿದ್ದು, ಜೂನ್ 4-ಜೂನ್ 10ರವರೆಗೆ ದ್ವಾದಶ ರಾಶಿಗಳ ರಾಶಿಫಲ ನೀಡಲಾಗಿದೆ. ಅದರ ಪ್ರಕಾರ ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ, ಇಲ್ಲಿದೆ ನೋಡಿ.. ಮೇಷ ರಾಶಿ:ಈ ವಾರ ನೀವು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಿ. ವಿಶೇಷವಾಗಿ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಬೇಡ. ಹೆಚ್ಚುತ್ತಿರುವ ಕೆಲಸದ ಹೊರೆಯು ನಿಮಗೆ ತುಂಬಾ ಆಯಾಸವನ್ನುಂಟು ಮಾಡುತ್ತದೆ.

ದ್ವಾದಶ ರಾಶಿಗಳ ವಾರಭವಿಷ್ಯ Read More »