ಸಮಗ್ರ ನ್ಯೂಸ್: ಒಂಟಿ ಪೋಷಕ ಸರ್ಕಾರಿ ಪುರುಷ ನೌಕರರಿಗೆ ಶಿಶು ಪಾಲನಾ ರಜೆ ಸೌಲಭ್ಯ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಈಗ ಮಹಿಳೆಯರಿಗೆ ಮಾತ್ರವಲ್ಲ, ಇನ್ಮುಂದೆ ಪುರುಷ ನೌಕರರಿಗೆ ರಜೆ ಸೌಲಭ್ಯ ಸಿಗಲಿದೆ.
ಒಂಟಿ ಪೋಷಕರಾಗಿರುವ ಅವಿವಾಹಿತ, ವಿವಾಹ-ವಿಚ್ಛೇದಿತ ಅಥವಾ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ, ಒಟ್ಟು 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದೆ. ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್ ಕೊರಡೆ ಆದೇಶ ಹೊರಡಿಸಿದ್ದಾರೆ.
ಈ ಆದೇಶದಲ್ಲಿ, ಷರತ್ತುಗಳನ್ನ ಸಂದರ್ಭಾನುಸಾರ ಅನ್ವಯಿಸಿಕೊಂಡು ಶಿಶುಪಾಲನಾ ರಜೆಯನ್ನ ಮಂಜೂರು ಮಾಡಬೇಕು. ಇನ್ನು ಶಿಶುಪಾಲನಾ ರಜೆಯನ್ನ ಪಡೆದ ಅವಧಿಯಲ್ಲಿ ಆ ನೌಕರ ವಿವಾಹ ಮಾಡಿಕೊಂಡರೆ, ಆ ದಿನಾಂಕದಿಂದ ಶಿಶುಪಾಲಾ ರಜೆಯನ್ನ ರದ್ದುಗೊಳಿಸಲಾಗುತ್ತದೆ ಎಂದು ಆದೇಶಿಸಲಾಗಿದೆ.