June 2023

ಬೆಳ್ತಂಗಡಿ: ಬರ್ತ್ ಡೇ ದಿನವೇ ಅಪಘಾತಕ್ಕೆ ಯುವಕ ಬಲಿ| ದೇವಸ್ಥಾನಕ್ಕೆ ಹೋಗಿ ಬಂದರೂ ಪಾಶ ಹಾಕಿದ ಯಮ!!

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಗರ್ಡಾಡಿ ಗ್ರಾಮದ ನಂದಿಬೆಟ್ಟ ಸಮೀಪ ಸಂಭವಿಸಿದೆ. ಮೃತ ಯುವಕ ಓಡೀಲು ನಿವಾಸಿಯಾಗಿರುವ ದೀಕ್ಷಿತ್ ಎಂದು ಗುರುತಿಸಲಾಗಿದೆ. ಇಂದು ದೀಕ್ಷಿತ್ ನ ಹುಟ್ಟುಹಬ್ಬವಾಗಿದ್ದು ಈ ಹಿನ್ನಲೆಯಲ್ಲಿ ಬೆಳಿಗ್ಗೆ ವೇಣೂರಿನ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ: ಬರ್ತ್ ಡೇ ದಿನವೇ ಅಪಘಾತಕ್ಕೆ ಯುವಕ ಬಲಿ| ದೇವಸ್ಥಾನಕ್ಕೆ ಹೋಗಿ ಬಂದರೂ ಪಾಶ ಹಾಕಿದ ಯಮ!! Read More »

ಅಪ್ಪನಿಂದಲೇ ಅಧಿಕಾರ ಸ್ವೀಕರಿಸಿದ ಮಗಳು| ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಅಪರೂಪದ ಘಟನೆ

ಸಮಗ್ರ ನ್ಯೂಸ್: ಅಪ್ಪನಿಂದಲೇ ಮಗಳು ಪೋಲಿಸ್‌ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿರುವ ಅಪರೂಪದ ಘಟನೆ ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಬಿ‌.ಎಸ್.ವೆಂಕಟೇಶ್ ಎನ್ನುವವರ ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ, ಇದೇ ವೇಳೇ ಅವರು ವರ್ಗಾವಣೆಯಾದ ಜಾಗಕ್ಕೆ ಅವರ ಮಗಳಾದ ಬಿ.ವಿ.ವರ್ಷಾಅವರು ನೂತನ ಎಸ್‌ಐ ಆಗಿ ಬಂದಿದ್ದಾರೆ. ಈ ನಡುವೆ ಬಿ.ವಿ.ವರ್ಷಾ ಅವರು ತಮ್ಮ ತಂದೆಯಿಂದ ಅಧಿಕಾರ ಸ್ವೀಕಾರ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. 2022ರ ಬ್ಯಾಚ್‌ನಲ್ಲಿ ಪಿಎಸ್‌ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ

ಅಪ್ಪನಿಂದಲೇ ಅಧಿಕಾರ ಸ್ವೀಕರಿಸಿದ ಮಗಳು| ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಅಪರೂಪದ ಘಟನೆ Read More »

ಪುತ್ತೂರು:ಹೆರಿಗೆ ವೇಳೆ ತೀವ್ರ ರಕ್ತಸ್ರಾವ|ಆಶಾ ಕಾರ್ಯಕರ್ತೆ ಮೃತ್ಯು

ಸಮಗ್ರ ನ್ಯೂಸ್: ಹೆರಿಗೆ ವೇಳೆ ತೀವ್ರ ರಕ್ತಸ್ರಾವಗೊಂಡ ಹಿನ್ನೆಲೆ ಬೆಳ್ತಂಗಡಿಯ ಕರಾಯ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಆಶಾ ಕಾರ್ಯಕರ್ತೆ ಭವ್ಯ (29) ಹೆರಿಗೆಗಾಗಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ಈ ವೇಳೆ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು ತಕ್ಷಣ ಪುತ್ತೂರಿನ ಆಸ್ಪತ್ರೆಯಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಜೂ. 21ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಹಸುಗೂಸು ಗಂಡು ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ. ಮೃತರು ಪತಿ

ಪುತ್ತೂರು:ಹೆರಿಗೆ ವೇಳೆ ತೀವ್ರ ರಕ್ತಸ್ರಾವ|ಆಶಾ ಕಾರ್ಯಕರ್ತೆ ಮೃತ್ಯು Read More »

ಸುಳ್ಯದಲ್ಲಿ ಸೇವಾಭಾರತಿ ಹೆಲ್ಪ್ ಲೈನ್ ಆಂಬ್ಯುಲೆನ್ಸ್ ಲೋಕಾರ್ಪಣೆ

ಸಮಗ್ರ ನ್ಯೂಸ್: ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ (ರಿ.) ಇದರ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಇಂದು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದೆ. ಮಾಜಿ ಸಚಿವ ಎಸ್.ಅಂಗಾರ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸೇವೆ ಮಾಡುವುದು ಬದುಕಿನ ಪುಣ್ಯದ ಕಾರ್ಯ. ಇಂದು ಹಲವು ಎನ್.ಜಿ.ಒ.ಗಳು ಕೂಡ ಸೇವೆಯನ್ನು ಮಾಡುತ್ತದೆ. ಆದರೆ ಅವು ಅಪೇಕ್ಷೆಯನ್ನು ಇಟ್ಟುಕೊಂಡು ಸೇವೆ ಮಾಡುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ನಿಜವಾದ ಸೇವೆ ಎಂದರು.

ಸುಳ್ಯದಲ್ಲಿ ಸೇವಾಭಾರತಿ ಹೆಲ್ಪ್ ಲೈನ್ ಆಂಬ್ಯುಲೆನ್ಸ್ ಲೋಕಾರ್ಪಣೆ Read More »

ಸಿಎಂ ಪತ್ನಿ‌ ಪಾರ್ವತಿ ಅಸ್ವಸ್ಥ| ಮಣಿಪಾಲ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಪಾರ್ವತಿ ಅವರು ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 9.50 ಕ್ಕೆ ದೆಹಲಿಗೆ ತೆರಳಬೇಕಿತ್ತು. ಆದರೆ ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುವ ಮುನ್ನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪತ್ನಿ ಆರೋಗ್ಯ ವಿಚಾರಿಸಲಿದ್ದಾರೆ. ಬಳಿಕ

ಸಿಎಂ ಪತ್ನಿ‌ ಪಾರ್ವತಿ ಅಸ್ವಸ್ಥ| ಮಣಿಪಾಲ ಆಸ್ಪತ್ರೆಗೆ ದಾಖಲು Read More »

ಚಿಕ್ಕಮಗಳೂರು : ಲಾರಿ ಹಾಗೂ ಬೈಕ್ ಅಫಘಾತ| ಇಬ್ಬರ ಸಾವು

ಸಮಗ್ರ ನ್ಯೂಸ್ : ಲಾರಿ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಇಬ್ಬರ ಸಾವನಪ್ಪಿದ ಘಟನೆ ತರೀಕೆರೆ ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಸಂಭವಿಸಿದೆ. ತರೀಕೆರೆ ತಾಲೂಕಿನ ಬೇಲೇನಹಳ್ಳಿ ನಿವಾಸಿ ವಿಶ್ವಾಸ್ (24) ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ದೀಪಿಕಾ (22) ಮೃತರು.

ಚಿಕ್ಕಮಗಳೂರು : ಲಾರಿ ಹಾಗೂ ಬೈಕ್ ಅಫಘಾತ| ಇಬ್ಬರ ಸಾವು Read More »

ಆಶ್ರಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮಿಸ್ವಾಮಿ| ಆರೋಪಿಯ ಬಂಧನ

ಸಮಗ್ರ ನ್ಯೂಸ್: ತಾನು ನಡೆಸುತ್ತಿದ್ದ ಆಶ್ರಮದಲ್ಲಿ ಹಲವು ತಿಂಗಳುಗಳ ಕಾಲ ಅನಾಥ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಂಧ್ರಪ್ರದೇಶದ ದಾರ್ಶನಿಕನೊಬ್ಬನನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ವಿಶಾಖಪಟ್ಟಣಂನ ವೆಂಕೋಜಿಯಲ್ಲಿರುವ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಪೂರ್ಣಾನಂದ ಸರಸ್ವತಿ ಅವರನ್ನು ವಿಜಯವಾಡದಲ್ಲಿ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ಪೋಲೀಸರ ಪ್ರಕಾರ, ಪೂರ್ಣಾನಂದ ಸರಸ್ವತಿ ತನ್ನನ್ನು ಪದೇ ಪದೇ ಹಿಂಸಿಸುತ್ತಿದ್ದರು. ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಶ್ರಮದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಬಾಲಕಿ

ಆಶ್ರಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮಿಸ್ವಾಮಿ| ಆರೋಪಿಯ ಬಂಧನ Read More »

ಅಕ್ಕಿಗಾಗಿ ಹಕ್ಕಿನ ಹೋರಾಟ| ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೃಹನ್ನಾಟಕ‌!! ವಿವೇಕಾನಂದ ಎಚ್.ಕೆ

ಸಮಗ್ರ ವಿಶೇಷ: ರೈತರು ಕಷ್ಟ ಪಟ್ಟು ಬೆಳೆದ – ಉಗ್ರಾಣದಲ್ಲಿ ಇರುವ ಅಕ್ಕಿಯನ್ನು ಸಾರ್ವಜನಿಕರ ಮತಗಳಿಂದ ಗೆದ್ದು, ಸಾರ್ವಜನಿಕರ ತೆರಿಗೆ ಹಣದಿಂದಲೇ ಬದುಕುತ್ತಿರುವ ಎರಡು ಸರ್ಕಾರಗಳಿಗೆ ಹಂಚಿಕೊಂಡು ತಿನ್ನಲು‌ ಸಾಧ್ಯವಾಗದೆ ಬೀದಿಯಲ್ಲಿ ಜಗಳವಾಡುವ ಮಟ್ಟಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದುರ್ಗತಿ ಬಂತೇ ಅಥವಾ ತಂದರೇ? ಕರ್ನಾಟಕ ಸರ್ಕಾರ ಕಾಂಗ್ರೇಸ್ ಪಕ್ಷದ ಮತ್ತು ಸಿದ್ದರಾಮಯ್ಯನವರ ಸ್ವಂತ ಆಸ್ತಿಯಲ್ಲ ಹಾಗೆಯೇ ಕೇಂದ್ರ ಸರ್ಕಾರ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಸ್ವಂತ ಆಸ್ತಿಯಲ್ಲ. ಒಂದು ಸ್ಪಷ್ಟ ಮತ್ತು ಅತ್ಯುತ್ತಮ ಸಂವಿಧಾನದ ಅಡಿಯಲ್ಲಿ

ಅಕ್ಕಿಗಾಗಿ ಹಕ್ಕಿನ ಹೋರಾಟ| ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೃಹನ್ನಾಟಕ‌!! ವಿವೇಕಾನಂದ ಎಚ್.ಕೆ Read More »

ಚುರುಕುಗೊಂಡ ಮುಂಗಾರು| ಒಂದು ವಾರ ಕರಾವಳಿ ಮತ್ತು ರಾಜ್ಯಾದ್ಯಂತ ಭಾರೀ ಮಳೆ ಸಂಭವ|

ಸಮಗ್ರ ನ್ಯೂಸ್: ಮುಂದಿನ ಒಂದು ವಾರ ಬೆಂಗಳೂರು ಹಾಗೂ ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಇತರೆ ಜಿಲ್ಲೆಗಳ ಕೆಲವು ಕಡೆಗಳಲ್ಲಿ ವರುಣ ಅಬ್ಬರಿಸುವ ಸಾಧ್ಯತೆ ಇದೆ. ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಮಂಡ್ಯ, ದಕ್ಷಿಣ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳಲ್ಲಿ ನೆರೆಯ ತಮಿಳುನಾಡಿನ ಚೆನ್ನೈ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಹಿನ್ನೆ ತಮಿಳುನಾಡಿನ ಹಲವೆಡೆ

ಚುರುಕುಗೊಂಡ ಮುಂಗಾರು| ಒಂದು ವಾರ ಕರಾವಳಿ ಮತ್ತು ರಾಜ್ಯಾದ್ಯಂತ ಭಾರೀ ಮಳೆ ಸಂಭವ| Read More »

ಸುಬ್ರಹ್ಮಣ್ಯ ಡಾ. ತ್ರಿಮೂರ್ತಿ ಅವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ.) ದೊಡ್ಡಬಳ್ಳಾಪುರ, ಬೆಂಗಳೂರು ವತಿಯಿಂದ ನೀಡುವ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಅವರು ಆಯ್ಕೆಯಾಗಿದ್ದಾರೆ. ಜೂನ್ 25ರಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದ್ದಾರೆ.

ಸುಬ್ರಹ್ಮಣ್ಯ ಡಾ. ತ್ರಿಮೂರ್ತಿ ಅವರಿಗೆ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ Read More »