May 2023

-ಕಾಗವಾಡ: ಅಭ್ಯರ್ಥಿಗಳ‌ ಭವಿಷ್ಯ ಬರೆದ ಮತದಾರ ಪ್ರಭುಗಳು!

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ನಡೆದು ಮುಕ್ತಾಯಗೊಂಡಿದೆ. ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳಿದ್ದು ಒಟ್ಟು 193564 ಮತದಾರನ್ನು ಒಳಗೊಂಡಿದೆ. ಕಾಗವಾಡ ವಿಧಾನಸಭಾ ಮತಕ್ಷೇತ್ರದಿಂದ ಒಟ್ಟು 11 ಜನ ಅಭ್ಯರ್ಥಿಗಳು ಚುನಾವಣಾ ಕಣಕ್ಕೆಳಿದು ಸ್ಪರ್ಧೆಯನ್ನು ಮಾಡಿದ್ದಾರೆ. ಮತಕ್ಷೇತ್ರದ್ಯಾಂತ ಬೆಳಿಗ್ಗೆ 7ರಿಂದ ಸಾಯಂಕಾಲ 6ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು ಸರಾಸರಿ 82.3%ರಷ್ಟು ಮತದಾನಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ಮತಕ್ಷೇತ್ರದಾದ್ಯಂತ ಮೇ 13 ರಂದು ನಡೆಯಲಿರುವ ಮತದಾನದ ಎಣಿಕೆಯಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನ […]

-ಕಾಗವಾಡ: ಅಭ್ಯರ್ಥಿಗಳ‌ ಭವಿಷ್ಯ ಬರೆದ ಮತದಾರ ಪ್ರಭುಗಳು! Read More »

weather report| ಹವಾಮಾನ ವರದಿ| ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಒಳನಾಡಿನ ಹಲವೆಡೆ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕಳೆದೆರಡು ದಿನಗಳಿಂದ ರಾಜ್ಯದ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ವರ್ಷ ಗುಡುಗು ಸಿಡಿಲಿನ ಪ್ರಮಾಣವೂ ಹೆಚ್ಚಿದೆ. ಭಾರಿ ಮಳೆ ಹಾಗೂ ಗುಡುಗು ಸಿಡಿಲಿನ ಪ್ರಭಾವದಿಂದ ಅನಾಹುತಗಳು ನಡೆದಿವೆ. ಮುಂದಿನ 48 ಗಂಟೆಗಳ ಮುನ್ಸೂಚನೆಯಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ವಿವಿಧೆಡೆ ಮೇ14ರವರೆಗೆ ಅಲ್ಲಲ್ಲಿ ಅನಿರೀಕ್ಷಿತ ಮಳೆಯಾಗುವ ಎಚ್ಚರಿಕೆಯನ್ನೂ ನೀಡಿದೆ. ಇದೇ ರೀತಿ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಹವಾಮಾನ ಇಲಾಖೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ

weather report| ಹವಾಮಾನ ವರದಿ| ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಒಳನಾಡಿನ ಹಲವೆಡೆ ಭಾರೀ ಮಳೆ ಸಾಧ್ಯತೆ Read More »

ಚಿಕಿತ್ಸೆಗೆಂದು ಬಂದ ವೈದ್ಯೆಯನ್ನೇ ಇರಿದು ಕೊಲೆಗೈದ ರೋಗಿ

ಸಮಗ್ರ ನ್ಯೂಸ್: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕೌಟುಂಬಿಕ ಘರ್ಷಣೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ಆ ವ್ಯಕ್ತಿ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಳನ್ನೇ ಇರಿದು ಕೊಂದಿದ್ದಾನೆ. ಬುಧವಾರ(ಮೇ.10) ಬೆಳಗ್ಗೆ ಕುಟುಂಬಸ್ಥರು ತನ್ನ ಥಳಿಸಿ ಸಾಯಿಸುತ್ತಿದ್ದಾರೆ, ರಕ್ಷಿಸಿ ಎಂದು ಕೊಟ್ಟಾರಕ್ಕರ ಪೊಲೀಸರಿಗೆ ದೂರವಾಣಿ ಕರೆ ಬಂದಿದೆ. ಅದ್ರಂತೆ, ಪೊಲೀಸರು ಆತನ ಮನೆಗೆ ಹೋಗಿದ್ದು, ಕಲಹದಲ್ಲಿ ಗಾಯಗೊಂಡಿದ್ದ ಸಂದೀಪ್’ನನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ 23 ವರ್ಷದ ವೈದ್ಯೆ

ಚಿಕಿತ್ಸೆಗೆಂದು ಬಂದ ವೈದ್ಯೆಯನ್ನೇ ಇರಿದು ಕೊಲೆಗೈದ ರೋಗಿ Read More »

ಸುಬ್ರಹ್ಮಣ್ಯ: ಈಡೇರದ ಸೇತುವೆ ಭರವಸೆ – ಮತದಾನ ಬಹಿಷ್ಕಾರ|ಶ್ರಮಸೇವೆ ಮಾಡಿ ಪಾಲ ದುರಸ್ತಿ ಮಾಡಿದ ಮತದಾರರು

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರು‌ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಬೇಡಿಕೆ ಈಡೇರಿಸಿದ್ದರೂ, ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೇ, ಹೊಳೆಗೆ ಮರದ ಸಂಕ ನಿರ್ಮಿಸಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ. ಕಡಬ ತಾಲೂಕಿನ ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ, ಮನವಿ ಸಲ್ಲಿಸಿದ್ದರೂ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಇಲ್ಲಿನ ಜನ ಸೇತುವೆ ನಿರ್ಮಿಸದ ಹಿನ್ನಲೆಯಲ್ಲಿ

ಸುಬ್ರಹ್ಮಣ್ಯ: ಈಡೇರದ ಸೇತುವೆ ಭರವಸೆ – ಮತದಾನ ಬಹಿಷ್ಕಾರ|ಶ್ರಮಸೇವೆ ಮಾಡಿ ಪಾಲ ದುರಸ್ತಿ ಮಾಡಿದ ಮತದಾರರು Read More »

ಮಂಗಳೂರು: ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಕಮಕಿ| ಮಿಥುನ್ ರೈ ಕಾರಿಗೆ ಕಲ್ಲೆಸೆತ

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯಲ್ಲಿ ಬುಧವಾರ ಶಾಂತಿಯುತ ಮತದಾನ ಪ್ರಕ್ರಿಯೆ ನಡೆದರೂ ಆ ಬಳಿಕ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯ ಸರಕಾರಿ ಹಿ.ಪ್ರಾ.ಶಾಲೆಯ ಮತಗಟ್ಟೆಯ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯ ಕಾರಿಗೆ ಕಲ್ಲೆಸೆದು ಹಾನಿ ಎಸಗಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿಪಿ ಅಂಶುಕುಮಾರ್‌ರ ವಾಹನಕ್ಕೂ ಕಲ್ಲೆಸೆದ ಪರಿಣಾಮ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅದಲ್ಲದೆ ಇಬ್ಬರು ಮಹಿಳೆಯರಿಗೆ ಗಾಯವಾಗಿದೆ

ಮಂಗಳೂರು: ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಚಕಮಕಿ| ಮಿಥುನ್ ರೈ ಕಾರಿಗೆ ಕಲ್ಲೆಸೆತ Read More »

ಚುನಾವಣೋತ್ತರ ಸಮೀಕ್ಷೆ| ಅತಂತ್ರ ವಿಧಾನಸಭೆ; ಅತೀದೊಡ್ಡ ಪಕ್ಷವಾಗಿ ಕಾಂಗ್ರೆಸ್

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಗೆ ಇಂದು ನಡೆದ ಮತದಾನದ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲಿದೆ ಎಂದು ಹೇಳುತ್ತಿವೆ. ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ. ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಸಮೀಕ್ಷೆಗಳ ಆಧಾರದ ಮೇಲೆ ಹೇಳೋದಾದರೆ ಯಾರೇ ಅಧಿಕಾರ ಹಿಡಿಯಬೇಕಾದರೆ ಜೆಡಿಎಸ್‌ ಬೆಂಬಲ ಬೇಕೇಬೇಕಾಗುತ್ತದೆ. ಚುನಾವಣೋತ್ತರ ಸಮೀಕ್ಷೆ:ಸಿ ವೋಟರ್‌ಕಾಂಗ್ರೆಸ್‌ – 100-112ಬಿಜೆಪಿ – 83-95ಜೆಡಿಎಸ್‌ – 21-29ಇತರೆ – 02-06 ಪೋಲ್‌

ಚುನಾವಣೋತ್ತರ ಸಮೀಕ್ಷೆ| ಅತಂತ್ರ ವಿಧಾನಸಭೆ; ಅತೀದೊಡ್ಡ ಪಕ್ಷವಾಗಿ ಕಾಂಗ್ರೆಸ್ Read More »

ಮತಗಟ್ಟೆ ಆವರಣದಲ್ಲೇ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ನಿಮಿತ್ತ ಮತದಾನ ಮಾಡಲು ಬಂದಿದ್ದ ಗರ್ಭಿಣಿಯೊಬ್ಬರು ಮತಗಟ್ಟೆ ಆವರಣದಲ್ಲೇ ಮಗುವಿಗೆ ಜನ್ಮನೀಡಿದ ಘಟನೆ ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228 ರಲ್ಲಿ ಈ ಘಟನೆ ನಡೆದಿದ್ದು, ಮಣಿಲಾ ಎನ್ನುವವರೇ ಮಗುವಿಗೆ ಜನ್ಮನೀಡಿದ ಮಹಿಳೆಯಾಗಿದ್ದಾಳೆ. ಗರ್ಭಿಣಿ ಮಣಿಲಾ ಅವರು ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದಿದ್ದಾರೆ. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಪಕ್ಕದಲ್ಲೇ ಇದ್ದ ಕೊಠಡಿಗೆ ಕರೆದುಕೊಂಡು

ಮತಗಟ್ಟೆ ಆವರಣದಲ್ಲೇ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ Read More »

ಗೆಲುವಿಗಾಗಿ ಗ್ಯಾಸ್ ಸಿಲಿಂಡರ್ ಮೊರೆಹೋದ ಡಿಕೆಶಿ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲ ಪಕ್ಷಗಳವರೂ ಸಾಧ್ಯವಿರುವ ಎಲ್ಲ ತಂತ್ರಗಳನ್ನು ಮಾಡುತ್ತಿದ್ದು, ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಮೊರೆ ಹೋಗಿದ್ದಾರೆ. 2014ರ ಚುನಾವಣೆ ಸಮಯದಲ್ಲಿ ಗ್ಯಾಸ್ ಸಿಲಿಂಡರ್​ಗೆ ಕೈ ಮುಗಿದಿದ್ದ ನರೇಂದ್ರ ಮೋದಿ, ಗ್ಯಾಸ್ ಬೆಲೆ ಏರಿಕೆಯನ್ನು ನೆನಪಿಸಿ ಮತವನ್ನು ಯಾಚಿಸಿದ್ದರು. ಇದೇ ತಂತ್ರಗಾರಿಕೆಯನ್ನು ಬಳಸಿಕೊಂಡು ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್​, ಗ್ಯಾಸ್ ಸಿಲಿಂಡರ್​ಗೆ ಹೂ ಹಾರ ಹಾಕಿ ಪೂಜೆ ಮಾಡಿದ್ದಾರೆ. ಗ್ಯಾಸ್ ಸಿಲಿಂಡರ್​​ಗೆ ಗಂಧದಕಡ್ಡಿ ಬೆಳಗಿ, ಮಂಗಳಾರತಿ

ಗೆಲುವಿಗಾಗಿ ಗ್ಯಾಸ್ ಸಿಲಿಂಡರ್ ಮೊರೆಹೋದ ಡಿಕೆಶಿ Read More »

ಉಡುಪಿ: ಮತ ಚಲಾಯಿಸಿ ಕಲ್ಯಾಣ ಮಂಟಪಕ್ಕೆ ತೆರಳಿದ ನವ ವಧು

ಸಮಗ್ರ ನ್ಯೂಸ್: ಮದುವೆಗೂ ಮುನ್ನ ಮತ ಗಟ್ಟೆಗೆ ಬಂದು ವಧುವೊಬ್ಬರು ಮತದಾನ ಮಾಡಿದ್ದಾರೆ. ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ನ ಅವರಾಲು ಮಟ್ಟು ಮತಗಟ್ಟೆಯಲ್ಲಿ ನವ ವಧು ಮೆಲಿಟಾ ಸುವಾರಿಸ್ ಮತ ಚಲಾಯಿಸಿ ಯುವ ಮತದಾರರಿಗೆ ಮಾದರಿಯಾಗಿದ್ದಾರೆ. ನವ ವಧು ಮೆಲಿಟಾ ಸುವಾರಿಸ್ ಮತ ಚಲಾಯಿಸಿ ನಂತರ ಚರ್ಚ್ ಗೆ ತೆರಳಿದ್ದಾರೆ. ಇನ್ನು ರಾಜ್ಯಾದ್ಯಂತ ಇಂದು ಬೆಳ್ಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡು ಸಂಜೆ 6 ಗಂಟೆಯ ವರೆಗೆ ನಡೆಯಲಿದ್ದು, ಫಲಿತಾಂಶವು ಮೇ 13 ರಂದು

ಉಡುಪಿ: ಮತ ಚಲಾಯಿಸಿ ಕಲ್ಯಾಣ ಮಂಟಪಕ್ಕೆ ತೆರಳಿದ ನವ ವಧು Read More »

ಎಣ್ಣೆ ಹೊಡೆದು ಬಂದ ಚುನಾವಣಾ ಸಿಬ್ಬಂದಿ ಸಸ್ಪೆಂಡ್

ಸಮಗ್ರ ನ್ಯೂಸ್: ಚುನಾವಣಾ ಕರ್ತವ್ಯಕ್ಕೆ ಕುಡಿದು ಬಂದಿದ್ದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಅಮಾನತುಗೊಂಡವರನ್ನು ಮಾಲತೇಶ್ ಹಾಗು ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ತೋಟಗಾರಿಕೆ ಇಲಾಖೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಮಾಲತೇಶ್ ಶಿಕ್ಷಕ ಎನ್ನಲಾಗಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್‌ ನಲ್ಲಿ ಇಬ್ಬರೂ ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದನ್ನು ಗಮನಿಸಿದ ಚುನಾವಣಾ ಅಧಿಕಾರಿ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ತಪಾಸಣೆಗೆ ಒಳಪಡಿಸಿದ ಬಳಿಕ ಇವರಿಬ್ಬರೂ ಪಾನಮತ್ತರಾಗಿರುವುದು ಸಾಬೀತಾಗಿದೆ. ಹೀಗಾಗಿ ಇಬ್ಬರನ್ನೂ ಅಮಾನತು ಮಾಡುವಂತೆ

ಎಣ್ಣೆ ಹೊಡೆದು ಬಂದ ಚುನಾವಣಾ ಸಿಬ್ಬಂದಿ ಸಸ್ಪೆಂಡ್ Read More »