ಸಮಗ್ರ ನ್ಯೂಸ್: ಅಪ್ಪನಿಂದಲೇ ಮಗಳು ಪೋಲಿಸ್ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿರುವ ಅಪರೂಪದ ಘಟನೆ ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಬಿ.ಎಸ್.ವೆಂಕಟೇಶ್ ಎನ್ನುವವರ ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ, ಇದೇ ವೇಳೇ ಅವರು ವರ್ಗಾವಣೆಯಾದ ಜಾಗಕ್ಕೆ ಅವರ ಮಗಳಾದ ಬಿ.ವಿ.ವರ್ಷಾಅವರು ನೂತನ ಎಸ್ಐ ಆಗಿ ಬಂದಿದ್ದಾರೆ.
ಈ ನಡುವೆ ಬಿ.ವಿ.ವರ್ಷಾ ಅವರು ತಮ್ಮ ತಂದೆಯಿಂದ ಅಧಿಕಾರ ಸ್ವೀಕಾರ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. 2022ರ ಬ್ಯಾಚ್ನಲ್ಲಿ ಪಿಎಸ್ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಈಗ ಮಂಡ್ಯಕ್ಕೆ ಬಂದು ಸೆಂಟ್ರಲ್ ಠಾಣೆ ಎಸ್ ಐ ಆಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.