ಸಮಗ್ರ ನ್ಯೂಸ್: ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರೆಸಿರುವ ಭಾರತ 2022-23ನೇ ಸಾಲಿನಲ್ಲಿ ಶೇ.7.2ರಷ್ಟು ಜಿಡಿಪಿ ಪ್ರಗತಿ ದಾಖಲಿಸಿದೆ. ಇದು ಈ ಹಿಂದಿನ ನಿರೀಕ್ಷೆಗಿಂತ ಅಧಿಕ ಮತ್ತು ವಿಶ್ವದ ಎಲ್ಲಾ ಬೆಳವಣಿಗೆ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿದೆ.
2022-23ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಅಂಕಿ ಅಂಶಗಳು ಬುಧವಾರ ಬಿಡುಗಡೆಯಾಗಿದ್ದು ಅದರನ್ವಯ ಕಡೆಯ ತ್ರೈಮಾಸಿಕದಲ್ಲಿ ಶೇ.6.1ರಷ್ಟುಪ್ರಗತಿ ದಾಖಲಾಗಿದೆ. ಕೃಷಿ, ಉತ್ಪಾದನಾ ವಲಯ, ನಿರ್ಮಾಣ, ಸೇವಾ, ಗಣಿಗಾರಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿರುವುದು ಆರ್ಥಿಕತೆಗೆ ಭರ್ಜರಿ ಬಲ ನೀಡಿದೆ.
ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.6.2, ಅಕ್ಟೋಬರ್- ಡಿಸೆಂಬರ್‌ನಲ್ಲಿ ಶೇ.4.5ರಷ್ಟುಪ್ರಗತಿ ದಾಖಲಾಗಿತ್ತು. ಆದರೆ ಕಳೆದ ತ್ರೈಮಾಸಿಕದಲ್ಲಿ ಮತ್ತೆ ಆರ್ಥಿಕತೆ ಚಿಗಿತುಕೊಂಡಿರುವುದು, ಒಟ್ಟಾರೆ ಇಡೀ ವರ್ಷದ ಆರ್ಥಿಕ ಪ್ರಗತಿ ದರ ಶೇ.7.2 ಮುಟ್ಟಲು ನೆರವು ನೀಡಿದೆ.