ಸಮಗ್ರ ನ್ಯೂಸ್: ಪ್ರತಿ ವರ್ಷ, ವಿಶ್ವ ಹಾಲಿನ ದಿನವನ್ನು ಜೂನ್ 1 ರಂದು ಆಚರಿಸಲಾಗುತ್ತದೆ. ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಈ ದಿನವನ್ನು ಜಾರಿಗೆ ತಂದಿದೆ. ಇಂದು ವಿಶ್ವ ಹಾಲು ದಿನವನ್ನು ಆಚರಿಸಲು ಹಾಗೂ ಈ ದಿನದ ಮಹತ್ವವನ್ನು ತಿಳಿಯಲು ಇದೊಂದು ಒಳ್ಳೆಯ ಸರಿಯಾದ ಸಂದರ್ಭವಾಗಿದೆ.
ಜೂನ್ 1 ವಿಶ್ವ ಹಾಲು ದಿನ. ಹಾಲಿನ ಉದ್ಯಮವು ನಮ್ಮ ಸ್ವಾಸ್ಥ್ಯಕ್ಕೆ ಕೊಡುಗೆ ನೀಡುವುದಲ್ಲದೆ, ಲಕ್ಷಾಂತರ ಜನರಿಗೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ. ನಾವು ಚಿಕ್ಕವರಿಂದ ದೊಡ್ಡವರಾಗುವ ತನಕ ಹಾಲಿನ ಪ್ರಾಮುಖ್ಯತೆ ಬಗ್ಗೆ ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಆರೋಗ್ಯಕರ ಜೀವನ, ಆಹಾರ ಪದ್ಧತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹಾಲಿನ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಭಾರತವು ಹಾಲು ಉತ್ಪಾದಿಸುವ ಅತಿದೊಡ್ಡ ದೇಶ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಿಶ್ವ ಹಾಲು ದಿನದ ಮಹತ್ವ ವಿಶ್ವ ಹಾಲು ದಿನದಂದು, ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆಯಿಂದ ಜನರಿಗೆ ಆಗುವ ಪ್ರಯೋಜನಗಳನ್ನು ವಿಶ್ವದಾದ್ಯಂತ ಉತ್ತೇಜಿಸಲು ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುತ್ತೆ. ಇದರಲ್ಲಿ ಡೈರಿ ಒಂದು ಶತಕೋಟಿಗೂ ಹೆಚ್ಚು ಜನರ ಜೀವನೋಪಾಯವನ್ನು ಅವಲಂಬಿಸಿದೆ.
ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಡೈರಿ ಕ್ಷೇತ್ರವು ಜಾಗತಿಕ ಆಹಾರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದು ವಿಶ್ವದಾದ್ಯಂತದ ಅನೇಕ ಜನರಿಗೆ ಆರ್ಥಿಕ, ಪೌಷ್ಠಿಕಾಂಶ ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡುತ್ತದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 2001 ರಲ್ಲಿ ಮೊದಲ ಬಾರಿಗೆ ವಿಶ್ವ ಹಾಲು ದಿನ ಆಚರಿಸಿತು. ಜೂನ್ 1 ಅನ್ನು ವಿಶ್ವ ಹಾಲು ದಿನ ಆಯ್ಕೆ ಮಾಡಲಾಗಿದೆ. ಏಕೆಂದರೆ ಆ ಸಮಯದಲ್ಲಿ ಅನೇಕ ದೇಶಗಳು ಈಗಾಗಲೇ ಹಾಲಿನ ದಿನವನ್ನು ಆಚರಿಸುತ್ತಿದ್ದವು. ಹಾಲು ಮತ್ತು ಇತರ ಡೈರಿ ಉತ್ಪನ್ನಗಳ ಪ್ರಯೋಜನಗಳನ್ನು ತಿಳಿಯಲು ಈ ದಿನ ಆಚರಿಸಲಾಗುತ್ತದೆ. ಹಾಲು ಆರೋಗ್ಯಕರ ಪಾನೀಯವಾಗಿದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿವೆ. ಪ್ರಪಂಚದಾದ್ಯಂತ ಹಾಲು ಮತ್ತು ಹಾಲು ಉತ್ಪಾದಿಸುವ ಕೈಗಾರಿಕೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರಚಾರ ಮಾಡಲು ಪ್ರತಿ ವರ್ಷ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ವಿಶ್ವ ಡೈರಿ ದಿನ ಎಂದೂ ಕರೆಯುತ್ತಾರೆ.
ಹಾಲಿನ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳಲು ಮತ್ತು ತಮ್ಮ ದೈನಂದಿನ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇವಿಸುವುದು ಎಷ್ಟು ಮುಖ್ಯ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವು ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ, ಎಫ್‌ಒಒ ದತ್ತಾಂಶದಿಂದ ಹಾಲಿನ ಮಹತ್ವವನ್ನು ಸರಿಯಾಗಿ ಎತ್ತಿ ತೋರಿಸಲಾಗಿದೆ. 1 ಬಿಲಿಯನ್’ಗಿಂತಲೂ ಹೆಚ್ಚು ಜನರ ಜೀವನೋಪಾಯವನ್ನು ಡೈರಿ ವಲಯವು ಬೆಂಬಲಿಸುತ್ತದೆ ಎಂದು ಅದು ಹೇಳುತ್ತದೆ. ಹಾಲು ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳ ಬಗ್ಗೆ ಗಮನ ಸೆಳೆಯಲು ಈ ದಿನವನ್ನು ಆಚರಿಸಲಾಗುತ್ತದೆ. ಡೈರಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ, ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಾದ ಡೈರಿ ಶಿಕ್ಷಣ, ಪಶುವೈದ್ಯಕೀಯ ಔಷಧಗಳು, ಸಂಶೋಧನೆ ಮತ್ತು ಜಾನುವಾರು ಆಹಾರ ಪೂರೈಕೆಯೂ ಪ್ರಯೋಜನ ಪಡೆಯುತ್ತದೆ.