ಸಮಗ್ರ ನ್ಯೂಸ್: ಒಂದು ಕೋಟಿ ರೂಪಾಯಿ ಕೊಡುತ್ತೇನೆ ಎಂದರೂ ಕುರಿಮರಿ ಮಾರಲು ಕುರಿಗಾಹಿಯೊಬ್ಬರು ನಿರಾಕರಿಸಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದ್ದು, ಈ ಸುದ್ದಿ ಇದೀಗ ವೈರಲ್ ಆಗಿದೆ.
ಬಕ್ರೀದ್ ಹಬ್ಬದ ಪ್ರಯುಕ್ತ ಕುರಿ ಖರೀದಿಸಲು ಹೋಗಿದ್ದ ಮುಸ್ಲಿಮ್ ಸಮುದಾಯದವರು ಕುರಿಮರಿಯ ಹೊಟ್ಟೆಯ ಮೇಲೆ 786 ಸಂಖ್ಯೆ ಕಂಡು ಅಚ್ಚರಿಪಟ್ಟಿದ್ದು, ಈ ಕುರಿಮರಿ ಖರೀದಿಸಲು ಮುಗಿಬಿದ್ದಿದ್ದಾರೆ.
ಕುರಿಮರಿಯ ಹೊಟ್ಟೆಯ ಮೇಲೆ ಉರ್ದು ಭಾಷೆಯಲ್ಲಿ 786 ಸಂಖ್ಯೆ ಕಂಡು ಬಂದಿದೆ. ಆದರೆ ಕುರಿಮರಿಯ ಮಾಲೀಕ ರಾಜು ಸಿಂಗ್ ಗೆ ಆ ಸಂಖ್ಯೆಯ ಮಹತ್ವ ತಿಳಿಯದೇ ಕುರಿಮಾರಲು ಬಂದಿದ್ದ. ಆದರೆ 786 ಸಂಖ್ಯೆಯ ಮಹತ್ವ ತಿಳಿಯದೇ ಮುಸ್ಲಿಂ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದಿದ್ದಾನೆ.
ಆಗ ಕುರಿಮರಿಯ ಹೊಟ್ಟೆಯ ಮೇಲೆ ಉರ್ದುವಿನಲ್ಲಿ ಇದ್ದ 786 ಸಂಖ್ಯೆ ಇಸ್ಲಾಂನಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ದೇವರ ಆಶೀರ್ವಾದವನ್ನು ಆಹ್ವಾನಿಸುವ ಮಾರ್ಗವಾಗಿ ಬಳಸಲಾಗುತ್ತದೆ ಎಂದು ತಿಳಿದು ಮಾರಲು ನಿರಾಕರಿಸಿದ್ದಾನೆ.
ಕುರಿಮರಿ ಕಳೆದ ವರ್ಷ ಜನಿಸಿದ್ದು, ಈವರೆಗೆ 70 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಖರೀದಿಗೆ ಆಫರ್‌ಗಳು ಬಂದಿವೆ. ಆದರೆ ಅದು ತನಗೆ ಅತ್ಯಂತ ಪ್ರಿಯವಾದುದೆಂದು ಪರಿಗಣಿಸಿ ಅದನ್ನು ಮಾರಾಟ ಮಾಡದಿರಲು ನಿರ್ಧರಿಸಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.